Tom Stuker: ಏರ್ ಲೈನ್ಸ್’ಗೆ ತಲೆನೋವಾಗಿ ಪರಿಣಮಿಸಿದ ಈ ಕಸ್ಟಮರ್ ! ಈತ ಬಂದ್ರೆ ಫ್ಲೈಟ್ ಟಿಕೆಟ್ ಬೆಲೆ 100 % ತಂತಾನೇ ಕುಸಿಯುತ್ತೆ !

Airlines has new issue with his new customer about ticke related

Tom Stuker: ಫ್ಲೈಟ್ ಅಲ್ಲಿ ಸುತ್ತಾಡ್ಬೇಕು ಅಂದ್ರೆ ಟಿಕೇಟ್ ತೊಗೋಬೇಕು ಅದಕ್ಕೆ ಹಣ ಬೇಕು. ಇಡೀ ಪ್ರಪಂಚ ಸುತ್ತಾಡ್ಬೇಕು ಅಂದ್ರೂನು ಇದೇ ರೀತಿ ನಿಮ್ಮ ಅಪ್ಲೈ ಆಗುತ್ತೇ. ಆದರೆ, ಇಲ್ಲೊಬ್ಬ ಮಹಾಶಯ ಫ್ರೀ ಆಗಿ ದೇಶ ಸುತ್ತುತ್ತಾನೆ. ಈ ಕಸ್ಟಮರ್ ಏರ್ ಲೈನ್ಸ್’ಗೆ ದೊಡ್ಡ ತಲೆನೋವಾಗಿ ಬಿಟ್ಟಿದ್ದಾನೆ. ಅಷ್ಟಕ್ಕೂ ಏರ್ ಲೈನ್ಸ್’ಗೆ ಬಿಸಿ ಮುಟ್ಟಿಸುವಂತಹ ಕೆಲಸ ಈತನೇನು ಮಾಡಿದ್ದಾನೆ. ಟಿಕೆಟ್ ಇಲ್ಲದೆ ದೇಶ ಹೇಗೆ ಸುತ್ತುತ್ತಾನೆ? ಇಲ್ಲಿದೆ ನೋಡಿ ಇಂಟೆರೆಸ್ಟಿಂಗ್ ಸ್ಟೋರಿ.

ನ್ಯೂಜೆರ್ಸಿಯ ಆಟೋ ಕಂಪನಿಯ ಸಲಹೆಗಾರ ಟಾಮ್ ಸ್ಟುಕರ್ (69) 1990 ರಲ್ಲಿ 290,000 ಡಾಲರ್ ನೀಡಿ ಯುನೈಟೆಡ್ ಏರ್‌ಲೈನ್ಸ್‌ನಿಂದ (United airline) ಜೀವಮಾನದ ಪಾಸ್‌ ಖರೀದಿಸಿದ್ದರು. ಈ ಪಾಸ್ ಮೂಲಕ ಸ್ಟುಕರ್ (Tom Stuker) ಪ್ರಪಂಚವಿಡೀ ಸುತ್ತಾಡಿದ್ದಾರೆ. ಐಷಾರಾಮಿ ಹೊಟೇಲ್‌ಗಳಲ್ಲಿ ವಾಸ ಮಾಡಿದ್ದಾರೆ. ಮೂವತ್ತು ವರ್ಷಗಳಲ್ಲಿ ಆತ ಬರೋಬ್ಬರಿ 37 ಮಿಲಿಯನ್ ಕಿಲೋ ಮೀಟರ್ ದೂರ ಪ್ರಯಾಣಿಸಿದ್ದಾನೆ.

ಈ ಪಾಸ್ ಈತನಿಗೆ ಲಕ್ ಆದ್ರೆ, ಅದೇ ಏರ್‌ಲೈನ್ಸ್‌ ಸಂಸ್ಥೆಗೆ ಇದು ಬ್ಯಾಡ್ ಲಕ್. ಯಾಕೆ ಅಂತೀರಾ? ಈತ ಪಾಸ್ ಖರೀದಿಸಿದ ನಂತರ 33 ವರ್ಷಗಳಲ್ಲಿ 373 ವಿಮಾನಗಳಲ್ಲಿ ಪ್ರಯಾಣ ಮಾಡಿದ್ದಾರೆ. ಎಲ್ಲಾ ಪ್ರಯಾಣವನ್ನು ಸೇರಿಸಿದರೆ 1.46 ಮಿಲಿಯನ್ ಮೈಲಾಗುತ್ತದೆ. ಒಂದು ವೇಳೆ ಪಾಸ್ ಇಲ್ಲದೆ ಹಣ ಕೊಟ್ಟು ಪ್ರಯಾಣಿಸುತ್ತಿದ್ದರೆ ಆಗ ಅವರು ಇದಕ್ಕಾಗಿ 2.44 ಮಿಲಿಯನ್ ಡಾಲರ್ ಹಣ ವ್ಯಯಿಸಬೇಕಾಗಿತ್ತು.

ಸ್ಟುಕರ್ ಒಮ್ಮೆ ಮಲಗದೆಯೇ 12 ದಿನಗಳನ್ನು ನೇರವಾಗಿ ಕ್ರಮಿಸಿದ್ದಾರೆ ಎಂದು ವರದಿ ತಿಳಿಸಿದೆ. ಈಗ 33 ವರ್ಷಗಳ ನಂತರವೂ ಸ್ಟುಕರ್ ಈ ಪಾಸನ್ನು ಬಳಸುತ್ತಿದ್ದಾರೆ. ಒಮ್ಮೆ ನೀವು ಆ ಪಾಸುಗಳನ್ನು ಖರೀದಿಸಿದರೆ, ಅದನ್ನು ಯಾವಾಗ ಬೇಕಾದರೂ ಬಳಸಬಹುದು ಎಂದು ಅವರು ಹೇಳಿದ್ದಾರೆ.

ಈ ಅಮೆರಿಕದ (America) ಪ್ರಜೆ ಪ್ರಪಂಚದಲ್ಲೇ ಅತೀ ಹೆಚ್ಚು ಮೈಲು ದೂರ ಹಾರಾಟ ನಡೆಸಿದ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇಲ್ಲಿಯವರೆಗೆ ಏಕವ್ಯಕ್ತಿ ಪ್ರಯಾಣಿಸಿದ ದೂರ 22 ಮಿಲಿಯನ್ ಕಿಲೋ ಮೀಟರ್ ಆಗಿತ್ತು. ವಾಷಿಂಗ್ಟನ್ ಪೋಸ್ಟ್ (Washington Post) ಸ್ಟುಕರ್ ಪ್ರಯಾಣದ ದೂರವನ್ನು ಲೆಕ್ಕಾಚಾರ ಮಾಡಿದ್ದು, ಅವರು ಒಂದೇ ವರ್ಷದಲ್ಲಿ ಅವರು ಪ್ರಯಾಣಿಸಿದ ದೂರ ಚಂದ್ರನಲ್ಲಿಗೆ ಆರು ಬಾರಿ ಪ್ರಯಾಣ ಮಾಡಿದಷ್ಟು ಇದೆ ಎಂದು ವರದಿ ಮಾಡಿದೆ.

Leave A Reply

Your email address will not be published.