Puttur: ರಾಜಕೀಯ ದ್ವೇಷ : ಯುವಕನ ಮೇಲೆ ಹಲ್ಲೆ ಆರೋಪ ,ಆಸ್ಪತ್ರೆಗೆ ದಾಖಲು

Puttur Accused of assault on youth admitted to hospital

Share the Article

Puttur:ಪುತ್ತೂರು ತಾಲೂಕಿನ ಪುರುಷಕಟ್ಟೆಯಲ್ಲಿ ಯುವಕನೊಬ್ಬನ ಮೇಲೆ ಹಲ್ಲೆ ನಡೆದಿದೆ. ನರಿಮೊಗರು ನಿವಾಸಿ ಪ್ರವೀಣ್ ಆಚಾರ್ಯ ಎಂಬವರಿಗೆ ಹಲ್ಲೆ ನಡೆಸಲಾಗಿದೆ.

ಹಲ್ಲೆಗೊಳಗಾದ ಪ್ರವೀಣ್ ಕಳೆದ ಕೆಲ ತಿಂಗಳ ಹಿಂದೆ ಬಿಜೆಪಿ ಬಿಟ್ಟು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದ ಎನ್ನಲಾಗಿದೆ. ಪ್ರವೀಣ್ ಚುನಾವಣೆ ವೇಳೆ ಪುತ್ತೂರಿನ‌ (puttur) ಹಾಲಿ ಶಾಸಕರ ಪರ ಪ್ರಚಾರ ಮಾಡಿದ್ದರು ಎನ್ನಲಾಗಿದೆ.

ಇದರ ಜೊತೆಗೆ ಪುರುಷರಕಟ್ಟೆ ಭಾಗದಲ್ಲಿ ಕೆಲ ಬಿಜೆಪಿ ಮತಗಳನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದರಿಂದ ಪುರುಷರಕಟ್ಟೆ ಸಮೀಪದ ಇಂದ್ರನಗರ ರಕ್ತೇಶ್ವರಿಕಟ್ಟೆ ನಿವಾಸಿ ಪ್ರವೀಣ್ ಎಂಬಾತ ಹಲ್ಲೆ ನಡೆಸಿದ್ದಾನೆ ಎಂದು ತಿಳಿದುಬಂದಿದೆ. ಇದರ ಜೊತೆಗೆ ಮನೆಗೆ ನುಗ್ಗಿ ಜೀವ ಬೆದರಿಕೆಯೊಡ್ಡಿದ್ದಾನೆ ಎಂದು ಆರೋಪಿಸಲಾಗಿದೆ. ಹಲ್ಲೆಗೊಳಗಾಗಿರುವ ಪ್ರವೀಣ್ ಗೆ ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.ಈ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Leave A Reply