Cyber fraud: ಸಿಂಗಲ್ ಆಗಿದ್ದ 75ರ ವೃದ್ಧೆಗೆ ಮಿಂಗಲ್ ಆಗೋ ಬಯಕೆ! ನಂಬಿಸಿ, ಲಕ್ಷ ಲಕ್ಷ ಉಡಾಯಿಸಿದ ಕಿರಾತಕ!
Latest news Cyber fraud old woman meets german man online gets scammed
Cyber fraud: ಸೈಬರ್ ಕ್ರೈಂ ನಂತಹ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಸಾಮಾಜಿಕ ಮಾಧ್ಯಮ, ಮೆಸೆಜ್, ಓಟಿಪಿ, ಲಿಂಕ್ಗಳ (Link) ಮೂಲಕ ಹ್ಯಾಕರ್ಸ್ ಹಣವನ್ನು ದೋಚುತ್ತಲೇ ಇದ್ದಾರೆ. ಡೇಟಿಂಗ್ ಆ್ಯಪ್ಗಳು ಕೂಡ ಈಗ ಸೈಬರ್ (Cyber fraud) ಕ್ರೈಂನ ಹೊಸ ವಂಚನೆಯ ಜಾಲವಾಗಿದೆ. ಮೊದಲೆಲ್ಲ ಹನಿಟ್ಯ್ರಾಪ್ ಮಾಡಲಾಗುತ್ತಿತ್ತು. ಇತ್ತೀಚೆಗೆ ನೇರವಾಗಿ ಪ್ರೀತಿಸಿ, ನಂಬಿಸಿ ಹಣವನ್ನು ದೋಚುವುದು ಸಾಮಾನ್ಯವಾಗಿದೆ. ಇದೀಗ ಅಂತಹುದೇ ಘಟನೆಯೊಂದು ಮುಂಬೈ ನಗರದಲ್ಲಿ ಬೆಳಕಿಗೆ ಬಂದಿದೆ.
ಮುಂಬೈ ನಗರದ ದಾದರ್ನಲ್ಲಿ (Mumbai Dadar) ವಾಸಿಸುತ್ತಿರುವ 75 ವರ್ಷದ ಮಹಿಳೆಯೊಬ್ಬರಿಗೆ ಮದುವೆಯಾಗುತ್ತೇನೆಂದು ನಂಬಿಸಿ, ಲಕ್ಷ ಲಕ್ಷ ಪಂಗನಾಮ ಹಾಕಿರುವ ಘಟನೆ ನಡೆದಿದೆ.
ಮಹಿಳೆಯು ಆನ್ಲೈನ್ನಲ್ಲಿ (Online) ಸಂಗಾತಿಯನ್ನು (Partner) ಹುಡುಕುತ್ತಿದ್ದರು. ಈ ವೇಳೆ ಆಕೆಯ ವಾಟ್ಸಪ್ಗೆ ಸಂದೇಶವೊಂದು ಬಂದಿದ್ದು, ಅದರಲ್ಲಿ ತನ್ನನ್ನು ಕ್ರಿಸ್ ಪಾಲ್ ಎಂದು ಪರಿಚಯಿಸಿಕೊಂಡಿದ್ದು ಹಾಗೂ ತಾನೂ ಜರ್ಮನ್ ಪ್ರಜೆ ಎಂದಿದ್ದಾನೆ. ತನ್ನ ಪತ್ನಿ ಮೃತಪಟ್ಟಿರುವುದರಿಂದಾಗಿ ತಾನೂ ಕೂಡ ಮದುವೆಯಾಗಲು ಸಂಗಾತಿಯನ್ನು ಹುಡುಕುತ್ತಿರುವುದಾಗಿ ತಿಳಿಸಿದ್ದಾನೆ. ಅಲ್ಲದೆ ತಾನೊಬ್ಬ ಶ್ರೀಮಂತ ಮನೆತನಕ್ಕೆ ಸೇರಿದವನಾಗಿದ್ದು, ತಾವು ಬಯಸಿದರೆ ನಿಮ್ಮನ್ನು ಮದುವೆಯಾಗುತ್ತೇನೆ ಎಂದು ಪ್ರೀತಿಯ ಮಾತುಗಳನ್ನಾಡಿ ಮಹಿಳೆಯನ್ನು ಮೋಸದ ಜಾಲಕ್ಕೆ ಸಿಲುಕಿಸಿದ್ದಾನೆ.
ತಾನು ಶೀಘ್ರದಲ್ಲಿ ಮುಂಬೈಗೆ ಬರಲಿದ್ದೇನೆಂದು ಆ ಮಹಿಳೆಗೆ ಮದುವೆಯ ಆಸೆಯನ್ನು ಹುಟ್ಟಿಸಿದ್ದಾನೆ. ಸ್ವಲ್ಪ ದಿನಗಳ ನಂತರ ಆ ವ್ಯಕ್ತಿ ಮತ್ತೆ ಮಹಿಳೆಗೆ ಕರೆಮಾಡಿ, ಕೆಲವು ದುಬಾರಿ ಉಡುಗೊರೆಗಳನ್ನು ಕಳುಹಿಸಿದ್ದಾಗಿ ಹೇಳಿದ್ದಾನೆ. ಸ್ವಲ್ಪ ಸಮಯದಲ್ಲೇ ಮತ್ತೊಬ್ಬ ಮಹಿಳೆ ಸಂತ್ರಸ್ತೆಗೆ ಕರೆ ಮಾಡಿ, ತಾನು ಕಸ್ಟಮ್ಸ್ ಇಲಾಖೆಯ ಅಧಿಕಾರಿ ಎಂದು ಪರಿಚಯಿಸಿಕೊಂಡು, ನಿಮಗೆ ಪಾರ್ಸಲ್ ಬಂದಿದ್ದು, 3.85 ಲಕ್ಷ ಸುಂಕ ಕಟ್ಟಬೇಕೆಂದು ಹೇಳಿದ್ದಾಳೆ. ಅದನ್ನು ನಂಬಿದ ವೃದ್ಧ ಮಹಿಳೆ ಹಣವನ್ನು ನೀಡಿದ್ದಾಳೆ.
ಆದರೆ ಮಹಿಳೆ ಹಣ ನೀಡಿದ ನಂತರ ಯಾವುದೇ ಉಡುಗೊರೆಯನ್ನೂ ಸ್ವೀಕರಿಸಲಿಲ್ಲ ಈ ಬಗ್ಗೆ ವ್ಯಕ್ತಿಗೆ ತಿಳಿಸಿದಾಗ, ಆತನು ಮುಂಬೈಗೆ ಬಂದಾಗ ಆ ಹಣವನ್ನು ನೀಡುವುದಾಗಿ ಮಹಿಳೆಯನ್ನು ನಂಬಿಸಿದ್ದಾನೆ. ಕೆಲವು ದಿನಗಳ ನಂತರ ಮಹಿಳೆಗೆ ಮತ್ತೆ ಕರೆ ಮಾಡಿದ್ದಾರೆ. ತಾನು ಮುಂಬೈನಲ್ಲಿದ್ದೇನೆ, ಆದರೆ ವಿದೇಶಿ ಕರೆನ್ಸಿ ಇರುವುದರಿಂದ ಕಸ್ಟಮ್ಸ್ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದೇನೆ ಎಂದು ಹೇಳಿದ್ದಾನೆ. ಅಲ್ಲಿಂದ ಹೊರಬರಲು ಎಂಟು ಲಕ್ಷ ರೂಪಾಯಿ ಅವಶ್ಯಕತೆ ಇರುವುದರಿಂದ, ಕಳುಹಿಸುವಂತೆ ಮಹಿಳೆಗೆ ಮನವಿ ಮಾಡಿದ್ದಾನೆ. ಅಲ್ಲದೆ ತಾನೂ ಭೇಟಿ ಮಾಡುವಾಗ ಎಲ್ಲಾ ಹಣವನ್ನು ಒಟ್ಟಿಗೆ ಕೊಡುವುದಾಗಿ ಹೇಳಿ 8 ಲಕ್ಷ ಹಣವನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದಾನೆ. ಎಂದು ಹಿರಿಯ ಪೊಲೀಸ್ ಅಧಿಕಾರಿ ದೀಪಕ್ ಚೌಹಾಣ್ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಆರೋಪಿಗಳು ನೈಜೀರಿಯನ್ ಸೈಬರ್ ಕಾನ್ ಗ್ಯಾಂಗ್ (Nigerian cyber con gang) ಸದಸ್ಯರು ಎಂದು ತಿಳಿದುಬಂದಿದ್ದು, ಅವರು ಜರ್ಮನ್ ಪ್ರಜೆ ಎಂದು ನಂಬಿಸಿ ಮಹಿಳೆಗೆ ಮೋಸ ಮಾಡಿದ್ದಾರೆ. ಎಂದು ಪೊಲೀಸರು (Police) ಮಾಹಿತಿಯನ್ನು ನೀಡಿದ್ದಾರೆ.