Home Breaking Entertainment News Kannada Actress Childhood photo : ದಕ್ಷಿಣದ ಸ್ಟಾರ್​ ನಟಿಯ ಬಾಲ್ಯದ ಫೋಟೋ ವೈರಲ್ ; ಸೂಪರ್...

Actress Childhood photo : ದಕ್ಷಿಣದ ಸ್ಟಾರ್​ ನಟಿಯ ಬಾಲ್ಯದ ಫೋಟೋ ವೈರಲ್ ; ಸೂಪರ್ ಸ್ಟಾರ್ ರಜನಿಕಾಂತ್ ಜೊತೆಗಿರುವ ಈ ಸ್ಟಾರ್ ನಟಿ ಯಾರು ಗುರುತಿಸುತ್ತೀರಾ?

Actress Childhood photo
Image Source: tv9

Hindu neighbor gifts plot of land

Hindu neighbour gifts land to Muslim journalist

Actress Childhood photo : ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ನಟ, ನಟಿಯರ ಬಾಲ್ಯದ ಫೋಟೋಗಳು ವೈರಲ್ ಆಗುತ್ತಿದೆ. ಈ ಹಿಂದೆ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ (Virat Kohli) ಬಾಲ್ಯದ ಫೋಟೋ (Virat Kohli childhood photo) ವೈರಲ್ ಆಗಿತ್ತು. ಹಾಗೆಯೇ ನಾಗಿಣಿ ಸೀರಿಯಲ್ ನಟಿ ನಮೃತಾ ಗೌಡ (Namratha Gowda), ಕರಾವಳಿಯ ಚೆಲುವೆ ನಟಿ ಪೂಜಾ ಹೆಗ್ಡೆ (Pooja Hegde), ಸ್ಟಾರ್ ನಟಿ ಸಮಂತಾ (Actress samanta Ruth Prabhu) ಬಾಲ್ಯದ ಫೋಟೋ ವೈರಲ್ ಆಗಿತ್ತು. ಇದೀಗ ಖ್ಯಾತ ಸ್ಟಾರ್ ನಟಿಯ ಬಾಲ್ಯದ ಫೋಟೋ (Actress Childhood photo) ವೈರಲ್ ಆಗಿದೆ. ಯಾರು ಗೊತ್ತಾ? ಗೆಸ್ ಮಾಡಿ ನೋಡೋಣ!!.

ಫೋಟೋದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ (Rajinikanth) ಕೈಯಲ್ಲಿ ಒಂದು ಮುದ್ದಾದ ಮಗುವಿದೆ. ಆ ಮಗು ಈಗ ಸ್ಟಾರ್ ನಟಿಯಾಗಿ ಮಿಂಚುತ್ತಿದ್ದಾರೆ. ಇವರು ಬೆಳ್ಳಿತೆರೆಗೆ ಬಾಲ ಕಲಾವಿದೆಯಾಗಿ ಪಾದಾರ್ಪಣೆ ಮಾಡಿದರು. ನಂತರ ನಾಯಕಿಯಾಗಿ ದಕ್ಷಿಣ ಚಿತ್ರರಂಗದಲ್ಲಿ ಮಿಂಚಿದರು. ಯಾರು ಈ ಬಾಲಕಿ ಗೊತ್ತಾಯ್ತಾ? ಈ ನಟಿ ಬೇರಾರೂ ಅಲ್ಲ ಮೀನಾ. ಮೀನಾಗೆ ಕೇವಲ 7 ವರ್ಷ ಇರುವಾಗ ತೆಗೆದ ಫೋಟೋ ಇದೀಗ ವೈರಲ್ ಆಗುತ್ತಿದೆ.

ಬಾಲ ಕಲಾವಿದೆಯಾಗಿ ಬಣ್ಣದ ಲೋಕಕ್ಕೆ ಪ್ರವೇಶಿಸಿ ನಟಿ ಮೀನಾ (Actress Meena) ಸ್ಟಾರ್ ಹಿರೋಯಿನ್ ಆಗಿ ಮೆರೆದಿದ್ದಾರೆ. 6 ವರ್ಷವಿದ್ದಾಗಲೇ 1982ರಲ್ಲಿ ಚಿತ್ರರಂಗ ಪ್ರವೇಶಿಸಿದ ನಟಿ ಮೀನಾ ಅವರು ಸುಮಾರು ಮೂರು ದಶಕಗಳ ಕಾಲ ಚಿತ್ರರಂಗದಲ್ಲಿ ಸ್ಟಾರ್ ನಾಯಕಿಯಾಗಿ ಮಿಂಚಿದ್ದು, 1990ರಲ್ಲಿ ಪೂರ್ಣಪ್ರಮಾಣದ ನಟಿಯಾಗಿ ಮೀನಾ ಗುರುತಿಸಿಕೊಂಡರು. ಸೌತ್ ಫಿಲ್ಮ್ ಇಂಡಸ್ಟ್ರಿಯಲ್ಲಿ ಸೌಂದರ್ಯ ಮತ್ತು ನಟನೆಯಿಂದ ಅವರು ಎಲ್ಲರ ಗಮನ ಸೆಳೆದಿದ್ದಾರೆ.

ಕನ್ನಡದಲ್ಲಿ ರವಿಚಂದ್ರನ್ (Ravichandran) ಮೊದಲಾದ ಹೀರೋಗಳ ಜೊತೆ ತೆರೆ ಹಂಚಿಕೊಂಡಿದ್ದಾರೆ. 1995ರಲ್ಲಿ ತೆರೆಗೆ ಬಂದ ರವಿಚಂದ್ರನ್ ನಟನೆಯ ‘ಪುಟ್ನಂಜ’ ಮೂಲಕ ಕನ್ನಡಕ್ಕೆ ಕಾಲಿಟ್ಟರು. ಆ ಬಳಿಕ ‘ಚೆಲುವ’, ‘ಮೊಮ್ಮಗ’, ‘ಶ್ರೀ ಮಂಜುನಾಥ’, ‘ಗ್ರಾಮ ದೇವತೆ’, ‘ಸ್ವಾತಿ ಮುತ್ತು’ ಮೊದಲಾದ ಕನ್ನಡ ಚಿತ್ರಗಳಲ್ಲಿ ಅವರು ಬಣ್ಣ ಹಚ್ಚಿದ್ದಾರೆ. ಅಲ್ಲದೆ, ಇವರು ಕಮಲ್ ಹಾಸನ್, ರವಿಚಂದ್ರನ್, ರಜಿನಿಕಾಂತ್ , ಚಿರಂಜೀವಿ, ಬಾಲಕೃಷ್ಣ, ವೆಂಕಟೇಶ್, ನಾಗಾರ್ಜುನ, ಸೇರಿದಂತೆ ಅನೇಕ ಟಾಪ್ ಹೀರೋಗಳ ಜೊತೆ ನಟಿಸಿದ್ದಾರೆ.

ಮೀನಾ 2009ರಲ್ಲಿ ವಿದ್ಯಾಸಾಗರ್ ಹೆಸರಿನ ಸಾಫ್ಟ್‌ವೇರ್ ಇಂಜಿನಿಯರ್ ಅವರನ್ನು ವಿವಾಹವಾದರು. ಮದುವೆಯ ನಂತರವೂ ಪೋಷಕ ಪಾತ್ರಗಳಲ್ಲಿ ನಟಿಸಿ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಆದರೆ, ಕೊವಿಡ್ ಸಂದರ್ಭದಲ್ಲಿ ಮೀನಾ ಪತಿ ವಿದ್ಯಾ ಸಾಗರ್ ಅವರನ್ನು ಕಳೆದುಕೊಂಡರು.

ಸದ್ಯ ವೈರಲ್ ಆಗುತ್ತಿರುವ ಫೋಟೋ ರಜನಿಕಾಂತ್ ಅವರ ಸಿನಿಮಾದಲ್ಲಿ ಮೀನಾ ಮಗಳ ಪಾತ್ರ ಮಾಡಿದ್ದರು. ಆಗ ಮೀನಾಗೆ ಕೇವಲ 7 ವರ್ಷ. ಈ ಸಂದರ್ಭದಲ್ಲಿ ತೆಗೆದ ಫೋಟೋ ಇದೀಗ ವೈರಲ್ ಆಗುತ್ತಿದೆ. ದಕ್ಷಿಣ ನಟಿ ಮೀನಾ ಅವರ ಪುತ್ರಿ ನೈನಿಕಾ ಸಹ ಬಾಲ ಕಲಾವಿದೆಯಾಗಿ ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. 2016ರಲ್ಲಿ ತಮಿಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ನೈನಿಕಾ ತೇರಿ ಎಂಬ ಚಿತ್ರದಲ್ಲಿ ನಟಿಸಿದ್ದರು.

ಇದನ್ನೂ ಓದಿ: NPS: ಎನ್‌ಪಿಎಸ್‌ನಲ್ಲಿ ನಿಯಮ ಬದಲಾವಣೆ : ಶೇ.45 ಪಿಂಚಣಿ ಸಿಗುವ ಸಾಧ್ಯತೆ