Home News Cross Border Love: ಗಡಿ ದಾಟಿದ ಮತ್ತೊಂದು ಪ್ರೇಮ ಪಯಣ ; 6 ರ ಮಗ,...

Cross Border Love: ಗಡಿ ದಾಟಿದ ಮತ್ತೊಂದು ಪ್ರೇಮ ಪಯಣ ; 6 ರ ಮಗ, ಗಂಡನನ್ನು ಬಿಟ್ಟು ಪಾಕ್’ಗೆ ಹೋದ ವಿವಾಹಿತೆ !

Cross Border Love

Hindu neighbor gifts plot of land

Hindu neighbour gifts land to Muslim journalist

Cross Border Love: ಉತ್ತರ ಪ್ರದೇಶದ (Uttar Pradesh) ಲಕ್ನೋದಲ್ಲಿ ಆನ್ಲೈನ್ ಗೇಮ್ (PUBG) ಆಡುತ್ತಾ ಪಾಕಿಸ್ತಾನದಿಂದ ತನ್ನ ಪ್ರೇಮಿಯನ್ನು ಹುಡುಕಿಕೊಂಡು ತನ್ನ 4 ಮಕ್ಕಳೊಂದಿಗೆ ಭಾರತಕ್ಕೆ ಅಕ್ರಮ ಪ್ರವೇಶ ಮಾಡಿದ ಸೀಮಾ ಹೈದರ್ ಪ್ರಕರಣ ಇತ್ತೀಚೆಗೆ ಭಾರೀ ಸದ್ದು ಮಾಡುತ್ತಿದೆ. ಇಂತಹದೇ ಪ್ರಕರಣವೊಂದು ಇದೀಗ ಬೆಳಕಿಗೆ ಬಂದಿದೆ. ಇದು ಸೀಮಾ ಹೈದರ್‌ ಉಲ್ಟಾ ಕೇಸ್‌. ಇಲ್ಲಿ ಭಾರತೀಯಳೇ ಪ್ರಿಯತಮನ ಅರಸಿ ಪಾಕಿಸ್ತಾನಕ್ಕೆ ಹೋಗಿದ್ದಾಳೆ (Cross Border Love) . ವಿವಾಹಿತ ಮಹಿಳೆ 6 ರ ಮಗ, ಗಂಡನನ್ನು ಬಿಟ್ಟು ಗಡಿ ದಾಟಿ ಪಾಕ್’ಗೆ ಹೋಗಿದ್ದಾಳೆ. ಏನೀ ಘಟನೆ ?! ಈ ಮಾಹಿತಿ‌ ಓದಿ.

ರಾಜಸ್ಥಾನದ ಭಿವಾಡಿ ಜಿಲ್ಲೆಯ ಅಂಜು (34) ಎಂಬ ಮಹಿಳೆಗೆ ಫೇಸ್‌ಬುಕ್‌ನಲ್ಲಿ ಪಾಕಿಸ್ತಾನದ ನಸ್ರುಲ್ಲಾ (29) ಎಂಬಾತನ ಪರಿಚಯವಾಗಿದ್ದು, ಪರಿಚಯ ಸ್ನೇಹದ ಬಳಿಕ ಪ್ರೀತಿಗೆ ತಿರುಗಿದೆ. ನಸ್ರುಲ್ಲಾ ಮೆಡಿಕಲ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾನೆ.
ಸದ್ಯ ಮಹಿಳೆ ಗೆಳೆಯ ನಸ್ರುಲ್ಲಾನನ್ನು ಭೇಟಿಯಾಗಲು ಪಾಕಿಸ್ಥಾನಕ್ಕೆ ತೆರಳಿದ್ದಾರೆ. ಆದರೆ, ಪಾಕಿಸ್ತಾನದಲ್ಲಿ ಈ ಭಾರತೀಯ ಮಹಿಳೆಯನ್ನು ಬಂಧಿಸಲಾಯಿತು. ಹಾಗೂ ದಾಖಲೆ ಪರಿಶೀಲನೆ ಬಳಿಕ ಅವರನ್ನು ಬಿಡುಗಡೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಆದರೆ, ಈಕೆಗೆ ಈಗಾಗಲೇ ವಿವಾಹವಾಗಿದ್ದು, 15 ವರ್ಷದ ಮಗಳು ಹಾಗೂ 6 ವರ್ಷದ ಮಗನಿದ್ದಾನೆ. ಅಂಜು ಪತಿ ಹೆಸರು ಅರವಿಂದ್ ಎಂದಾಗಿದೆ. ಅಂಜು ಕೆಲ ದಿನಗಳ ಹಿಂದೆ ಜೈಪುರಕ್ಕೆ ತೆರಳಿದ್ದರು. ಇದೇ ವೇಳೆ ಅವರು ಪಾಕಿಸ್ತಾನಕ್ಕೆ ಪರಾರಿಯಾಗಿದ್ದಾರೆ ಎನ್ನಲಾಗಿದೆ.
2020ರಲ್ಲೇ ಅಂಜು ಪಾಸ್‌ಪಾರ್ಟ್ ಮಾಡಿಸಿದ್ದರು. ಪಾಸ್ ಪೋರ್ಟ್ ಯಾಕೆ ಬೇಕು ಎಂದು ಪತಿ ಕೇಳಿದಾಗ ಅಂಜು ತಾನು ವಿದೇಶದಲ್ಲಿ ಕೆಲಸ ಹುಡುಕುತ್ತೇನೆ ಎಂದು ಹೇಳಿದ್ದರು. ಸದ್ಯ ಪಾಕ್ ಗೆ ಪರಾರಿಯಾಗಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ.

ಅಂಜು ಜೈಪುರಕ್ಕೆ ಹೋಗೋದಾಗಿ ಹೇಳಿ ಪಾಕಿಸ್ತಾನಕ್ಕೆ ಪರಾರಿಯಾಗಿದ್ದಾರೆ. ಆದರೆ, ವಾಟ್ಸ್‌ಆ್ಯಪ್‌ನಲ್ಲಿ ಪತ್ನಿ ಸಂಪರ್ಕದಲ್ಲಿದ್ದಾಳೆ ಎಂದು ಪತಿ ಅರವಿಂದ್ ಹೇಳಿದ್ದಾರೆ. ಅಲ್ಲದೆ,
ಆಕೆ ಕಳೆದ ಮಂಗಳವಾರ (ಜುಲೈ 18) ಪಾಕಿಸ್ತಾನಕ್ಕೆ ತೆರಳಿದ್ದು, ಭಾನುವಾರ (July 23) ಸಂಜೆ 4 ಗಂಟೆಗೆ ಕರೆ ಮಾಡಿದ್ದಾಳೆ. ಲಾಹೋರ್‌ನಲ್ಲಿದ್ದೇನೆ, ಎರಡು-ಮೂರು ದಿನದಲ್ಲಿ ವಾಪಸ್ ಬರುತ್ತೇನೆ ಎಂದು ಹೇಳಿದ್ದಾಳೆ ಎಂದು ಪತಿ ಅರವಿಂದ್ ತಿಳಿಸಿದ್ದಾರೆ ಎನ್ನಲಾಗಿದೆ.