Lionel Messi: 808 ಮೇಕೆಗಳಲ್ಲಿ ಅದ್ಭುತವಾಗಿ ಮೂಡಿಬಂದ ಲಿಯೋನೆಲ್ ಮೆಸ್ಸಿ ಭಾವಚಿತ್ರ ; ವಿಡಿಯೊ ವೈರಲ್ !
Latest news intresting news portrait of Lionel Messi was created using 808 goats

Lionel Messi: ಸೋಷಿಯಲ್ ಮೀಡಿಯಾದಲ್ಲಿ ಹಲವಾರು ಫೋಟೋ, ವಿಡಿಯೋಗಳು ಹರಿದಾಡುತ್ತಿರುತ್ತವೆ. ಅದರಲ್ಲಿ ಕೆಲವು ಸಖತ್ ವೈರಲ್ ಆಗುತ್ತವೆ. ಆದರಂತೆ ಇದೀಗ ವಿಡಿಯೋವೊಂದು ಸಖತ್ ವೈರಲ್ ಆಗಿದೆ. ಅದುವೆ ಫಿಫಾ ವಿಶ್ವಕಪ್ ವಿಜೇತ ಅರ್ಜೆಂಟೀನಾ ತಂಡದ ಸ್ಟಾರ್ ಆಟಗಾರ ಲಿಯೋನೆಲ್ ಮೆಸ್ಸಿ (Lionel Messi) ಅವರು ಫೋಟೋ. ಹೌದು, 808 ಮೇಕೆಗಳನ್ನು (808 Goats) ಬಳಸಿ ಲಿಯೋನೆಲ್ ಮೆಸ್ಸಿ ಅವರ ಭಾವಚಿತ್ರವನ್ನು ರಚಿಸಿದ ವಿಡಿಯೊ ಎಲ್ಲಡೆ ವೈರಲ್ (viral video) ಆಗಿದೆ.

ಅಮೆರಿಕದ ಮೇಜರ್ ಸಾಕರ್ ಲೀಗ್(ಎಂಎಸ್‌ಎಲ್)ಗೆ ಪಾದಾರ್ಪಣೆ ಮಾಡಿದ ಲಿಯೋನೆಲ್ ಮೆಸ್ಸಿ ವೃತ್ತಿಬದುಕಿನಲ್ಲಿ 808ನೇ ಗೋಲು ದಾಖಲಿಸಿದರು. ಈ ಗೋಲನ್ನು ಸಂಭ್ರಮಿಸಲು ಮೈದಾನದಲ್ಲಿ 808 ಮೇಕೆಗಳನ್ನು ನಿಲ್ಲಿಸಿ ಮೆಸ್ಸಿಯ ಮುಖ ಹೋಲುವ ಚಿತ್ರವನ್ನು ರಚಿಸಲಾಯಿತು. ದಿಗ್ಗಜ ಆಟಗಾರರನ್ನು ಸಾಮಾಜಿಕ ತಾಣಗಳಲ್ಲಿ G.O.A.T(ಗ್ರೇಟೆಸ್ಟ್ ಆಫ್ ಆಲ್ ಟೈಮ್-ಸಾರ್ವಕಾಲಿಕ ಶ್ರೇಷ್ಠ) ಎಂದು ಬಣ್ಣಿಸಲಾಗುತ್ತಿದೆ.
ವಿಡಿಯೋದಲ್ಲಿ ವ್ಯಕ್ಯಿಯೊಬ್ಬ ಲೇಸ್ ತಿನ್ನುತ್ತ ಕುಳಿತಿದ್ದ. ಆತ ಒಂದು ಮೇಕೆಯ ಜೊತೆಗೆ ಮೈದಾನಕ್ಕೆ ಬರುತ್ತಾನೆ. ಅಲ್ಲಿ ನೋಡಿದರೆ 808 ಮೇಕೆಗಳಿಂದ ಮಾಡಿದ ಮೆಸ್ಸಿಯ ಭಾವಚಿತ್ರ ಅನಾವರಣವಾಗಿದೆ. ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಹಾಗೇ ಫೋಟೋ ನೋಡಲು ಅದ್ಭುತವಾಗಿದೆ.
ಕಳೆದ 2022ರ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಅರ್ಜೆಂಟೀನಾ ತಂಡ ಪ್ರಶಸ್ತಿ ಮುಡಿಗೇರಿಸಿಕೊಳ್ಳುವಲ್ಲಿ ನಾಯಕನಾಗಿ ಲಿಯೊನೆಲ್ ಮೆಸ್ಸಿ ಅಪಾರ ಕೊಡುಗೆ ನೀಡಿದ್ದರು. ಈ ಟೂರ್ನಿಯಲ್ಲಿ ತಮ್ಮ ಕಾಲಿನ ಚಮತ್ಕಾರದಿಂದ 7 ಗೋಲುಗಳನ್ನು ಬಾರಿಸುವ ಮೂಲಕ ಗೋಲ್ಡನ್ ಬಾಲ್ ತನ್ನದಾಗಿಸಿಕೊಂಡಿದ್ದರು. ಆದರೆ, ಚೀನಾದ ಮಾಧ್ಯಮಗಳಿಗೆ ಇತ್ತೀಚೆಗೆ ನೀಡಿದ್ದ ಸಂದರ್ಶನವೊಂದರಲ್ಲಿ ಮೆಸ್ಸಿ, 2026 ಫಿಫಾ ವಿಶ್ವ ಕಪ್ (2026 Fifa World Cup) ಆಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಈ ಮೂಲಕ ಮುಂದಿನ ವಿಶ್ವಕಪ್ಗೂ ಮುನ್ನ ನಿವೃತ್ತಿ ಘೋಷಿಸುವ ಸುಳಿವನ್ನು ನೀಡಿದ್ದರು.
https://twitter.com/JoePompliano/status/1682856218358870019?s=20