Cheaper Gold: ಚಿನ್ನ ಪ್ರಿಯರಿಗೆ ಸಿಹಿ ಸುದ್ದಿ! ಇಲ್ಲಿ ಭಾರತಕ್ಕಿಂತಲೂ ಅತೀ ಕಡಿಮೆ ಬೆಲೆಯಲ್ಲಿ ಸಿಗುತ್ತೆ ಚಿನ್ನ!! ಖರೀದಿಗೆ ಜನ ಮುಗಿ ಬೀಳೋದಂತೂ ಪಕ್ಕಾ!!!

Latest news Cheaper Gold Here gold is available at a much lower price than in India

Cheaper Gold: ಆಭರಣ ಪ್ರಿಯರಿಗೆ ಸಿಹಿ ಸುದ್ದಿ ಇಲ್ಲಿದೆ. ಇಲ್ಲಿ ಭಾರತಕ್ಕಿಂತಲೂ ಅತೀ ಕಡಿಮೆ ಬೆಲೆಗೆ ಚಿನ್ನ ಸಿಗುತ್ತದೆ. ಎಲ್ಲಿ ಗೊತ್ತಾ? ಭೂತಾನ್​ನಲ್ಲಿ. ಭೂತಾನ್ ವಿಶ್ವದಲ್ಲಿ ಅತ್ಯಂತ ಕಡಿಮೆ ಬೆಲೆಗೆ ಚಿನ್ನ (Cheaper Gold) ಸಿಗುವ ದೇಶಗಳಲ್ಲಿ ಒಂದು. ಭೂತಾನ್​ನ ಕೆಲ ನಿರ್ದಿಷ್ಟ ನಗರಗಳಲ್ಲಿ ಪ್ರವಾಸಿಗರಿಗೆಂದು ಡ್ಯೂಟಿ ಫ್ರೀ ಚಿನ್ನವನ್ನು (Tax Free Gold) ಮಾರಲಾಗುತ್ತದೆ‌. ನೀವು ಇಲ್ಲಿ ಯಾವುದೇ ಸುಂಕ, ತೆರಿಗೆ ಇಲ್ಲದೇ ಚಿನ್ನವನ್ನು ಖರೀದಿಸಬಹುದು.

ಭಾರತದಲ್ಲಿ 24 ಕ್ಯಾರಟ್ ಚಿನ್ನದ ಬೆಲೆ 10 ಗ್ರಾಮ್​ಗೆ 60,000 ರೂಗಿಂತ ಹೆಚ್ಚಿದೆ. ಭೂತಾನ್​ನಲ್ಲಿ ಇದರ ಬೆಲೆ 43,000 ಬಿಟಿಎನ್ (ಭೂತಾನ್ ಕರೆನ್ಸಿ) ಆಸುಪಾಸಿನಲ್ಲಿದೆ. ಭೂತಾನ್​ನ ನುಗುಲ್​ಟ್ರುಮ್ ಕರೆನ್ಸಿ ಮತ್ತು ರುಪಾಯಿ ಸಮಾನ ಬೆಲೆ ಹೊಂದಿವೆ. ಹೀಗಾಗಿ, ಭೂತಾನ್​ನಲ್ಲಿ 24 ಕ್ಯಾರೆಟ್​ನ 10 ಗ್ರಾಮ್ ಚಿನ್ನವನ್ನು 43,000 ರುಪಾಯಿಗೆ ಖರೀದಿಸಬಹುದು.

ಆದರೆ, ಕೆಲ ಷರತ್ತುಗಳಿವೆ. ಭೂತಾನ್ ಸರ್ಕಾರ ನಿರ್ದಿಷ್ಟಪಡಿಸಿದ ಟೂರಿಸ್ಟ್ ಹೋಟೆಲ್​ನಲ್ಲಿ ಕನಿಷ್ಠ 1 ರಾತ್ರಿಯಾದರೂ ಉಳಿಯಬೇಕು. ದಿನಕ್ಕೆ ಎಸ್​ಡಿಎಫ್ ಶುಲ್ಕ ಪಾವತಿಸಬೇಕು. ಭಾರತೀಯರಾದರೆ ಒಬ್ಬ ವ್ಯಕ್ತಿಗೆ ದಿನಕ್ಕೆ 1,200 ರೂನಿಂದ 1,800 ರೂ ಪಾವತಿಸಬೇಕು. ಬೇರೆ ದೇಶಗಳವರಾದರೆ ಒಬ್ಬ ವ್ಯಕ್ತಿ ದಿನಕ್ಕೆ 65ರಿಂದ 200 ಡಾಲರ್ ಅಂದರೆ 5,350 ರೂನಿಂದ 16,500 ರೂನವರೆಗೆ ಶುಲ್ಕ ಪಾವತಿಸಬೇಕು.

ಹಾಗೇ ಭೂತಾನ್​ನಲ್ಲಿ ಪ್ರವಾಸಿಗರಿಗೆ ಎಲ್ಲೆಂದರಲ್ಲಿ ಚಿನ್ನ ಖರೀದಿಸಲು ಸಾಧ್ಯವಾಗುವುದಿಲ್ಲ. ಚಿನ್ನ ಬೇಕೆನ್ನುವವರು ಭೂತಾನ್​ನ ಥಿಂಫು ಮತ್ತು ಫ್ಯೂಂಟ್​ಶೋಲಿಂಗ್ ಪಟ್ಟಣಗಳಿಗೆ ಹೋಗಬೇಕು. ಅಲ್ಲಿ ಹಣಕಾಸು ಸಚಿವಾಲಯದ ವತಿಯಿಂದ ನಡೆಸಲಾಗುವ ಕೆಲ ಮಳಿಗೆಗಳಲ್ಲಿ ಡ್ಯೂಟಿ ಫ್ರೀ ಚಿನ್ನವನ್ನು ಮಾರಲಾಗುತ್ತದೆ. ಅಲ್ಲಿ ಅಗ್ಗದ ಬೆಲೆಗೆ ಚಿನ್ನ ಖರೀದಿಸಬಹುದು. ಭೂತಾನ್​ನಲ್ಲಿರುವ ಕಾನೂನಿನ ಪ್ರಕಾರ, ಭಾರತದ ಪುರುಷನೊಬ್ಬ 50,000 ರೂ, ಹಾಗು ಭಾರತೀಯ ಮಹಿಳೆ 1 ಲಕ್ಷ ರೂವರೆಗೂ ಚಿನ್ನವನ್ನು ಖರೀದಿಸಬಹುದು. ಅಂದಹಾಗೆ ಈ ಚಿನ್ನಕ್ಕೆ ಹಣದ ಪಾವತಿಯನ್ನು ಡಾಲರ್​ನಲ್ಲೇ ಮಾಡಬೇಕು.

 

ಇದನ್ನು ಓದಿ: ITR Filing: ಅನ್ನದಾತ ಐಟಿ ರಿಟರ್ನ್ಸ್ ಸಲ್ಲಿಸುವ ಅಗತ್ಯವಿದೆಯೇ? ಏನಿದು ಹೊಸ ಚರ್ಚೆ!!!

Leave A Reply

Your email address will not be published.