Auto Rikshaw Drivers: ‘ ಶಕ್ತಿ ‘ ಯಿಂದ ನಿಷ್ಯಕ್ತ ಆಟೋ ರಿಕ್ಷಾ ಚಾಲಕರು ! ತಿಂಗಳಿಗೆ 10,000 ರೂ. ಪರಿಹಾರ ಹಣ ಬೇಕೇ ಬೇಕೆಂದು ಹಠಕ್ಕೆ !

latest news political news Auto rickshaw drivers are helpless from 'Shakti' scheme

Share the Article

Auto Rikshaw Drivers: ಕಾಂಗ್ರೆಸ್ (Congress) ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆ (Shakti Scheme) ಹಿನ್ನೆಲೆ ಎಲ್ಲಾ ಮಹಿಳೆಯರು ಉಚಿತವಾಗಿ ಬಸ್ ನಲ್ಲೇ ಪ್ರಯಾಣಿಸುತ್ತಾರೆ. ಇದರಿಂದಾಗಿ ಆಟೋ ರಿಕ್ಷಾ ಚಾಲಕರಿಗೆ ಭಾರೀ ನಷ್ಟ ಉಂಟಾಗಿದೆ. ಈ ಹಿನ್ನೆಲೆ ಚಾಲಕರು ಸರ್ಕಾರಕ್ಕೆ ಹೊಸ ಬೇಡಿಕೆ ಇಟ್ಟಿದ್ದಾರೆ.

ಶಕ್ತಿ ಯೋಜನೆಯಿಂದ ಆಟೋ ರಿಕ್ಷಾ (Auto Rikshaw Drivers) ಚಾಲಕರು ಕೈ ಸುಟ್ಟುಕೊಂಡಿದ್ದಾರೆ. ತಿಂಗಳಿಗೆ ಇಷ್ಟು ಪರಿಹಾರ ಹಣ ಬೇಕೇ ಬೇಕು ಎಂದು ಹಟಕ್ಕಿಳಿದಿದ್ದಾರೆ. ಹೌದು, ಶಕ್ತಿ ಯೋಜನೆ ಜಾರಿಯಿಂದ ಆಗಿರುವ ನಷ್ಟವನ್ನು ಸರಿದೂಗಿಸಲು ಆಟೋ ರಿಕ್ಷಾ ಚಾಲಕರು ಪ್ರತಿ ತಿಂಗಳಿಗೆ ತಲಾ 10 ಸಾವಿರ ರೂ.ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಬೆಂಗಳೂರು ಆಟೋ ಚಾಲಕರ ಸಂಘಗಳ ಒಕ್ಕೂಟವು ಪತ್ರಿಕಾಗೋಷ್ಠಿ ಆಯೋಜಿಸಿದ್ದು, ಹಲವಾರು ಆಟೋ ಮತ್ತು ಟ್ಯಾಕ್ಸಿ ಚಾಲಕರು ಶಕ್ತಿ ಯೋಜನೆಯಿಂದ ಆಗುತ್ತಿರುವ ನಷ್ಟವನ್ನು ಹೇಳಿಕೊಂಡಿದ್ದು, ಆಟೋ ಚಾಲಕರ ಬಗೆಗಿನ ಸರ್ಕಾರದ ನಿರ್ಲಕ್ಷ್ಯವನ್ನು ದೂರಿದ್ದಾರೆ.

ಈ ವೇಳೆ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಮಂಜುನಾಥ್ ಅನೇಕ ಚಾಲಕರು ಸಾಲವನ್ನು ಮರುಪಾವತಿಸಲು, ಮನೆ ಬಾಡಿಗೆ ಪಾವತಿಸಲು ಮತ್ತು ತಮ್ಮ ಮಕ್ಕಳ ಶಾಲಾ ಶುಲ್ಕವನ್ನು ಪಾವತಿಸಲು ಕಷ್ಟಪಡುತ್ತಿದ್ದಾರೆ ಎಂದು ಹೇಳಿದರು.

 

ಇದನ್ನು ಓದಿ: Veerendra heggade: ಉಚಿತ ಬಸ್’ನಿಂದ ತುಂಬಿ ತುಳಿಕಿದ ಧರ್ಮಸ್ಥಳ ಖಜಾನೆ: ಮೀನು ತಿಂದು ದೇವಸ್ಥಾನ ಹೊಕ್ಕ ಗಿರಾಕಿಯನ್ನೇ ಮತ್ತೆ ಕ್ಷೇತ್ರಕ್ಕೆ ಆಹ್ವಾನಿಸಿದ ಹೆಗ್ಗಡೆ ! 

Leave A Reply