Langra mango: ಈ ಮಾವು ರುಚಿಯಷ್ಟೇ ಅಲ್ಲ 11 ಕ್ಕೂ ಹೆಚ್ಚು ರೋಗಗಳನ್ನು ಬುಡದಿಂದಲೇ ಕಿತ್ತೆಸೆಯುತ್ತೆ ; 300 ವರ್ಷ ಇತಿಹಾಸವುಳ್ಳ ಈ ಮಾವು ಯಾವುದು ?!

Latest news Langra mango What is this 300 year old mango

Langra mango: ಸಾಮಾನ್ಯವಾಗಿ ಮಾವು ತಿನ್ನಲು ಸ್ವಾದಿಷ್ಟಕರವಾಗಿರುತ್ತದೆ ಹಾಗಾಗಿ ಎಲ್ಲರೂ ಅದನ್ನು ತಿನ್ನಲು ಇಷ್ಟಪಡುತ್ತಾರೆ. ಆದರೆ, ಇಲ್ಲೊಂದು ಮಾವು ನಾಲಿಗೆಗೆ ರುಚಿ ಮಾತ್ರವಲ್ಲ ಆರೋಗ್ಯಕ್ಕೂ ಒಳ್ಳೆಯದು. ಹೌದು ಲಂಗ್ರಾ (Langra mango) ಅಥವಾ ಲಂಗ್ಡಾ ಮಾವು ತಳಿಯು ಒಂದಲ್ಲ, ಎರಡಲ್ಲ.. 11 ಕ್ಕೂ ಹೆಚ್ಚು ರೋಗಗಳನ್ನು ಬುಡದಿಂದಲೇ ಗುಣಪಡಿಸುತ್ತೆ. ಅಷ್ಟೇ ಅಲ್ಲ ಇದು 300 ವರ್ಷ ಇತಿಹಾಸವುಳ್ಳ ಮಾವು.

ಈ ಮಾವು ಹೃದ್ರೋಗ, ಕ್ಯಾನ್ಸರ್. ಬುದ್ಧಿಮಾಂದ್ಯತೆಯ ಅಪಾಯ. ಮಧುಮೇಹ. ಹಲ್ಲಿನ ಸಮಸ್ಯೆ, ಅಜೀರ್ಣ ಸಮಸ್ಯೆ ಸೇರಿದಂತೆ 11 ಕ್ಕೂ ಹೆಚ್ಚು ರೋಗಗಳಿಗೆ ರಾಮಬಾಣದಂತೆ ಕೆಲಸ ಮಾಡುತ್ತದೆ. ಇದರಲ್ಲಿ ದೇಹಕ್ಕೆ ಅಗತ್ಯವಿರುವ ಎಲ್ಲಾ ಜೀವಸತ್ವಗಳು ಮತ್ತು ಖನಿಜಗಳು ಇವೆ ಎಂದು ವೈದ್ಯರು ಹೇಳುತ್ತಾರೆ.

ಉತ್ತರ ಪ್ರದೇಶದ ಬನಾರಸ್ ನಿಂದ ಈ ತಳಿಯ ಮಾವಿನ ಹಣ್ಣಿನ ಉತ್ಪಾದನೆ ಆರಂಭವಾಗಿದೆ ಎನ್ನಲಾಗಿದೆ. ಹಿರಿಯರು, ಹಾಗೂ ಜನರು ಕೇಳಿಕೊಂಡು ಬಂದು ಕಥೆಯ ಪ್ರಕಾರ, ಬನಾರಸ್ ನಲ್ಲಿನ ಶಿವನ ದೇವಾಲಯಕ್ಕೆ ಹಿಂದೊಮ್ಮೆ ಸನ್ಯಾಸಿಯೊಬ್ಬರು ಬಂದಿದ್ದರು. ಅವರು ದೇವಾಲಯದ ಆವರಣದಲ್ಲಿ ಮಾವಿನ ಗಿಡಗಳನ್ನು ನೆಟ್ಟರು ಹಾಗೂ ಮಾವಿನ ಮರದಲ್ಲಿ ಹಣ್ಣಾದಾಗ ಅದನ್ನು ಮೊದಲು ಭೋಲೇನಾಥನಿಗೆ ಅರ್ಪಿಸಿ ನಂತರ ಭಕ್ತರಿಗೆ ಹಂಚಬೇಕು. ಆದರೆ,
ಮಾವಿನ ಗೊರಟೆಯಾಗಲಿ, ಗಿಡವನ್ನಾಗಲಿ ಯಾರಿಗೂ ಕೊಡಬಾರದು ಎಂದು ದೇವಾಲಯದ ಅರ್ಚಕನಿಗೆ ಹೇಳಿದರು. ಅದರಂತೆ ಅರ್ಚಕರು ಮಾಡಿದರು.

ಈ ಹಣ್ಣಿನ ಬಗ್ಗೆ ಊರೆಲ್ಲಾ ಸುದ್ಧಿ ಹರಡಿ ಕೊನೆಗೆ ಕಾಶಿ ರಾಜನಿಗೂ ಇದರ ಸುದ್ದಿ ಮುಟ್ಟಿತು. ಹೀಗಾಗಿ ರಾಜ ದೇವಾಲಯಕ್ಕೆ ಬಂದು, ಶಂಕರನ ಪೂಜೆಯ ಬಳಿಕ ಪ್ರಸಾದದ ರೂಪದಲ್ಲಿ ಆ ಮಾವನ್ನು ಸವಿದನು. ಬಳಿಕ ಅರಮನೆಯ ಉದ್ಯಾನದಲ್ಲಿ ನೆಡಲು ಮಾವಿನ ಮರದ ಒಂದು ತುಂಡುಗಳನ್ನು ನೀಡುವಂತೆ ಕೇಳಿದನು. ಈ ವೇಳೆ ಅರ್ಚಕ, ದೇವರಲ್ಲಿ ಪ್ರಾರ್ಥಿಸಿ ಆತ ಸೂಚನೆ ಕೊಟ್ಟರೆ ಮಾವಿನ ಗಿಡವನ್ನು ಕೊಡುತ್ತೇನೆ ಎಂದು ಹೇಳಿದ. ಹಾಗಾಗಿ ರಾತ್ರಿ ಪುರೋಹಿತರ ಕನಸಿನಲ್ಲಿ ಶಿವ ಗಿಡವನ್ನು ರಾಜನಿಗೆ ನೀಡುವಂತೆ ಸೂಚನೆ ಕೊಡುತ್ತಾನೆ. ಮರುದಿನ ಪುರೋಹಿತರು ಅರಮನೆಗೆ ಹೋಗಿ ರಾಜನಿಗೆ ಆ ಮಾವಿನ ಗಿಡವನ್ನು ನೀಡಿದನು. ಕೆಲವೇ ವರ್ಷಗಳಲ್ಲಿ, ಈ ಮಾವಿನ ಬೆಳೆ ದೇಶಾದ್ಯಂತ ಪ್ರಚಾರವಾಗುತ್ತದೆ. ಅ

ಅಷ್ಟಕ್ಕೂ ಅದರ ಹೆಸರೇಕೆ ಲಾಂಗ್ಡಾ ಮಾವು ಎಂದಿದೆ ಗೊತ್ತಾ?! ದೇವಾಲಯದಲ್ಲಿ ಮಾವಿನ ಗಿಡ ನೆಟ್ಟ ಸನ್ಯಾಸಿಯನ್ನು ಜನರು ‘ಲಂಗ್ಡಾ ಸಾಧು’ ಎಂಬ ಹೆಸರಿನಿಂದ ಕರೆಯುತ್ತಿದ್ದರು. ಹೀಗಾಗಿ ಆ ಮರಗಳಿಂದ ಸಿಗುವ ಹಣ್ಣುಗಳಿಗೆ ಲಾಂಗ್ಡಾ ಮಾವು ಎಂದು ಹೆಸರಾಯಿತು. ಈ ತಳಿಯ ಮಾವನ್ನು ‘ಬನಾರಸಿ ಲಾಂಗ್ಡಾ ಮಾವು’ ಎಂದೂ ಸಹ ಕರೆಯಲ್ಪಡುತ್ತದೆ. ಇಂದು ಇದನ್ನು ದೇಶದ ಅತ್ಯಂತ ಜನಪ್ರಿಯ ಮಾವಿನಹಣ್ಣು ಎಂದೂ ಪರಿಗಣಿಸಲಾಗಿದೆ.

 

ಇದನ್ನು ಓದಿ: Fishcurry in Mid day meal: ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್ ; ಇನ್ಮುಂದೆ ಸರ್ಕಾರಿ ಶಾಲಾ ಮಕ್ಕಳಿಗೆ ಸಿಗಲಿದೆ ಬಿಸಿಯೂಟದಲ್ಲಿ ಮೀನು ಸಾರು !

Leave A Reply

Your email address will not be published.