HD Kumaraswamy: ಉಚಿತ ಅಕ್ಕಿ ಕೊಡಿ, ಜತೆಗೆ ಜನರಿಗೆ ‘ಎಣ್ಣೆ’ ಕೊಡಿ, ಹೆಚ್ ಡಿ ಕುಮಾರ ಸ್ವಾಮಿ ಎಣ್ಣೆ ಪರ ಭರ್ಜರಿ ಬ್ಯಾಟಿಂಗ್ !
Latest news political news HD Kumaraswamy is warning about the mistake of Congress
HD Kumaraswamy: ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿ ಕಾರುತ್ತಿರುವ ಜೆಡಿಎಸ್‌ನ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ (HD Kumaraswamy) ಅವರು ಕಾಂಗ್ರೆಸ್ ತಪ್ಪನ್ನು ಹೇಳಿ ಮತ್ತೆ ಮತ್ತೆ ಎಚ್ಚರಿಸುತ್ತಿದೆ.
ಅನ್ನಭಾಗ್ಯ ಯೋಜನೆ ಅಡಿ 10ಕೆಜಿ ಅಕ್ಕಿ ಕೊಡ್ತೀವಿ ಅಂದು 5ಕೆಜಿ ಅಕ್ಕಿಯನ್ನು ಕೇಂದ್ರದ ತಲೆಗೆ ಕಟ್ಟಿ, ಈಗ ಮತ್ತೇ ಅದೇ ಕೇಂದ್ರದ ಕಡೆ ಬೆರಳು ತೋರಿಸಿ ಅಕ್ಕಿ ಸಿಗದೇ ಜನರಿಗೆ ತಲಾ 170 ಕೊಡಲು ನೀವು ಒಪ್ಪಿಕೊಂಡ್ರಿ, ಈ ಹಣದ ಬದಲು ಎಣ್ಣೆ ಕೊಡಬಹುದಿತ್ತು. ಅಥವಾ ಬೇಳೆ, ಬೆಲ್ಲ ಕೊಡಬಹುದಿತ್ತು. ಜನರಿಗೆ ಅದೂ ಇಲ್ಲ ಈಗ. ಆದರೆ ಕೊಡುವ ಹಣಕ್ಕೆ ಅದಕ್ಕೂ ಈಗ ಬ್ಯಾಂಕ್ ಅಕೌಂಟ್ ಡೀಟೇಲ್ಸ್ ಇಲ್ಲ ಅಂತಾ ಅಧಿಕಾರಿಗಳು ಹೇಳ್ತಾ ಇದಾರೆ ಎಂದು ಕುಮಾರಣ್ಣ ವಿಧಾನಸಭೆಯಲ್ಲಿ ಧ್ವನಿ ಎತ್ತಿದ್ದಾರೆ.
ಕುಮಾರಣ್ಣನ (HD Kumaraswamy) ಈ ಮಾತಿಗೆ, ಈ ರೀತಿಯ ಮಾಹಿತಿ ಕೊಟ್ಟು ನಿಮ್ಮನ್ನು ತಪ್ಪು ದಾರಿಗೆ ಎಳೆದ ಅಧಿಕಾರಿಗಳು ಯಾರು ಎಂದು ಮಾಹಿತಿ ಕೊಡಿ ಎಂದ ಸಚಿವ ಎಚ್.ಕೆ.ಪಾಟೀಲ್ ಕೇಳಿದ್ದು, ಪ್ರತ್ಯುತ್ತರವಾಗಿ ಅದನ್ನು ನೀವೇ ಮಾಹಿತಿ ತಿಳಿದುಕೊಳ್ಳಿ ಎಂದು ಕುಮಾರಸ್ವಾಮಿ ತಿರುಗೇಟು ಕೊಟ್ಟರು.
ಸದ್ಯ ಇದಕ್ಕೆ ಉತ್ತರ ನೀಡಿದ ಸಿದ್ದರಾಮಯ್ಯ, ಒಟ್ಟು 12800000 ಎಪಿಎಲ್, 4 ಕೋಟಿ ನಲವತ್ತೆರಡು ಲಕ್ಷ ಬಿಪಿಎಲ್ ಬಳಕೆದಾರರು ಇದ್ದಾರೆ. ಇವರೆಲ್ಲರಿಗೂ ನಾವು ಡಿಬಿಟಿ ಮೂಲಕ ಹಣ ತಲುಪಿಸುವ ವ್ಯವಸ್ಥೆ ಮಾಡುತ್ತೇವೆ. ನಿಮಗೆ ಮಾಹಿತಿ ನೀಡಿದ ಅಧಿಕಾರಿಗಳು ಯಾರು ಅಂತಾ ಪತ್ತೆ ಹಚ್ಚೋಣ ಎಂದು ಸಿಎಂ ತಿಳಿಸಿದರು. ಜೊತೆಗೆ ಮೊದಲು ಎರಡು ರೂಪಾಯಿಗೆ ಅಕ್ಕಿ ಕೊಡಲು ಆರಂಭ ಮಾಡಿದ್ದು ಆಂಧ್ರಪ್ರದೇಶದ ಎನ್‌ಟಿಆರ್ ಸರ್ಕಾರದಲ್ಲಿ. ನಂತರ ರಾಮಕೃಷ್ಣ ಹೆಗಡೆ ಅವರು ನಂತರ ಕರ್ನಾಟಕದಲ್ಲಿ ಇದೇ ಯೋಜನೆ ಜಾರಿಗೆ ತಂದರು ಎಂದು ಸಿ ಎಂ ಹೇಳಿದರು.
ಈ ಮಾತಿಗೆ ಕುಮಾರಣ್ಣ ಹಲವಾರು ಜನ ರಾಜ್ಯಕ್ಕೆ ಹಲವು ಕೊಡುಗೆಗಳನ್ನು ಕೊಟ್ಟಿದ್ದಾರೆ. ಅದನ್ನು ನಾವೂ ಸ್ಮರಿಸಿಕೊಳ್ಳಬೇಕು. ಐದು ಕೆಜಿ ಅಕ್ಕಿ ಕೊಡುವ ನಿರ್ಣಯ ಒಳ್ಳೆಯದೇ. ಆದರೆ ಚುನಾವಣಾ ಪೂರ್ವದಲ್ಲಿ ಘೋಷಣೆ ಮಾಡಿದ್ದು ಹತ್ತು ಕೆಜಿ ಕೊಡ್ತೀವಿ ಅಂತ. ಆದರೆ ಕೇಂದ್ರದ ಐದು ಕೆಜಿ ಅಕ್ಕಿ ಹೊರತುಪಡಿಸಿ ನಾವು ಹತ್ತು ಕೆಜಿ ಕೊಡ್ತೀವಿ ಅಂದಿದಾರೆ ಅಂತಾ ವಿಶ್ಲೇಷಣೆ ನಡೆಯುತ್ತಿದೆ ಎಂದರು.
ಈಗ ನೀವು ಕೊಡುವ 170 ರುಪಾಯಿ ಮನೆಯ ಯಜಮಾನನ ಅಕೌಂಟ್‌ಗೆ ಹೋಗುತ್ತೋ. ಅಥವಾ ಮನೆಯ ಒಡತಿಗೆ ಹೋಗುತ್ತೋ ಗೊತ್ತಿಲ್ಲ. ನೀವು ಕೊಟ್ಟ ಹಣ ಮದ್ಯಪಾನ, ಆನ್‌ಲೈನ್ ರಮ್ಮಿ, ಮತ್ತಿತರ ಚಟುವಟಿಕೆಗಳಿಗೆ ಹೋಗುತ್ತೋ ಯಾರಿಗೆ ಗೊತ್ತು.? ಹಣದ ಬದಲಿಗೆ ಎಣ್ಣೆ, ಬೆಲ್ಲ, ಮತ್ತಿತರ ಪೌಷ್ಟಿಕ ಆಹಾರ ಕೊಡವಹುದಲ್ಲವೇ ಎಂದು ಧ್ವನಿ ಎತ್ತಿದ್ದಾರೆ.
ಇದನ್ನು ಓದಿ: Snake smuggling: ಅಬ್ಬಬ್ಬಾ..! ಮಹಿಳೆಯ ಎದೆಯ ಮಿದುವಿನಲ್ಲಿ 5 ಜೀವಂತ ಹಾವು ಪತ್ತೆ !