Viral Video: ಪ್ರವಾಸಿ ತಾಣದ ಮೇಲೆ ಪ್ರೇಯಸಿಯ ಹೆಸರು ಕೆತ್ತಿದ ಭೂಪ ! ನಂತರ ಆದದ್ದು ಊಹಿಸಲೂ ಅಸಾಧ್ಯ !

Latest news Viral Video lover wrote his girlfriend's name on the tourist spot

Share the Article

Viral Video: ಸೋಷಿಯಲ್ ಮೀಡಿಯಾದಲ್ಲಿ ಪ್ರತಿದಿನ ಒಂದಲ್ಲ ಒಂದು ವಿಚಾರಗಳು ವೈರಲ್ ಆಗುತ್ತಲೇ ಇರುತ್ತವೆ. ಇದೀಗ ಯುವಕನ ಅವಾಂತರದ ವಿಡಿಯೋ ವೈರಲ್ (Viral Video) ಆಗಿದೆ. ಹೌದು, ಪ್ರಿಯಕರನೊಬ್ಬ ತನ್ನ ಪ್ರೇಯಸಿಯನ್ನು ಮೆಚ್ಚಿಸಲು ಪಾರಂಪರಿಕ ಕಟ್ಟಡದ ಗೋಡೆಯ ಮೇಲೆ ಆಕೆಯ‌ ಹೆಸರನ್ನು ಕೆತ್ತಿದ್ದಾನೆ. ನಂತರ ಏನಾಯ್ತು ಗೊತ್ತಾ?!

ಯುಕೆ ಮೂಲದ ಪ್ರವಾಸಿ ತನ್ನ ಗೆಳತಿಯನ್ನು ಮೆಚ್ಚಿಸಲು ಆಕೆಯ ಹೆಸರನ್ನು ಪಾರಂಪರಿಕ ಕಟ್ಟಡದ ಗೋಡೆ ಮೇಲೆ ಕೆತ್ತಿದ್ದಾನೆ. ಇದರಿಂದಾಗಿ ರೋಮನ್ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾನೆ. ಆತ ತನ್ನ ಪ್ರೇಯಸಿಯ ಹೆಸರಿನ ಮೊದಲಕ್ಷರಗಳನ್ನು ಪ್ರಸಿದ್ಧ 2000-ವರ್ಷ-ಹಳೆಯ ರೋಮನ್ ಪರಂಪರೆಯ ಕೊಲೋಸಿಯಮ್‌ನಲ್ಲಿ ಕೆತ್ತನೆ ಮಾಡಿದ್ದನ್ನು ವಿಡಿಯೋ ಮಾಡಲಾಗಿದೆ.

ವಿಡಿಯೋ ವೈರಲ್ ಆಗಿ ಅಧಿಕಾರಿಗಳಿಗೆ ದೊರಕಿದೆ. ಸದ್ಯ ಈತನನ್ನು ಬಂಧಿಸಲಾಗಿದೆ. ಬಂಧನಕ್ಕೆ ಒಳಗಾದ ನಂತರ ತಪ್ಪಿನ ಅರಿವಾಗಿ ಯುವಕ ಅಧಿಕಾರಿಯನ್ನು ಪರಿಪರಿಯಾಗಿ ಬೇಡಿಕೊಂಡರೂ ಅವರು ಬಿಡಲಿಲ್ಲ ಎಂಬುದಾಗಿ ವರದಿಯಾಗಿದೆ.

ಇನ್ನು ಕೊಲೋಸಿಯಮ್ ಗ್ರೀಕ್ ಹಾಗೂ ರೋಮನ್ ಕಲಾಕೃತಿಯಾಗಿದೆ. ಇದು ಇಟಲಿಯ ರೋಮ್‌ನ ಹೃದಯಭಾಗದಲ್ಲಿದೆ. ಇದು ಇಲ್ಲಿಯವರೆಗೆ ಪ್ರಪಂಚದಲ್ಲಿ ನಿರ್ಮಿಸಲಾದ ಅತಿದೊಡ್ಡ ಪ್ರಾಚೀನ ಆಂಫಿಥಿಯೇಟರ್ (ಕಲಾಕೃತಿ) ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

 

 

ಇದನ್ನು ಓದಿ: Potency Test: ಪುರುಷತ್ವ ಪರೀಕ್ಷೆ ಮತ್ತು ಕನ್ಯತ್ವ ಪರೀಕ್ಷೆ ಹೀಗೂ ಮಾಡ್ಬೋದು ಅಂದ ಕೋರ್ಟ್, ಏನೀ ಹೊಸ ವಿಧಾನ ?! 

Leave A Reply