Gruha jyoti scheme: ಫ್ರೀ ಕರೆಂಟ್ ಬೆನ್ನಲ್ಲೇ ಮತ್ತೊಂದು ಭರ್ಜರಿ ಗುಡ್ ನ್ಯೂಸ್!! ‘ಗೃಹಜ್ಯೋತಿ’ಗೆ ಅರ್ಜಿ ಹಾಕಿ, ಈ 3 ಯೋಜನೆಯ ಲಾಭ ಪಡೆಯಿರಿ
latest news congress guarantee Apply for 'Gruha Jyoti' scheme and get these 3 schemes
Gruha jyoti scheme: ಕಾಂಗ್ರೆಸ್ ಸರಕಾರದ(Congress Government) ಪಂಚ ಗ್ಯಾರಂಟಿಗಳ(congress guarantee) ಪೈಕಿ ಒಂದಾಗಿರುವ ಗೃಹಜ್ಯೋತಿ ಯೋಜನೆ ಈಗಾಗಲೇ ರಾಜ್ಯಾದ್ಯಂತ ಜಾರಿಯಾಗಿದೆ. ಎಲ್ಲರೂ ಭರದಿಂದ ಅರ್ಜಿ ಹಾಕುತ್ತಿದ್ದಾರೆ. ಅರ್ಜಿ ಹಾಕಿದವರು ಮುಂದಿನ ತಿಂಗಳಿನಿಂದ ಕರೆಂಟ್ ಬಿಲ್ ಕಟ್ಟುವಂತಿಲ್ಲ. 1 ತಿಂಗಳಲ್ಲೇ ಬರೋಬ್ಬರಿ 1.09 ಕೋಟಿ ಗ್ರಾಹಕರು ನೋಂದಣಿ ಮಾಡಿಸಿಕೊಂಡಿದ್ದಾರೆ. ಇದೀಗ ಫ್ರೀ ಕರೆಂಟ್ ಬೆನ್ನಲ್ಲೇ ರಾಜ್ಯದ ಜನತೆಗೆ ಸರ್ಕಾರವು ಮತ್ತೊಂದು ಭರ್ಜರಿ ಗುಡ್ ನ್ಯೂಸ್ ನೀಡಿದ್ದು, ‘ಗೃಹಜ್ಯೋತಿ’ಗೆ (Gruha jyoti scheme) ಅರ್ಜಿ ಹಾಕಿದವರಿಗೆ ಈ 3 ಯೋಜನೆಯ ಲಾಭವನ್ನು ಪಡೆಯಬಹುದು.
ಹೌದು, ಮೂರು ವಿದ್ಯುತ್ ಸಂಬಂಧಿ ಯೋಜನೆಯನ್ನು ಇದೀಗ ಗೃಹಜ್ಯೋತಿಯಲ್ಲಿ ವಿಲೀನ ಮಾಡಿದ್ದಾರೆ. ಈ ಮೂಲಕ 50 ಲಕ್ಷಕ್ಕೂ ಹೆಚ್ಚು ಕುಟುಂಬಗಳಿಗೆ ಗೃಹಜ್ಯೋತಿಯ ನೇರ ಲಾಭ ಸಿಗಲಿದೆ. ಮೂರು ಯೋಜನೆಗಳಾದ ಭಾಗ್ಯ ಜ್ಯೋತಿ(Bhagya Jyoti scheme), ಕುಟೀರ ಜ್ಯೋತಿ (Kuteera jyoti scheme), ಅಮೃತ ಜ್ಯೋತಿ (Amrita Jyoti scheme) ಯೋಜನೆಗಳನ್ನು ಗೃಹಜೋತಿಯೊಂದಿಗೆ ವಿಲೀನಗೊಳಿಸುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ
ಈ ಹಿಂದೆ ಅಮೃತ ಜ್ಯೋತಿ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕುಟುಂಬಗಳಿಗೆ ಮಾಸಿಕ 75 ಯೂನಿಟ್ ವಿದ್ಯುತ್ ದರವನ್ನು ಡಿಬಿಟಿ ಮೂಲಕ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗುತ್ತಿತ್ತು. ಈಗ ಈ ಯೋಜನೆಯನ್ನು ಗೃಹಜೋತಿಯೊಂದಿಗೆ ವಿಲೀನಗೊಳಿಸಲಾಗಿದೆ. ಎಂದು ಸರ್ಕಾರ ಆದೇಶ ಹೊರಡಿಸಿದೆ. ಈ ಮೂಲಕ ಫಲಾನುಭವಿಗಳು 75 ಯೂನಿಟ್ ಮತ್ತು ಶೇ.10ರಷ್ಟು ಹೆಚ್ಚುವರಿ ವಿದ್ಯುತ್ ಅನ್ನು ಉಚಿತವಾಗಿ ಪಡೆಯಬಹುದು.
ಭಾಗ್ಯ ಜ್ಯೋತಿ ಮತ್ತು ಕುಟೀರ ಜ್ಯೋತಿ ಯೋಜನೆಗಳನ್ನು ಗೃಹಜ್ಯೋತಿ ಯೋಜನೆಯಡಿ ವಿಲೀನ ಮಾಡಲಾಗಿದ್ದು,ಫಲಾನುಭವಿ ಕುಟುಂಬಗಳಿಗೆಎ 53 ಯೂನಿಟ್ ಹಾಗೂ ಶೇ.10 ರಷ್ಟು ಹೆಚ್ಚುವರಿ ಯೂನಿಟ್ ವಿದ್ಯುತ್ ಅನ್ನು ಉಚಿತವಾಗಿ ನೀಡಲಾಗುತ್ತದೆ ಎಂದು ಸರ್ಕಾರ (Karnataka government) ಘೋಷಣೆ ಮಾಡಿದೆ.
ಇದನ್ನು ಓದಿ: Gruhalakshmi: 5 ಭಾಗ್ಯಗಳ ಮತ್ತೊಂದು ಯೋಜನೆ ಜಾರಿಗೆ ಸಿದ್ಧವಾದ ಗೌರ್ಮೆಂಟ್ !! ಈ ದಿನದಿಂದಲೇ ಖಾತೆಗೆ ಬರಲಿದೆ ಅಮೌಂಟ್ !!