H.K Patil: ಅಕ್ಕಿಯ ಬದಲಿಗೆ ಚಿಕನ್ ಸಿಗುತ್ತಾ ? ಹೆಚ್ . ಕೆ ಪಾಟೀಲ್ ಕೊಟ್ರು ಬಿಗ್ ಬಿಗ್ ಅಪ್ಡೇಟ್ !

Latest news congress guarantee HK. Patil gave an update on the Annabhagya scheme

Share the Article

H.K Patil: ಕಾಂಗ್ರೆಸ್ (congress) ಪಕ್ಷ 5 ಗ್ಯಾರಂಟಿ ಯೋಜನೆಗಳಲ್ಲಿ ಒಂದೊಂದೇ ಯೋಜನೆಗಳ ಜಾರಿಗೆ ಕ್ರಮ ಕೈಗೊಳ್ಳುತ್ತಿದೆ. ಇದೀಗ ಕರ್ನಾಟಕ ಸರಕಾರವು ಅನ್ನಭಾಗ್ಯ (Anna bhagya) ಯೋಜನೆ ಜಾರಿ ತರಲು ಅಕ್ಕಿ ಕೊರತೆ ಹಿನ್ನೆಲೆಯಲ್ಲಿ 5 ಕೆಜಿ ಹೆಚ್ಚುವರಿ ಅಕ್ಕಿಯ ಬದಲು ಹಣವನ್ನು ನೀಡಲು ಮುಂದಾಗಿದೆ. ಸದ್ಯ ಈ ಬಗ್ಗೆ ಹೆಚ್ ಕೆ. ಪಾಟೀಲ್ (H.K Patil) ಬಿಗ್ ಬಿಗ್ ಅಪ್ಡೇಟ್ ನೀಡಿದ್ದಾರೆ.

ಕೇಂದ್ರ ಸರ್ಕಾರ ಅಕ್ಕಿ ಕೊಡಲಿಲ್ಲ. ಹಾಗಾಗಿ ಜನರಿಗೆ 5 ಕೆಜಿ ಅಕ್ಕಿ ಬದಲು ಹಣ ನೀಡಲಾಗುತ್ತದೆ ಎನ್ನಲಾಗಿದೆ. ಸದ್ಯ ಈ ಬಗ್ಗೆ ಹೆಚ್ ಕೆ. ಪಾಟೀಲ್ ಬಿಗ್ ಬಿಗ್ ಅಪ್ಡೇಟ್ ನೀಡಿದ್ದು, ಅಕ್ಕಿಯ ಬದಲಿಗೆ ಚಿಕನ್ ಸಿಗುತ್ತಾ ? ಎಂಬ ಸುದ್ದಿ ಕೇಳಿಬರುತ್ತಿದೆ. ಅನ್ನಭಾಗ್ಯ (Annabhagya) ಅಕ್ಕಿಯ ನೇರ ನಗದು ಹಣ ವರ್ಗಾವಣೆ ಮಾಡಿದ ಬಳಿಕ ಮಾತನಾಡಿದ ಎಚ್ .ಕೆ. ಪಾಟೀಲ್‌ ಅವರು ಅಕ್ಕಿ ಬದಲಿಗೆ ಬಂದ ಹಣದಿಂದ ಜೋಳ, ಟೊಮೆಟೊ, ಚಿಕನ್ ಬೇಕಾದ್ರೂ ತೆಗೆದುಕೊಳ್ಳಿ ಎಂದು ಹೇಳಿದ್ದಾರೆ.

ಕೇಂದ್ರ ಸರ್ಕಾರ ಅಕ್ಕಿ ಕೊಡದಿರುವುದು ಒಳ್ಳೆಯದೇ ಆಗಿದೆ. ಕೆಲವರು ಅಕ್ಕಿ ಬದಲು ಹಣವನ್ನೇ ಕೊಡಿ ಎಂದು ಹೇಳಿದ್ದರು. ಅಕ್ಕಿ ಕೊಟ್ಟರೆ 5 ಕೆಜಿಯಲ್ಲೇ ಎಡ್ಮೂರು ಕೆಜಿ ಮಾರುತ್ತಿದ್ದರು. 35 ರೂಪಾಯಿಯ ಅಕ್ಕಿಯನ್ನು 10/12 ರೂಪಾಯಿಗೆ ಮಾರಾಟ ಮಾಡುತ್ತಿದ್ದಾರೆ. ಹಾಗಾಗಿ ಅಕ್ಕಿ ಬದಲು ಹಣವನ್ನೇ ಕೊಡಿ ಎಂದು ಜನರೇ ಹೇಳಿದ್ದಾರೆ. ಸದ್ಯ ಅಕ್ಕಿ ಬದಲು ಹಣ ಕೊಟ್ಟರೆ ಜನರು ತಮಗೆ ಬೇಕಾದನ್ನು ಖರೀದಿಸುತ್ತಾರೆ ಎಂದು ಎಚ್‌.ಕೆ.ಪಾಟೀಲ್‌ ಹೇಳಿದ್ದಾರೆ.

 

ಇದನ್ನು ಓದಿ: Sonia Gandhi dance video: ರೈತ ಮಹಿಳೆಯರ ವಿಚಿತ್ರ ಆಸೆ ಪೂರೈಸಿದ ಸೋನಿಯಾ ಗಾಂಧಿ-Viral Video ! 

Leave A Reply