Gruha jyothi Scheme: ಕೇವಲ 4 ನಿಮಿಷಗಳಲ್ಲಿ ಗೃಹ ಜ್ಯೋತಿ ಯೋಜನೆಗೆ ಮನೆಯಲ್ಲೇ ಕೂತು ಅರ್ಜಿ ಸಲ್ಲಿಸಿ ! ಈಗ ಇನ್ನಷ್ಟು ಸಿಂಪಲ್ !
latest news Gruha jyothi Scheme Apply for Griha Jyothi Yojana from home
Gruha jyothi Scheme: ಪಂಚ ಗ್ಯಾರಂಟಿಗಳಲ್ಲಿ ಒಂದಾಗಿರುವ ಗೃಹಜೋತಿ ಉಚಿತ ವಿದ್ಯುತ್ ಯೋಜನೆಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ. ರಾಜ್ಯದ ಜನತೆ ರಾಜ್ಯ ಸರ್ಕಾರದ ಈ ಯೋಜನೆಯ ಲಾಭ ಪಡೆಯಲು ಅರ್ಜಿ ಸಲ್ಲಿಕೆಗೆ ಮುಂದಾಗಿದ್ದಾರೆ. ಅರ್ಜಿ ಸಲ್ಲಿಸಲು ಸೈಬರ್ ಗಳಲ್ಲಿ ಹೌಸ್ ಫುಲ್ ಆಗಿದೆ. ಆದರೆ, ನೀವು ಗಂಟೆಗಟ್ಟಲೆ ಸೈಬರ್ ಗಳ ಮುಂದೆ ಕಾಯುವ ಅಗತ್ಯವಿಲ್ಲ.
ಕೇವಲ 4 ನಿಮಿಷಗಳಲ್ಲಿ ಗೃಹ ಜ್ಯೋತಿ ಯೋಜನೆಗೆ (Gruha jyothi Scheme) ಮನೆಯಲ್ಲೇ ಕೂತು ಅರ್ಜಿ ಸಲ್ಲಿಸಬಹುದು. ಈ ಮಾಹಿತಿ ಓದಿ ಗೊತ್ತಾಗುತ್ತೆ!!.
ಸೇವಾಸಿಂಧು ಪೋರ್ಟಲ್ ನಲ್ಲಿ, ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮ ಒನ್ ಸೆಂಟರ್ ನಲ್ಲಿ ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಅಲ್ಲದೆ, ಗೃಹ ಜ್ಯೋತಿ ಯೋಜನೆಗೆ ನಿಮ್ಮ ಸ್ಮಾರ್ಟ್ ಫೋನ್, ಕಂಪ್ಯೂಟರ್/ ಲ್ಯಾಪ್ಟಾಪ್ ಗಳಿಂದಲೂ ಅರ್ಜಿ ಸಲ್ಲಿಸಬಹುದು.
ಗೃಹಜ್ಯೋತಿ ಯೋಜನೆಗೆ ಬೇಕಾಗುವ ದಾಖಲೆಗಳು :
• ಆಧಾರ್ ಸಂಖ್ಯೆ
• ಆಧಾರ್ ಕಾರ್ಡ್ ನಲ್ಲಿರುವ ಫೋನ್ ನಂಬರ್ ನ ಮೊಬೈಲ್
• ವಿದ್ಯುತ್ ಬಿಲ್
ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಕೆ :
• https://sevasindhugs.karnataka.gov.in/ ಗೆ ಭೇಟಿ ನೀಡಿ.
• ನಿಮ್ಮ ಎಸ್ಕಾಂ ESCOM ಆಯ್ಕೆ ಮಾಡಿ
• ವಿದ್ಯುತ್ ಬಿಲ್ ನಲ್ಲಿರುವ Account ID ಟೈಪ್ ಮಾಡಿ
• ಸ್ವಂತ ಮನೆ ಅಥವಾ ಬಾಡಿಗೆ ಮನೆ ನೀವು ಇರುವುದನ್ನು ಆಯ್ಕೆ ಮಾಡಿ.
• ಅರ್ಜಿದಾರರ ಮನೆಯ ಯಜಮಾನ/ ಯಜಮಾನಿಯ (ಬಾಡಿಗೆ
ಇದ್ದರೆ ಬಾಡಿಗೆಯವರು) ಆಧಾರ್ ಕಾರ್ಡ್ ನ 12 ಸಂಖ್ಯೆ ಟೈಪ್ ಮಾಡಿ
• ಅಧಾರ್ e – KYC ಕೇಳುತ್ತದೆ, ನಂತರ OK ಆಯ್ಕೆ ಮಾಡಿ,
• ಆಧಾರ್ ಕಾರ್ಡ್ ನಲ್ಲಿ ಇರುವ ಫೋನ್ ನಂಬರ್’ಗೆ OTP ಸಂಖ್ಯೆ ಬರುತ್ತದೆ.
• ಒಟಿಪಿ ನಮೂದಿಸಿ, OK ಕ್ಲಿಕ್ ಮಾಡಿ, e – KYC ಮುಗಿಯಿತು.
• ಸಂಪರ್ಕಕ್ಕಾಗಿ ಫೋನ್ ನಂಬರ್ ನಮೂದಿಸಿ, ಈ ಸಂಖ್ಯೆಗೆ ಬಂದ ಒಟಿಪಿ ನಮೂದಿಸಿ OK ಕ್ಲಿಕ್ ಮಾಡಿ.
• I agree ಅಂತ ಇರುವ ಡಿಕ್ಲರೇಶನ್’ಗೆ right tick mark ಮಾಡಿ
• ಕೆಳಗೆ Word verification ಅಂತ ತೋರಿಸುವ 6 ಸಂಖ್ಯೆಯನ್ನು
ಅಲ್ಲಿನ ಬಾಕ್ಸ್ನಲ್ಲಿ ಟೈಪ್ ಮಾಡಿ submit ಮಾಡಿ.
• ನಿಮ್ಮ ಅರ್ಜಿಯ ಮಾಹಿತಿಯ ಹೊಸ ಪೇಜ್ ಕಾಣಿಸುತ್ತದೆ. ಮತ್ತೆ Submit ಕೊಡಿ.
• ನಿಮ್ಮ ಅರ್ಜಿಯ ಸಂಖ್ಯೆಯೊಂದಿಗೆ ಸ್ವೀಕೃತಿ ಪ್ರತಿಯ ಪಿಡಿಎಫ್ ಬರುತ್ತದೆ. ಅದನ್ನು ಡೌನ್ಲೋಡ್ ಮಾಡಿಕೊಳ್ಳಿ.
ಇದನ್ನು ಓದಿ: Hyderabad: ಸಿನಿಮಾ ರಿವ್ಯೂಗೆ ಬರುವ ಯೂ ಟ್ಯೂಬರ್ ಗಳ ಮೇಲೆ ಬ್ಯಾನ್ ಬ್ರಹ್ಮಾಸ್ತ್ರ, ಇದಕ್ಕೆ ಅದೇ ಕಾರಣ !