Bengaluru: ಮಹಿಳೆಯರೇ ಎಚ್ಚರ! ಸ್ನಾನದ ವೀಡಿಯೋ ಮಾಡುತ್ತಿದ್ದ ಕಾಮುಕ ಅರೆಸ್ಟ್‌!

Latest Bengaluru crime news a man who was making a video of women bathing in a ladies PG was arrested

Share the Article

Bengaluru: ಮಹಿಳೆಯರು ಸ್ನಾನ ಮಾಡುವ ವೀಡಿಯೋ ಮಾಡಿದ ಯುವಕನೋರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಅಶೋಕ್‌ (25 ವರ್ಷ) ಎಂಬಾತನೇ ಆರೋಪಿ. ಈ ಘಟನೆ ಬೆಂಗಳೂರು (Bengaluru) ಮಹದೇವಪುರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಆರೋಪಿ ಅಶೋಕ್‌ ವಾಸವಾಗಿದ್ದ ಪಿಜಿ ಮುಂದೆ ಲೇಡಿಸ್‌ ಪಿಜಿ ಇದ್ದು, ಈತ ಸ್ನಾನದ ಕೋಣೆಯ ವೆಂಟಿಲೇಟರ್‌ ಮೂಲಕ ಮಹಿಳೆಯರು ಸ್ನಾನ ಮಾಡುತ್ತಿದ್ದ ವೀಡಿಯೋ ಮಾಡುತ್ತಿದ್ದ ಎನ್ನಲಾಗಿದೆ. ಈತನ ಮೊಬೈಲ್‌ನಲ್ಲಿ ಏಳು ಜನರ ಸ್ನಾನದ ವೀಡಿಯೋಗಳು ಪತ್ತೆಯಾಗಿದೆ.

ಈತ ಮಹಿಳೆಯರು ಸ್ನಾನ ಮಾಡುವ ವೀಡಿಯೋ ಮಾಡುವ ಸಂದರ್ಭದಲ್ಲೇ ರೆಡ್‌ಹ್ಯಾಂಡ್‌ ಆಗಿ ಸ್ಥಳೀಯರ ಕೈಗೆ ಸಿಕ್ಕಿಬಿದ್ದಿದ್ದಾನೆ. ನಂತರ ಇವನನ್ನು ಪೊಲೀಸರ ವಶಕ್ಕೆ ನೀಡಲಾಗಿತ್ತು. ಈತ ಕಳೆದ ಮೂರ್ನಾಲ್ಕು ತಿಂಗಳಿನಿಂದ ಈ ಕೃತ್ಯ ಮಾಡುತ್ತಿದ್ದ ಎನ್ನಲಾಗಿದೆ. ಅಶೋಕ್‌ ಖಾಸಗಿ ಬ್ಯಾಂಕ್‌ ಕ್ರೆಡಿಟ್‌ ಕಾರ್ಡ್‌ ವಿಭಾದಲ್ಲಿ ಕೆಲಸ ಮಾಡುತ್ತಿದ್ದ. ಸದ್ಯಕ್ಕೆ ಈಗ ಆರೋಪಿಯನ್ನು ಬಂಧಿಸಲಾಗಿದ್ದು, ಜೈಲು ಸೇರಿದ್ದಾನೆ.

ಇದನ್ನೂ ಓದಿ: Train accident: ಒಡಿಶಾ ರೈಲು ದುರಂತ ಮಾಸುವ ಮುನ್ನವೇ ಮತ್ತೊಂದು ದುರ್ಘಟನೆ! ರೈಲುಗಳ ಡಿಕ್ಕಿ, ರೆಡ್‌ಸಿಗ್ನಲ್‌ ಇದ್ದರೂ ವೇಗವಾಗಿ ಬಂದ ರೈಲು

Leave A Reply