small savings schemes: ಬ್ಯಾಂಕ್ ಬಡ್ಡಿದರಗಳಲ್ಲಿ ಹೆಚ್ಚಳ, ಈ ಕ್ಷಣದಿಂದಲೇ ಜಾರಿ ಎಂದು ಕೇಂದ್ರ ಘೋಷಣೆ !

latest news small savings schemes Central announcement of increase in bank interest rates

small savings schemes: ಸಣ್ಣ ಉಳಿತಾಯ ಯೋಜನೆಗಳಲ್ಲಿ ಹಣ ಹೂಡಿಕೆ ಮಾಡಿದವರಿಗೆ ಕೇಂದ್ರ ಸರ್ಕಾರ ಭರ್ಜರಿ ಸಿಹಿಸುದ್ದಿ ನೀಡಿದೆ. ಹೌದು, ಸಣ್ಣ ಉಳಿತಾಯ ಯೋಜನೆ (small savings schemes) ಗಳ ಮೇಲಿನ ಬಡ್ಡಿದರವನ್ನು ಸರ್ಕಾರ ಶುಕ್ರವಾರ ಹೆಚ್ಚಳ ಮಾಡಿದ್ದು, ಬಡ್ಡಿದರ ಜುಲೈನಿಂದ ಸೆಪ್ಟೆಂಬರ್‌ವರೆಗಿನ ತ್ರೈಮಾಸಿಕ ಅವಧಿಗೆ ಅನ್ವಯವಾಗಲಿದ್ದು, ಆಯ್ದ ಉಳಿತಾಯ ಯೋಜನೆಗಳ ಬಡ್ಡಿ ದರವನ್ನು ಗರಿಷ್ಠ ಶೇ. 0.3ರಷ್ಟು ಹೆಚ್ಚು ಮಾಡಲಾಗಿದೆ. ಸದ್ಯ ಶನಿವಾರದಿಂದಲೇ ಪರಿಷ್ಕೃತ ದರ ಅನ್ವಯವಾಗಲಿದ್ದು ಜನರು ಇದರ ಪ್ರಯೋಜನ ಪಡೆಯಬಹುದು.

1 , 2 , 3 ಮತ್ತು 5 ವರ್ಷಗಳ ಅವಧಿಯ ಠೇವಣಿಗಳ ಬಡ್ಡಿ ದರ ಹೆಚ್ಚಳ ಮಾಡಿದೆ. 5 ವರ್ಷಗಳ ಮರುಕಳಿಸುವ ಠೇವಣಿ ಶೇ 0.3ರಷ್ಟು, ಅಂಚೆ ಕಛೇರಿಗಳಲ್ಲಿ 1ವರ್ಷ ಠೇವಣಿಯು ಶೇ 0.1, ಹಿರಿಯ ನಾಗರಿಕರ ಉಳಿತಾಯ ಯೋಜನೆ 0.3 ಮತ್ತು ಕಿಸಾನ್ ವಿಕಾಸ್ ಪತ್ರ ಮೇಲಿನ ಬಡ್ಡಿ ದರ ಏರಿಕೆ ಮಾಡಲಾಗಿದೆ.

ಸದ್ಯ ಐದು ವರ್ಷಗಳ ಅವಧಿಯ ಆರ್ಡಿ ಬಡ್ಡಿ ದರವನ್ನು ಅತ್ಯಧಿಕ ಅಂದರೆ ಶೇ. 0.3ರಷ್ಟು ಹೆಚ್ಚಾಗಿದೆ. ಇದರಿಂದ ಪ್ರಸಕ್ತ ವರ್ಷದ 2ನೇ ತ್ರೈಮಾಸಿಕದಲ್ಲಿ ಆರ್ಡಿಡಿ ಗ್ರಾಹಕರ ಶೇ. 6.5ರಷ್ಟು ಬಡ್ಡಿ ಸಿಗಲಿದೆ. ಅಂಚೆ ಕಚೇರಿಯ ಒಂದು ವರ್ಷದ ಅವಧಿ ಠೇವಣಿ ಬಡ್ಡಿ ದರ ಶೇ. 0.1 ಒಟ್ಟಾರೆಯಾಗಿದ್ದು, ಈಗ ಶೇ.6.9ಕ್ಕೇರಿದೆ. ಎರಡು ವರ್ಷಗಳ ಅವಧಿ ಠೇವಣಿ ಬಡ್ಡಿ ದರವನ್ನು ಶೇ. 7ಕ್ಕೇರಿಸಲಾಗಿದೆ. ಮೂರು ಮತ್ತು ಐದು ವರ್ಷಗಳ ಅವಧಿ ಠೇವಣಿ ಬಡ್ಡಿ ದರ ಕ್ರಮವಾಗಿ ಶೇ. 7 ಮತ್ತು ಶೇ. 7.5ರಲ್ಲೇ ಮುಂದುವರಿಯಲಿದೆ.

ಪಿಪಿಎಫ್, ಸುಕನ್ಯಾ ಸಮೃದ್ಧಿ ಯೋಜನೆ, ಹಿರಿಯ ನಾಗರಿಕರ ಉಳಿತಾಯ ಯೋಜನೆಯಲ್ಲಿ ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರದ ಮೇಲಿನ ಬಡ್ಡಿ ದರಲ್ಲಿ ಯಾವುದೇ ಬದಲಾವಣೆ ಇಲ್ಲ.

 

ಇದನ್ನು ಓದಿ: ಮಣಿಪಾಲದಲ್ಲಿ ಕಾರು ಅವಘಡ: KMC ವೈದ್ಯ ಸ್ಥಳದಲ್ಲೇ ಮೃತ್ಯು, ಇನ್ನಿಬ್ಬರಿಗೆ ಗಾಯ! 

Leave A Reply

Your email address will not be published.