Aadhaar card: ಜನನ ಮರಣ ನೋಂದಣಿಗೆ ಇನ್ನು ಆಧಾರ್ ಕಾರ್ಡ್ ಕಡ್ಡಾಯ ಅಲ್ಲ !

latest news Aadhaar card is not mandatory for birth and death registration

Aadhaar card: ದೇಶದಲ್ಲಿ ಜನನ ಮತ್ತು ಮರಣ ನೋಂದಣಿಗೆ ಆಧಾರ್‌ ಸಂಖ್ಯೆ ಕಡ್ಡಾಯವಲ್ಲ. ಹೀಗೆಂದು ಭಾರತದ ರಿಜಿಸ್ಟ್ರಾರ್‌ ಜನರಲ್‌ ಬಿಗ್ ಅಪ್ಡೇಟ್ ನೀಡಿದ್ದಾರೆ.ಕೇಂದ್ರ ಸರ್ಕಾರವು ಜನನ ಮತ್ತು ಮರಣ ನೋಂದಣಿ ಸಂದರ್ಭದಲ್ಲಿ ಆಧಾರ್ ದೃಢೀಕರಣವನ್ನು ಕೈಗೊಳ್ಳುವಂತೆ ರಿಜಿಸ್ಟ್ರಾರ್ ಜನರಲ್ (ಆರ್‌ ಜಿ ಐ) ಕಚೇರಿಗೆ ಅನುಮತಿ ನೀಡಿದೆ. ಆದರೆ, ಅಂತಹ ನೋಂದಣಿಗೆ ಆಧಾರ್ ಕಾರ್ಡ್(Aadhaar card) ಒದಗಿಸುವುದು ಕಡ್ಡಾಯವಲ್ಲ ಎಂದೂ ಸಹ ತಿಳಿಸಿದೆ.

ಜೂನ್ 27 ರಂದು ಪ್ರಕಟವಾದ ಅಧಿಸೂಚನೆಯ ಪ್ರಕಾರ, ಜನನ ಮತ್ತು ಮರಣಗಳ ನೋಂದಣಿಯ ಸಮಯದಲ್ಲಿ ಗುರುತಿನ ವಿವರಗಳನ್ನು ದೃಢೀಕರಿಸಲು ಆಧಾರ್ ಡಾಟಾಬೇಸ್ ಅನ್ನು ಬಳಸಲು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು RGI ಕಚೇರಿಗೆ ಅನುಮತಿಯನ್ನು ನೀಡಿದೆ.

ಜನನ ಮತ್ತು ಮರಣ ಪ್ರಮಾಣ ಪತ್ರಗಳ ನೊಂದಣಿಯನ್ನು 1969ರ ಬರ್ತ್ ಹಾಗೂ ಡೆತ್ ಕಾಯ್ದೆ(RBD) ಅಡಿಯಲ್ಲಿ ಮಾಡಲಾಗುತ್ತದೆ. ಕೇಂದ್ರ ಸರ್ಕಾರವು ಉತ್ತಮ ಆಡಳಿತವನ್ನು ಉತ್ತೇಜಿಸಲು, ಸಾರ್ವಜನಿಕ ನಿಧಿಯ ಹರಿವನ್ನು ಮತ್ತು ಜೀವನ ಸೌಕರ್ಯವನ್ನು ಉತ್ತೇಜಿಸುವ ಸಲುವಾಗಿ ಆಧಾರ್ ದೃಢೀಕರಣವನ್ನು ಅನುಮತಿಸಬಹುದು, ಆದರೆ ಕಡ್ಡಾಯವಾಗುವುದಿಲ್ಲ ಎಂದು ಸಚಿವಾಲಯವು ವರದಿಯಲ್ಲಿ ಉಲ್ಲೇಖಿಸಿದೆ.

ಕೇಂದ್ರಾಡಳಿತ ಪ್ರದೇಶ ಮತ್ತು ರಾಜ್ಯ ಸರ್ಕಾರ ಆಡಳಿತವು ಆಧಾರ್ ದೃಢೀಕರಣದ ಬಳಕೆಗೆ ಸಂಬಂಧಿಸಿದಂತೆ ಸಚಿವಾಲಯವು ನಿಗದಿಪಡಿಸಿರುವ ಮಾರ್ಗಸೂಚಿಗಳನ್ನು ಅನುಸರಿಸುತ್ತದೆ.

 

ಇದನ್ನು ಓದಿ: Gruhalakshmi: ಗೃಹಲಕ್ಷ್ಮಿ ಯರಿಗೆ 2000 ರೂ ಸಿಗುವ ಖಚಿತ ದಿನಾಂಕ ರಿವೀಲ್: ಸಿದ್ದರಾಮಯ್ಯ! 

Leave A Reply

Your email address will not be published.