HD Kumaraswamy: ನನ್ ಜೊತೆನೂ 5 ಲಕ್ಷ ಜನ ಸೆಲ್ಫಿ ತಗೊಂಡವ್ರೆ ಕುಮಾರಣ್ಣ, ನಿಮ್ ಕಡೆ 10 ಲಕ್ಷ ಸೆಲ್ಫಿ ಇರ್ಬೋದು – ಏನಿದು ಎಚ್‍ಡಿಕೆ-ಶಿವಲಿಂಗೇಗೌಡ ಸೆಲ್ಫಿ ಜಟಾಪಟಿ ?

latest news politics What is HD Kumaraswamy and -Shivalinge Gowda selfie story

Share the Article

HD Kumaraswamy: ಜೆಡಿಎಸ್‌ನ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಯಾವುದೇ ಮಾತು ಪ್ರಾರಂಭಿಸುವ ಮುನ್ನ ಏನಾದರೂ ಒಂದು ಸಣ್ಣ ಪೀಠಿಕೆ ಹಾಕಿಯೇ ಹಾಕುತ್ತಾರೆ. ಹಾಗಿರುವಾಗ ಬುಧವಾರ ವಿಧಾನಸಭೆಯಲ್ಲಿ ನಿಯಮ 69ರ ಮೇರೆಗೆ ಮಾಜಿ ಸಿಎಂ ಕುಮಾರಸ್ವಾಮಿ ಚರ್ಚೆ ಆರಂಭಿಸಿದ್ದಾರೆ.

ಮಾತಿನ ಆರಂಭದ ವೇಳೆ ಹಾಸನ ಜಿಲ್ಲೆಯ ಶಾಸಕರೊಬ್ಬರು’ ಎಂದು ಕುಮಾರಸ್ವಾಮಿ (HD Kumaraswamy) ಹೇಳುತ್ತಿದ್ದಂತೆ ಎದ್ದು ನಿಂತ ಅರಸೀಕೆರೆ ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ, ನಾನು ಹೆಸರು ಇಟ್ಟುಕೊಂಡೆ ಬಂದಿದ್ದೇನೆ, ಹೆಸರು ಇಲ್ಲದೆ ಬಂದಿಲ್ಲ. ಅದು ಯಾಕೆ ಹಾಸನ ಜಿಲ್ಲೆಯ ಶಾಸಕರು ಅಂತೀರಾ? ಎಂದು ಪ್ರಶ್ನೆ ಮಾಡಿದ್ದಾರೆ.

“ನಮ್ಮ ಹೆಸರು ಹೇಳಿ. ನಿಮ್ಮ ಹೆಸರು ಹೇಳೋಕೆ 10ಲಕ್ಷ ಜನ ಇದ್ದರೆ, ನನಗೂ ಹೆಸರು ಕರೆಯೋಕೆ ಜನರಿದ್ದಾರೆ, ನನ್ ಜೊತೆನೂ 5 ಲಕ್ಷ ಜನ ಸೆಲ್ಫಿ ತಗಂಡೋವ್ರೆ ” ಎಂದರು.

ಶಿವಲಿಂಗೇಗೌಡ ಗೌಡರು ‘ನಾವು ನಿಮ್ಮನ್ನು ಎರಡು ಬಾರಿ ಮುಖ್ಯಮಂತ್ರಿಯನ್ನಾಗಿ ಮಾಡಲಿಲ್ಲವೇ? ನಾವು ನಿಮ್ಮನ್ನು ಕುಮಾರಣ್ಣ ಎಂದು ಕರೆಯೋದಿಲ್ಲವೇ? ವಿಶ್ವಾಸ ಇದ್ದಾಗ ನಿಮ್ಮ ಜೊತೆ ಇದ್ದೆವು, ವಿಶ್ವಾಸ ಇಲ್ಲದಿದ್ದಾಗ ಹೊರಬಂದಿದ್ದೇವೆ’ ಎಂದು ಹೇಳುತ್ತಿದ್ದಾಗ ಮಧ್ಯಪ್ರವೇಶಿಸಿದ ಕುಮಾರಸ್ವಾಮಿ, ‘ಆಯ್ತು ಸ್ವಲ್ಪ ಕೇಳಿ ಶಿವಲಿಂಗೇಗೌಡರೆ ಎಂದು ವಿಧಾನಸಭೆಯಲ್ಲಿ ಮಾತು ಮುಂದುವರಿಸಿದರು.

 

ಇದನ್ನು ಓದಿ: ಪುತ್ತೂರು: ಚೆಲ್ಯಡ್ಕ ಸೇತುವೆ ಮುಳುಗಡೆ 

Leave A Reply