Railway Recruitment: ರೈಲ್ವೆ ನೇಮಕಾತಿ ಶುರು, ಬರೋಬ್ಬರಿ 7,784 ಹುದ್ದೆಗಳು, ಲಾಸ್ಟ್ ಡೇಟ್ ಶೀಘ್ರದಲ್ಲಿ !
Latest news government jobs Indian Railway Recruitment notification 2023
Railway Recruitment: ಭಾರತೀಯ ರೈಲ್ವೆ ನೇಮಕಾತಿ ಮಂಡಳಿಯು ಖಾಲಿ ಇರುವ 7,784 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ (Railway Recruitment). ಆಸಕ್ತ, ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಹುದ್ದೆಯ ಬಗೆಗಿನ ಹೆಚ್ಚಿನ ವಿವರ ಈ ಕೆಳಗಿನಂತಿದೆ.
ಹುದ್ದೆಯ ಹೆಸರು: ಟ್ರಾವೆಲಿಂಗ್ ಟಿಕೆಟ್ ಪರೀಕ್ಷಕ(TTE)
ಹುದ್ದೆಗಳ ಸಂಖ್ಯೆ: 7,784
ವಿದ್ಯಾರ್ಹತೆ: 10ನೇ ತರಗತಿ (SSLC /SSC/ಮೆಟ್ರಿಕ್ಯುಲೇಷನ್), 12ನೇ ತರಗತಿ ಅಥವಾ ಡಿಪ್ಲೊಮಾ
ಅರ್ಜಿ ಸಲ್ಲಿಸಲು ಕೊನೆಯ ದಿನ – ಅರ್ಜಿಯನ್ನು ಮುಂದಿನ 30 ದಿನಗಳ ಒಳಗಾಗಿ ಸಲ್ಲಿಸಬೇಕು.
ವಯೋಮಿತಿ: 18 ರಿಂದ 30 ವರ್ಷ.
ವೇತನ ಶ್ರೇಣಿ: 5,200 ರಿಂದ 20,200 ರೂ. ಜೊತೆಗೆ GP (gross pay) 1,900 ರೂ. ನೀಡಲಾಗುತ್ತದೆ.
ಆಯ್ಕೆ ಪ್ರಕ್ರಿಯೆ: ಕಂಪ್ಯೂಟರ್ ಆಧಾರಿತ ಲಿಖಿತ ಪರೀಕ್ಷೆ (ಸಿಬಿಇ) ಇರಲಿದೆ. ಶಾರ್ಟ್ಲಿಸ್ಟ್ ಮಾಡಿದ ಅಭ್ಯರ್ಥಿಗಳು ವೈದ್ಯಕೀಯ ಫಿಟ್ನೆಸ್ ಪರೀಕ್ಷೆಗೆ ಒಳಗಾಗಬೇಕು. 3 ಸುತ್ತುಗಳಲ್ಲಿ ತೇರ್ಗಡೆಯಾದವರನ್ನು ರೈಲ್ವೆ ಟಿಟಿಇ ಆಗಿ ನೇಮಿಸಲಾಗುತ್ತದೆ. ಟಿಟಿಇ ನೇಮಕಾತಿಯ ಸಿಬಿಟಿ 200 ಅಂಕಗಳನ್ನು ಹೊಂದಿರುತ್ತದೆ ಮತ್ತು ತಲಾ 40 ಅಂಕಗಳ 5 ವಿಭಾಗಗಳನ್ನು ಹೊಂದಿರುತ್ತದೆ.
ಅರ್ಜಿ ಶುಲ್ಕ: ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಮಾಜಿ ಸೈನಿಕರು/ವಿಕಲಚೇತನರು, ಮಹಿಳೆಯರು, ಅಲ್ಪಸಂಖ್ಯಾತರು, ತೃತೀಯ ಲಿಂಗಿಗಳು ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ 250 ರೂ. ಅರ್ಜಿ ಶುಲ್ಕ ಇರಲಿದೆ. ಸಾಮಾನ್ಯ ಅಥವಾ ಕಾಯ್ದಿರಿಸದ ವರ್ಗದ ಅಭ್ಯರ್ಥಿಗಳಿಗೆ 500 ರೂ. ಇರಲಿದೆ.
ಅರ್ಜಿ ಸಲ್ಲಿಕೆ: ಅಧಿಕೃತ ವೆಬ್‍ಸೈಟ್ indianrailways.gov.in ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿ.