Home News Marriage: ದೇವಾಲಯದಲ್ಲಿ ಹಿಂದೂ ಜೋಡಿಗೆ ಮದುವೆ ಮಾಡಿಸಿದ ಮುಸ್ಲಿಂ ಲೀಗ್ ; ಹಿಂದೂ-ಮುಸ್ಲಿಂ ಭಾಂದವ್ಯಕ್ಕೆ ಸಾಕ್ಷಿಯಾಯ್ತು...

Marriage: ದೇವಾಲಯದಲ್ಲಿ ಹಿಂದೂ ಜೋಡಿಗೆ ಮದುವೆ ಮಾಡಿಸಿದ ಮುಸ್ಲಿಂ ಲೀಗ್ ; ಹಿಂದೂ-ಮುಸ್ಲಿಂ ಭಾಂದವ್ಯಕ್ಕೆ ಸಾಕ್ಷಿಯಾಯ್ತು ವಿವಾಹ !

Marriage
image source: The news minute

Hindu neighbor gifts plot of land

Hindu neighbour gifts land to Muslim journalist

Marriage: ದೇವಸ್ಥಾನದಲ್ಲಿ ಹಿಂದೂ ಜೋಡಿಯ ಮದುವೆಯನ್ನು (Marriage) ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ನಡೆಸಿರುವ ಘಟನೆ ಕೇರಳದಲ್ಲಿ ನಡೆದಿದೆ. ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇಲ್ಲಿ ಈ ವಿವಾಹವು ಹಿಂದೂ-ಮುಸ್ಲಿಂ ಭಾಂದವ್ಯಕ್ಕೆ ಸಾಕ್ಷಿಯಾಗಿದೆ. ವೆಂಗಾರ ಶ್ರೀ ಅಮ್ಮಂಚೇರಿ ಭಗವತಿ ದೇವಸ್ಥಾನದಲ್ಲಿ ವಿಷ್ಣು ಮತ್ತು ಗೀತಾ ದಂಪತಿಯ ವಿವಾಹವು ಅದ್ದೂರಿಯಾಗಿ ನೆರವೇರಿತು.

ಪಾಲಕ್ಕಾಡ್ ಮೂಲದ ಗೀತಾ ವೆಂಗಾರದ ಮನಾಟ್ಟಿಪರಂಬುವಿನ ರೋಸ್ ಮ್ಯಾನರ್ ಶಾರ್ಟ್ ಸ್ಟೇ ಹೋಮ್‌ನಲ್ಲಿ ವಾಸಿಸುತ್ತಿದ್ದರು. ಮದುವೆಗೆ ಸಕಲ ವ್ಯವಸ್ಥೆಯನ್ನು ಉತ್ತರ ಕೇರಳ ಜಿಲ್ಲೆಯ ವೆಂಗರಾ ಪಂಚಾಯತ್‌ನ 12 ನೇ ವಾರ್ಡ್‌ನ ಮುಸ್ಲಿಂ ಯೂತ್ ಲೀಗ್ ಸಮಿತಿಯು ಮಾಡಿದೆ. ವೆಂಗಾರ ಮಣಟ್ಟಿಪರಂಬು ಮುಸ್ಲಿಂ ಲೀಗ್ ಕಾರ್ಯಕರ್ತರು ಗೀತಾ ಅವರ ವಿವಾಹವನ್ನು ಆಯೋಜಿಸಿದ್ದಾರೆ.

ಮುಸ್ಲಿಮ್ ಲೀಗ್ ರಾಜ್ಯಾಧ್ಯಕ್ಷ ಸೈಯದ್ ಸಾದಿಕಲಿ ಶಿಹಾಬ್ ತಂಗಳ್, ಹಿರಿಯ ಮುಖಂಡ ಹಾಗೂ ಶಾಸಕ ಪಿ.ಕೆ.ಕುನ್ಹಾಲಿಕುಟ್ಟಿಯವರು ಸಮಾರಂಭದಲ್ಲಿ ಪಾಲ್ಗೊಂಡು ಹಿಂದೂ ದಂಪತಿಯನ್ನು ಆಶೀರ್ವದಿಸಿದರು. ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ಮತ್ತು ಕಾಂಗ್ರೆಸ್‌ನ ಹಲವಾರು ನಾಯಕರು ಮದುವೆಗೆ ಆಗಮಿಸಿ ನವವಧುಗಳಿಗೆ ಹಾರೈಸಿದರು.

 

ಇದನ್ನು ಓದಿ: Narendra Modi: ಮೋದಿಯನ್ನು ಬೆಂಬಲಿಸಲಿದ್ದಾರೆ 67 % ಮುಸ್ಲಿಂ ಮಹಿಳೆಯರು ! ಹಾಗೆ ಬೆಂಬಲಿಸಲೂ ಇದೆ ಒಂದು ಭದ್ರ ಕಾರಣ, ಏನದು ?!