DCM DK Shivakumar: ಇನ್ನು ಮುಂದೆ ಮನೆ ಆಸ್ತಿ ದಾಖಲೆಗಳು ಮನೆಗೇ ಬರಲಿದೆ – ಡಿಕೆ ಶಿವಕುಮರ್ ಕೊಟ್ರು ಬಿಗ್ ಅಪ್ಡೇಟ್ !

latest news politics DCM DK Shivakumar says house property documents will come home

DCM DK Shivakumar: ಇನ್ನು ಮುಂದೆ ಮನೆ ಆಸ್ತಿ ದಾಖಲೆಗಳಿಗಾಗಿ ಸರ್ಕಾರಿ ಕಚೇರಿಗಳಿಗೆ ಅಲೆಯುವ ಅಗತ್ಯವಿಲ್ಲ. ಬದಲಾಗಿ ಈ ಎಲ್ಲಾ ಕೆಲಸಗಳು ನಿಮ್ಮ ಮನೆ ಬಾಗಿಲಲ್ಲೇ ನಡೆಯುತ್ತದೆ ಎಂದು ಡಿಕೆ ಶಿವಕುಮಾರ್ (DCM DK Shivakumar) ಬಿಗ್ ಹೇಳಿಕೆಯೊಂದನ್ನು ನೀಡಿದ್ದಾರೆ.

ಹೌದು, ಬೆಂಗಳೂರಿನ ನಾಗರಿಕರು ಇನ್ನು ಮುಂದೆ ತಮ್ಮ ಆಸ್ತಿ ದಾಖಲೆಗಳಿಗಾಗಿ ಸರ್ಕಾರಿ ಕಚೇರಿಗಳನ್ನು ಅಲೆಯುವ ಅಗತ್ಯ ಇರುವುದಿಲ್ಲ. ಸರ್ಕಾರವೇ ಅವರ ಮನೆ ಬಾಗಿಲಿಗೆ ಬಂದು ಆಸ್ತಿ ದಾಖಲೆಗಳನ್ನು(property document) ತಲುಪಿಸುವ ವ್ಯವಸ್ಥೆಯನ್ನು ಜಾರಿಗೆ ಮಾಡಲು ಸರ್ಕಾರವು ಮುಂದಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಬೆಂಗಳೂರು ನಿವಾಸಿಗಳ ಕ್ಷೇಮಾಭಿವೃದ್ಧಿ ಮತ್ತು ನಾಗರಿಕ ಸಂಘಗಳ ಪ್ರತಿನಿಧಿಗಳ ಜತೆ ಸಂವಾದ ನಡೆಸಿದ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಖಾತೆ ಎಂದು ಕರೆಯುವ ಬದಲು ಅದಕ್ಕೆ ಬೇರೆ ಹೆಸರು ಇಟ್ಟು, ಎಲ್ಲ ಆಸ್ತಿ ದಾಖಲೆಗಳನ್ನು ಒದಗಿಸಲಾಗುವುದು. ಎಸ್.ಎಂ ಕೃಷ್ಣ ಅವರ ಕಾಲದಲ್ಲಿ ಹಳ್ಳಿಗಳಲ್ಲಿ ಮನೆ ಬಾಗಿಲಿಗೆ ಪಾಣಿಗಳನ್ನು ನೀಡುವ ‘ಭೂಮಿ’ ವ್ಯವಸ್ಥೆಯ ರೀತಿಯಲ್ಲಿ ಬೆಂಗಳೂರು ನಗರದ ಮನೆ ಬಾಗಿಲಲ್ಲೇ ಆಸ್ತಿ ದಾಖಲೆಗಳನ್ನು ನೀಡುವ ವ್ಯವಸ್ಥೆ ಜಾರಿಗೊಳಿಸುವ(Implementation of property document delivery system at doorstep) ಬಗ್ಗೆ ತಿಳಿಸಿದರು.

ಅಲ್ಲದೇ ಮನೆ ಬಾಗಿಲಲ್ಲೇ ಆಯಾ ಆಸ್ತಿ ದಾಖಲೆಗಳನ್ನು ತಲುಪಿಸಿದರೆ, ಯಾರ ಬಳಿ ಎಷ್ಟು ಆಸ್ತಿ ಇದೆ ಎಂಬ ಸಂಪೂರ್ಣ ಮಾಹಿತಿ ಸಿಗಲಿದೆ. ಹಾಗೂ ಯಾರೂ ಕೂಡ ಆಸ್ತಿ ತೆರಿಗೆ ಪಾವತಿಸದೇ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಬೆಂಗಳೂರಿನಲ್ಲಿ ತೆರಿಗೆ ಕಟ್ಟದೆ ಕಳ್ಳಾಟ ನಡೆಸುವವರನ್ನು ಟ್ರೇಸ್ ಮಾಡಬೇಕಾಗಿದೆ. ಯಾರು ತೆರಿಗೆ (tax) ಕಟ್ಟುವುದಿಲ್ಲವೋ ಅವರನ್ನು ಮ್ಯಾಪಿಂಗ್ ಮಾಡಲು ಸೂಚಿಸಲಾಗಿದೆ ಎಂದು ತಿಳಿಸಿದರು.

ನಾವು ನಮ್ಮ ಸಂಪನ್ಮೂಲ ವೃದ್ಧಿಸಿಕೊಳ್ಳದಿದ್ದರೆ ಬೆಂಗಳೂರು(Bengaluru) ಅಭಿವೃದ್ಧಿ ಮಾಡಲು ಸಾಧ್ಯವಿಲ್ಲ. ನಾವು ಕೈಗೆತ್ತಿಕೊಳ್ಳಲು ಮುಂದಾಗಿರುವ ಬೃಹತ್ ಯೋಜನೆಗಳಿಗೆ ಸಂಪನ್ಮೂಲ ಕ್ರೋಢೀಕರಣ ಮಾಡಿಕೊಳ್ಳಬೇಕು. ಹೀಗಾಗಿ ಎಲ್ಲರೂ ತೆರಿಗೆ ಪಾವತಿಸುವಂತೆ ನೋಡಿಕೊಳ್ಳಬೇಕು. ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.

 

ಇದನ್ನು ಓದಿ: Onion Storage: ರೈತರಿಗೆ ಗುಡ್ ನ್ಯೂಸ್: ಎಷ್ಟು ದಿನ ಆದ್ರೂ ಈರುಳ್ಳಿ ಕೊಳೆಯದೇ ಇರ್ಬೇಕಾ, ಹಾಗಿದ್ರೆ ಈ ನ್ಯೂಸ್ ನಿಮಗಾಗಿ !

Leave A Reply

Your email address will not be published.