Home News Shakthi Free Bus Effect: ಫ್ರೀ ಬಸ್ ಹತ್ತಿ ಹೋದ ಹೆಂಡ್ತಿ ಇನ್ನೂ ವಾಪಸ್ಸಿಲ್ಲ, ಅದೇ...

Shakthi Free Bus Effect: ಫ್ರೀ ಬಸ್ ಹತ್ತಿ ಹೋದ ಹೆಂಡ್ತಿ ಇನ್ನೂ ವಾಪಸ್ಸಿಲ್ಲ, ಅದೇ ಫ್ರೀ ಬಸ್ ಅಡಿಗೆ ತಲೆ ಕೊಡಲು ಹೋದ ಗಂಡ !

Shakthi Free Bus Effect

Hindu neighbor gifts plot of land

Hindu neighbour gifts land to Muslim journalist

Shakthi Free Bus Effect: ಜೂನ್ 11ರಂದು ರಾಜ್ಯ ಸರ್ಕಾರ ಮಹತ್ವದ ಯೋಜನೆಯಾದ ಶಕ್ತಿ ಯೋಜನೆ ಜಾರಿಯಾದ ಬಳಿಕ ಮಹಿಳಾಮಣಿಗಳಿಗೆ ಉಚಿತ ಪ್ರಯಾಣ ಎಂದ ಮೇಲೆ ರಾಜ್ಯದೆಲ್ಲೆಡೆಯು ಪ್ರವಾಸಿ ತಾಣ, ಧಾರ್ಮಿಕ ಕ್ಷೇತ್ರಗಳಿಗೆ ಮಹಿಳೆಯರ ದಂಡು ಸಾಗರೋಪಾದಿಯಲ್ಲಿ ತುಂಬಿ ಪುರುಷರಿಗೆ ಬಸ್ ಹತ್ತಲು ಕೂಡ ಪರದಾಡುವ ಸ್ಥಿತಿ ಎದುರಾಗಿದೆ. ಈ ನಡುವೆ ಶಕ್ತಿ ಯೋಜನೆಯ ಎಫೆಕ್ಟ್ ನಿಂದ ಟ್ರಿಪ್ಗೆ ಹೋದ ಮನೆಗೆ ಬಂದಿಲ್ಲ ಎಂದು ಕುಡುಕ ಪತಿಯೊಬ್ಬ ಮಾಡಿದ ಅವಾಂತರ ನೋಡುಗರ ಪಾಲಿಗೆ ಮನರಂಜನಾ ವಿಷಯವಾಗಿ ಮಾರ್ಪಟ್ಟಿದೆ.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಜಾರಿಗೆ ತಂದ ಶಕ್ತಿ ಯೋಜನೆಯಿಂದ( Shakthi Free Bus Effect)ಫ್ರೀ ಫ್ರೀ ಎಂದು ಟ್ರಿಪ್ ಹೊಡೆಯುವ ಮಹಿಳೆಯರು ಸಿಕ್ಕಿದ್ದೇ ಚಾನ್ಸ್ ಎಂದು ತೀರ್ಥ ಕ್ಷೇತ್ರ ದರ್ಶನ, ಪ್ರವಾಸಿ ತಾಣಗಳಿಗೆ ಭೇಟಿ ನೀಡುವುದು ಕಾಮನ್ ಆಗಿ ಬಿಟ್ಟಿದೆ. ಈ ಫ್ರೀ ಬಸ್ ವ್ಯವಸ್ಥೆಯಿಂದ ನಿಜಕ್ಕೂ ಸಮಸ್ಯೆ ಎದುರಾಗಿರುವುದು ಬಸ್ ನಿರ್ವಾಹಕರಿಗೆ ಮತ್ತು ಪುರುಷರಿಗೆ ಎಂದರೆ ತಪ್ಪಾಗದು.

ಇದೀಗ, ಕಾಂಗ್ರೆಸ್ ಸರ್ಕಾರದ ಶಕ್ತಿ ಯೋಜನೆಯ. ಎಫೆಕ್ಟ್ ನಿಂದ ಟ್ರಿಪ್ ಗೆ ಹೋದ ಹೆಂಡತಿ ಇನ್ನೂ ಮನೆ ಕಡೆಗೆ ಮುಖ ಮಾಡಿಲ್ಲ ಎಂದು ಕುಡುಕನೊಬ್ಬ ತನ್ನ ಗೋಳು ತೋಡಿಕೊಂಡು ಅವಾಂತರ ಸೃಷ್ಟಿಸಿದ್ದಾನೆ. ಫ್ರೀ ಬಸ್ ಹತ್ತಿ ಹೋದ ಮಡದಿ ಮನೆಗೆ ಬಂದಿಲ್ಲವೆಂದು ಕುಡುಕ ಗಂಡ BMTC ಬಸ್ ಅಡಿಗೆ ಬಿದ್ದು ಸಾಯುವ ಪ್ರಯತ್ನ ಮಾಡಿದ್ದು ಮಾತ್ರವಲ್ಲದೇ ಫ್ರೀ ಬಸ್ ಪ್ರಯಾಣ ರದ್ದುಗೊಳಿಸಿ ಎಂದು ಡಿಮ್ಯಾಂಡ್ ಮಾಡಿದ್ದಾನೆ. ಕುಡುಕ ಮಹಾಶಯನ ಅವಸ್ಥೆಗೆ ಹೊಸಕೋಟೆ ಬಿಎಂಟಿಸಿ ಬಸ್ಸಿನಲ್ಲಿ ಕುಳಿತಿದ್ದ ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.

ಹೊಸಕೋಟೆ ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ನಡೆದ ಕುಡುಕನ ಗಲಾಟೆಗೆ ಕುಡಿದು ತೂರಾಡುತ್ತಿದ್ದ ಹಿನ್ನೆಲೆ ಸುಮಾರು ಅರ್ಧಗಂಟೆ ಬಸ್ ಸಂಚಾರ ಸ್ಥಗಿತವಾಗಿತ್ತು. ಆ ಬಳಿಕ ಸಾರ್ವಜನಿಕರು ಕುಡುಕ ಮಹಾಶಯನನ್ನು ರಕ್ಷಣೆ ಮಾಡಿ ಪೊಲೀಸರಿಗೆ ಒಪ್ಪಿಸಿದ್ದಾರೆ ಎನ್ನಲಾಗಿದೆ.

 

ಇದನ್ನು ಓದಿ: Suicide case: ಒಂದು ದೋಣಿಗೆ ಎರಡು ಊರುಕೋಲು ಹಿಡಿದು ಹೊರಟ ಯುವತಿ, ಪಯಣದ ಶುರುವಲ್ಲೇ ಬದುಕು ನೀರಿಗೆ !