Viral News: ಕರ್ನಾಟಕದಲ್ಲಿರುವೆ, ಕನ್ನಡ ಕಲಿ.. ನೀನು ಇಲ್ಲಿಗೆ ಭಿಕ್ಷೆ ಬೇಡಲು ಬಂದಿದ್ದೀಯಾ – ಆಟೋ ಸಾಹಿತ್ಯ ವೈರಲ್ !
Viral News you are in Karnataka u must learn Kannada have you come here to beg auto lyrics viral
Viral News: ರಾಜ್ಯಕ್ಕೆ ಸಾಕಷ್ಟು ಜನರು ಅಂತರಾಜ್ಯದಿಂದ ಬರುತ್ತಾರೆ. ಅವರೆಲ್ಲಾ ತಮ್ಮ ರಾಜ್ಯದ ಭಾಷೆಯನ್ನೇ ಕರ್ನಾಟಕದಲ್ಲೂ ಮಾತನಾಡುತ್ತಾರೆ. ಆದರೆ, ಅವರೆಲ್ಲಾ ಹಲವು ದಿನ ರಾಜ್ಯದಲ್ಲೇ ಇದ್ದರೂ ಕೂಡ ಕನ್ನಡ ಕಲಿಯೋದಿಲ್ಲ, ಕನ್ನಡ ಮಾತಾಡಲ್ಲ ಅಂತವರಿಗಾಗಿ ಇದೀಗ ಆಟೋ ಹಿಂದೆ ಬರೆದ ಸಾಹಿತ್ಯ ವೈರಲ್ ಆಗಿದೆ. ಹೌದು, ಕರ್ನಾಟಕದಲ್ಲಿರುವೆ, ಕನ್ನಡ ಕಲಿ. ನೀನು ಇಲ್ಲಿಗೆ ಭಿಕ್ಷೆ ಬೇಡಲು ಬಂದಿದ್ದೀಯಾ ಎಂದು ಬರೆದಿರುವ ಸಾಲುಗಳು ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ (Viral News) ಆಗುತ್ತಿದೆ.
“You are in Karnataka, learn Kannada. Don’t show your attitude, you f***. You have come to beg here.” ನೀನು ಕರ್ನಾಟಕದಲ್ಲಿರುವೆ. ಕನ್ನಡ ಕಲಿ. ಅಹಂಕಾರ ತೋರಿಸಬೇಕಡ. ನೀನು ಇಲ್ಲಿಗೆ ಭಿಕ್ಷೆ ಬೇಡಲು ಬಂದಿದ್ದೀಯಾ ಎಂದು ಆಟೋದ ಹಿಂದೆ ಬರೆಯಲಾಗಿದೆ.
ಇದನ್ನು ರೋಷನ್ ರೈ ಎಂಬುವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಹೊರಗಿನಿಂದ ಬಂದವರನ್ನು ಇಷ್ಟೊಂದು ತುಚ್ಚವಾಗಿ ಕಾಣುವುದು ಸರಿಯಲ್ಲ. ಈ ರೀತಿ ಅತಿ ಕೆಟ್ಟ ಭಾಷೆಯನ್ನು ಬಳಸುವುದು ಸರಿಯಲ್ಲ ಎಂದು ರೋಷನ್ ರೈ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಲವು ಟ್ವಿಟರ್ ಬಳಕೆದಾರರು ವಿವಿಧ ರೀತಿಯ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
This is Xenophobia of the highest order, Regional pride cannot be used as a justification for treating people from other states as 3rd class citizens. pic.twitter.com/GEbQdNyuXK
— Roshan Rai (@RoshanKrRaii) July 24, 2023
ಇದನ್ನು ಓದಿ: Kichha Sudeep Controversy: ತಾಕತ್ ಇದ್ರೆ ಸೂರಪ್ಪ ಬಾಬು ಮನೆ ಅಡ್ರೆಸ್ ಕೊಡ್ಲಿ- ಕಿಚ್ಚನ ಸಪೋರ್ಟ್ ಗೆ ಚಂದ್ರ ಚೂಡ್ !