Ugliest Dog contest: ವಿಶ್ವದ ಅತ್ಯಂತ ಕೊಳಕು ನಾಯಿಗೆ, ವಿಶಿಷ್ಟ ಬಹುಮಾನ, ಇದೇನು ವಿಚಿತ್ರ ?!

latest news intresting news Ugliest Dog contest Unique prize for world's ugliest dog

Ugliest Dog contest: ಸಾಕು ಪ್ರಾಣಿ ನಾಯಿ ಎಂದರೆ ಎಲ್ಲರಿಗೂ ಅಚ್ಚು ಮೆಚ್ಚು. ನಾಯಿ ಸಾಕುವುದು ಬಾಯಿಯಲ್ಲಿ ಹೇಳಿದಷ್ಟು ಸುಲಭವಲ್ಲ. ಸದ್ಯ ಸಾಕು ಪ್ರಾಣಿಗಳಿಗೆ ಸಂಬಂಧಪಟ್ಟಂತೆ ಹಲವಾರು ರೀತಿಯ ಸ್ಪರ್ಧೆ ಏರ್ಪಡಿಸಲಾಗುತ್ತದೆ. ಅದೇ ರೀತಿ ಇಲ್ಲೊಂದು ಸ್ಪರ್ಧೆ ಬಗ್ಗೆ ನೀವು ಕೇಳಲೇ ಬೇಕು.

ಹೌದು, ಕ್ಯಾಲಿಫೋರ್ನಿಯಾದ ಪೆಟಾಲುಮಾದಲ್ಲಿ ಸೊನೊಮಾ-ಮರಿನ್ ಮೇಳದ ಅಂಗವಾಗಿ ಕಳೆದ 50 ವರ್ಷಗಳಿಂದ ನಡೆಯುತ್ತಿರುವ ‘ಅಗ್ಲಿಯೆಸ್ಟ್ ಡಾಗ್ ಸ್ಪರ್ಧೆ’ (Ugliest Dog contest)ಸ್ಪರ್ಧೆ ನಡೆಯುತ್ತದೆ.

ಸದ್ಯ ಜೂನ್ 23 ರಂದು ನಡೆದ ಸ್ಪರ್ಧೆಯಲ್ಲಿ ಏಳು ವರ್ಷ ವಯಸ್ಸಿನ ‘ಸ್ಕೂಟರ್’ ವಿಶ್ವದ ಅತ್ಯಂತ ಕೊಳಕು ನಾಯಿ ಎಂಬ ಖ್ಯಾತಿಗೆ ಪಾತ್ರವಾಯಿತು. ನಿಯಮದಂತೆ ಟ್ರೋಫಿ ಹಾಗೂ 1.23 ಲಕ್ಷ ($1,500) ರೂಪಾಯಿ ಮೊತ್ತವನ್ನು ಬಹುಮಾನವಾಗಿ ನೀಡಲಾಗಿದೆ. ನಾಯಿಗಳನ್ನು ದತ್ತು ಪಡೆದುಕೊಳ್ಳುವ ಬಗ್ಗೆ ಜನರನ್ನು ಉತ್ತೇಜಿಸುವ ಸಲುವಾಗಿ ಈ ಸ್ಪರ್ಧೆಯನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ.

ಸ್ಕೂಟರ್ ಹೆಸರಿನ ವಿರೂಪಗೊಂಡ ನಾಯಿ, ಹಿಂಗಾಲುಗಳೊಂದಿಗೆ ಜನಿಸಿದ್ದು, ಮುಂಗಾಲಿನ ಸಹಾಯದೊಂದಿಗೆ ಮುಂದೆ ಹೋಗುತ್ತದೆ. ಅಲ್ಲದೆ ಅಸಾಮಾನ್ಯ ಎಂಬಂತಹ ಕೋರೆಹಲ್ಲುಗಳನ್ನು ಹೊಂದಿದೆ. ಕಪ್ಪು ಬಣ್ಣ ‘ಸ್ಕೂಟರ್’, ರೋಮಗಳನ್ನು ಹೊಂದಿಲ್ಲ. ಹೀಗಾಗಿ ಇತರೆ ನಾಯಿಗಳಂತೆ ಆಕರ್ಷಕವಾಗಿ ಕಾಣಿಸುತ್ತಿಲ್ಲ.

‘ಸ್ಕೂಟರ್’ ನ್ನು Saving Animals From Euthanasia (SAFE) ಎಂಬ ತಂಡದ ಸದಸ್ಯರು ಈ ನಾಯಿಯನ್ನು ರಕ್ಷಿಸಿದ್ದಾರೆ. ಇದೀಗ ಲಿಂಡಾ ಎಲ್ಮ್ಕ್ವಿಸ್ಟ್(Linda Elmquist) ಎಂಬಾಕೆ ದತ್ತು ಪಡೆದು ಆರೈಕೆ ಮಾಡುತ್ತಿದ್ದಾರೆ ಎಂಬ ಮಾಹಿತಿ ದೊರೆತಿದೆ.

Leave A Reply

Your email address will not be published.