Narendra Modi- Sonia Gandhi: ಕುತೂಹಲ ಕೆರಳಿಸಿದ ಸೋನಿಯಾ – ಪ್ರಧಾನಿ ಮೋದಿ ಭೇಟಿ !

Latest news Sonia Gandhi meeting with Prime Minister Narendra Modi made people curious

Share the Article

Narendra Modi- Sonia Gandhi: ಕಾಂಗ್ರೆಸ್ ಗೂ ಬಿಜೆಪಿಗೂ ಆಗಿಬರೋದೇ ಇಲ್ಲ. ರಾಜಕೀಯದಲ್ಲಿ ಪಕ್ಷ ಪ್ರತಿಪಕ್ಷಗಳ ಕಿತ್ತಾಟ, ವಾಗ್ದಾಳಿ ಸಾಮಾನ್ಯವಾಗಿಬಿಟ್ಟಿದೆ. ಆದರೆ, ಇದೀಗ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಹಾಗೂ ಪ್ರಧಾನಿ ನರೇಂದ್ರ ಮೋದಿ (Narendra Modi- Sonia Gandhi) ಭೇಟಿಯಾಗಿದ್ದಾರೆ. ಸದ್ಯ ಈ ವಿಚಾರ ಭಾರೀ ಕುತೂಹಲ ಕೆರಳಿಸಿದೆ. ಇವರ ಭೇಟಿ ಯಾಕಾಗಿ?! ಎಂಬ ಚರ್ಚೆ ಎಲ್ಲೆಡೆ ನಡೆಯುತ್ತಿದೆ.

ಇಂದಿನಿಂದ ಸಂಸತ್ ಮುಂಗಾರು ಅಧಿವೇಶನ ನಡೆಯಲಿದೆ. ಈ ವೇಳೆ ಇಂದು ಬೆಳಗ್ಗೆ ಸಂಸತ್ ಭವನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿದ್ದಾರೆ. ಸೋನಿಯಾ ಗಾಂಧಿಯ ಅವರ ಆರೋಗ್ಯದ ಬಗ್ಗೆ ವಿಚಾರಿಸಿದ್ದಾರೆ ಎಂದು ತಿಳಿದುಬಂದಿದೆ.

ಬೆಂಗಳೂರಿನಲ್ಲಿ ವಿಪಕ್ಷ ನಾಯಕರ ಸಭೆಯ ಬಳಿಕ ದೆಹಲಿಗೆ ತೆರಳುವಾಗ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತು. ಹಾಗಾಗಿ ಸೋನಿಯಾ ಗಾಂಧಿ ಮಾರ್ಗ ಮಧ್ಯದಲ್ಲಿಯೇ ವಿಮಾನದಿಂದ ಇಳಿಯಬೇಕಾಯಿತು. ಈ ವೇಳೆ ಸೋನಿಯಾ ಗಾಂಧಿ ಅನಾರೋಗ್ಯದಿಂದ ಬಳಲುತ್ತಿದ್ದರು. ಈ ಕಾರಣಕ್ಕಾಗಿಯೇ ಮೋದಿ ಇಂದು ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿ ಅವರ ಆರೋಗ್ಯ ಬಗ್ಗೆ ವಿಚಾರಿಸಿದ್ದಾರೆ.

 

ಇದನ್ನು ಓದಿ: ಶಕ್ತಿ ಯೋಜನೆ ವಿರುದ್ಧ ಆಟೋ, ಕ್ಯಾಬ್ಸ್ ಸ್ಟ್ರೈಕ್, ಬರುವ ವಾರ ಬೆಂಗಳೂರು ಸಂಪೂರ್ಣ ಸ್ತಬ್ಧ 

Leave A Reply