K.S Eshwarappa: ಭಾರತೀಯರೆಲ್ಲರೂ ಸಮಾನರು, ಮುಸ್ಲಿಮರ ಬಹುಪತ್ನಿತ್ವ ಕಡಿವಾಣಕ್ಕೆ ಏಕನಾಗರಿಕ ಸಂಹಿತೆ ಶೀಘ್ರದಲ್ಲಿ ಜಾರಿ: ಕೆ.ಎಸ್‌.ಈಶ್ವರಪ್ಪ

political news karnataka news Single Citizen Code to curb polygamy soon K.S. Eshwarappa

K.S Eshwarappa: ಕೊಪ್ಪಳ ನಗರದ ಶಿವಶಾಂತ ಮಂಗಲ ಭವನದಲ್ಲಿ ಶುಕ್ರವಾರ ನಡೆದ ಬಿಜೆಪಿ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದ ಮಾಜಿ ಡಿಸಿಎಂ ಕೆ.ಎಸ್‌.ಈಶ್ವರಪ್ಪ (K.S Eshwarappa) ಅವರು, ಹಿಂದೂಗಳಿಗೆ ಒಬ್ಬಳು ಪತ್ನಿ ಮಾತ್ರ. ಆದರೆ, ಅದೇ ಮುಸ್ಲಿಮರಿಗೆ 5 ಪತ್ನಿಯರು. ಇಂಥ ಅಸಮಾನತೆ, ಬಹುಪತ್ನಿತ್ವ ಪದ್ಧತಿಗೆ ಕಡಿವಾಣ ಹಾಕಲು ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಯಾಗಲಿದೆ ಎಂದು ಹೇಳಿದ್ದಾರೆ.

ಭಾರತೀಯರೆಲ್ಲರೂ ಸಮಾನರು. ಜಾತಿ, ಧರ್ಮ ಮೀರಿಯೂ ಭಾರತೀಯರಾಗಿ ಏಕತೆಯಿಂದ ಇರಬೇಕು. ಇದಕ್ಕಾಗಿಯೇ ಏಕರೂಪ ನಾಗರಿಕ ಸಂಹಿತೆ ಅಗತ್ಯವಾಗಿದ್ದು, ಇದನ್ನು ಕೇಂದ್ರ ಸರ್ಕಾರ ಶೀಘ್ರ ಜಾರಿ ಮಾಡಲಿದೆ ಎಂದು ಹೇಳಿದ್ದಾರೆ.

ಅದಲ್ಲದೆ ಸುಳ್ಳಿಗೆ ಮತ್ತೊಂದು ಹೆಸರೇ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ. ಇವರು ನೀಡಿರುವ ಗ್ಯಾರಂಟಿಯೆಲ್ಲ ಸುಳ್ಳಾಗಲಿವೆ. ಈಗಾಗಲೇ ಗ್ಯಾರಂಟಿ ಜಾರಿ ಮಾಡಲು ಹೆಣಗಾಡುತ್ತಿದ್ದಾರೆ. ಆದರೂ ಆಗುತ್ತಿಲ್ಲ. ಇನ್ನಿಲ್ಲದ ಷರತ್ತು ವಿಧಿಸಿ, ಗ್ಯಾರಂಟಿ ಕಳೆದುಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದರು.

ಇನ್ನು ನರೇಂದ್ರ ಮೋದಿ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಅಪಪ್ರಚಾರಕ್ಕೆ ನಾವು ಹೆದರುವುದಿಲ್ಲ ಎಂದು ಹೇಳಿದರು. ರಾಜ್ಯದಲ್ಲಿರುವ ಸಿದ್ದರಾಮಯ್ಯ ಸರ್ಕಾರ ಐದು ವರ್ಷ ಇರಲು ಸಾಧ್ಯವೇ ಇಲ್ಲ. ಒಳಗೊಳಗೆ ಸಿಎಂ ಫೈಟ್‌ ನಡೆದಿದೆ. ಇನ್ನು ಕೆಲಕಾಲದ ನಂತರ ಇದು ಸ್ಫೋಟಗೊಳ್ಳುತ್ತದೆ ಎಂದರು.

ಇನ್ನು ಚುನಾವಣೆ ಸೋಲಿಗೆ ನಾವು ಹೆದರುವುದಿಲ್ಲ. ಹಿಂದೆಲ್ಲ ಲೋಕಸಭೆ, ವಿಧಾನ ಸಭೆ ಚುನಾವಣೆಯಲ್ಲಿ ಕೇವಲ ಇಬ್ಬರು ಗೆದ್ದಿದ್ದರೂ ಎದೆಗುಂದಿಲ್ಲ. ಯಾವುದೋ ಚುನಾವಣೆಯಲ್ಲಿ ಸೋತಾಗ ಹೆದರುತ್ತೇವೇನು? ಯಾವುದೋ ಗ್ಯಾರಂಟಿ ತೋರಿಸಿ ಗೆದ್ದಿಲ್ಲ. ಕಾಂಗ್ರೆಸ್ಸಿನವರಿಗೆ ಅಧಿಕಾರ ಸಿಕ್ಕಿದೆ ಎಂದು ಬೀಗಬಹುದು . ಆದರೆ ಜನ ಲೋಕಸಭೆಯಲ್ಲಿ ಸೋಲಿಸಲು ಬಕ ಪಕ್ಷಿಯಂತೆ ಕಾಯುತ್ತಿದ್ದಾರೆ ಎಂದರು.

“ಜುಲೈ 4ರೊಳಗಾಗಿ ಗ್ಯಾರಂಟಿ ಕೊಡದಿದ್ದರೆ ವಿಧಾನಸಭೆ ಒಳಗೂ ಮತ್ತು ಹೊರಗೂ ಹೋರಾಟ ಮಾಡುತ್ತೇವೆ. ಹುಲಿಗೆಮ್ಮದೇವಿ ಮೇಲೆ ಆಣೆ ಮಾಡಿ ಹೇಳುತ್ತೇನೆ. ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಬಿಜೆಪಿ ಗೆಲ್ಲುತ್ತದೆ. ಕೇಂದ್ರದಲ್ಲಿ ನರೇಂದ್ರ ಮೋದಿ ಮತ್ತೆ ಅಧಿಕಾರಕ್ಕೆ ಬರುತ್ತಾರೆ ಎಂದು ಖುಷಿಯಾಗಿ ಹೇಳಿಕೊಂಡಿದ್ದಾರೆ”.

 

ಇದನ್ನು ಓದಿ: Electricity bill: ರಾತ್ರಿ ವೇಳೆ ವಿದ್ಯುತ್ ಬಳಸಿದರೆ ಹೆಚ್ಚು ಶುಲ್ಕ: ಕೇಂದ್ರದ ಹೊಸ ರೂಲ್ಸ್

Leave A Reply

Your email address will not be published.