Davanagere: ಎಮ್ಮೆಗಳ ಜತೆ ಮಿಲನಕ್ಕೆ ಅಡ್ಡಿಪಡಿಸುತ್ತಿದ್ದವನ ಮೇಲೆ ದಾಳಿ: ಕೋಣದ ಹಳೆಯ ದ್ವೇಷಕ್ಕೆ ವ್ಯಕ್ತಿ ಬಲಿ

karnataka news davanagere the buffalo is a victim of old hatred

Davanagere: ಇದು ಪ್ರೀತಿ ವಂಚಿತನೊಬ್ಬನ ಹಳೆಯ ದ್ವೇಷದ ವಿಷ್ಯ. ಸಾಕಿದ ಕೋಣನ ಹಳೆಯ ದ್ವೇಷಕ್ಕೆ ವ್ಯಕ್ತಿಯೊಬ್ಬ ಬಲಿಯಾಗಿರುವ ಆಘಾತಕಾರಿ ಘಟನೆ ನಡೆದಿದೆ. ಹೌದು, ಪ್ರೀತಿ ಪ್ರಣಯ ವಂಚಿತ ಕೊಣವೊಂದು ತನ್ನ ರೋಮಾನ್ಸ್ ಗೆ ಸದಾ ಅಡ್ಡಗಾಲು ಹಾಕುತ್ತಿದ್ದ ವ್ಯಕ್ತಿಯನ್ನು ಹಾಯ್ದು ಕೊಂದು ಹಾಕಿದೆ.

ಚನ್ನಗಿರಿ (Davanagere) ತಾಲೂಕಿನ ಎನ್ ಬಸವನಹಳ್ಳಿ ಗ್ರಾಮದ ನಿವಾಸಿ ನೀರಗಂಟಿ ಜಯಣ್ಣ (48) ಮೃತ ದುರ್ದೈವಿ. ತನ್ನನ್ನು ಎಮ್ಮೆ ಜೊತೆ ಸೇರಲು ಬಿಡುತ್ತಿಲ್ಲ ಅಂತ ಆಕ್ರೋಶಗೊಂಡ ಕೋಣ ಜಯಣ್ಣರನ್ನು ಗುದ್ದಿ ಕೊಂದಿದೆ.

ಚನ್ನಗಿರಿ ತಾಲೂಕಿನ ಎನ್ ಬಸವನಹಳ್ಳಿ ಗ್ರಾಮದ ನಿವಾಸಿ ನೀರಗಂಟಿ ಜಯಣ್ಣನ ಮೇಲೆ ಕೋಣಕ್ಕೆ ವಿಪರೀತ ದ್ವೇಷ. ಅಂತದ್ದೆನಾಗಿತ್ತು ಅಂದರೆ, ಅಲ್ಲಿನ ಲಿಂಗದಹಳ್ಳಿಯ ಕೋಣವನ್ನು ಗ್ರಾಮದ ದೇವರಿಗೆ ಬಿಡಲಾಗಿದೆ. ಪಕ್ಕದಲ್ಲೇ ಇರುವ ಬಸವನ ಹಳ್ಳಿಯಲ್ಲಿ ಈ ಕೊಬ್ಬಿದ ಕೋಣ ಅಲ್ಲಿನ ಎಮ್ಮೆಗಳ ಜೊತೆ ಸೇರಿ ಮಿಲನ ಮಹೋತ್ಸವ ಆಚರಿಸುತ್ತಿತ್ತು. ಆದರೆ ಪ್ರತಿಬಾರಿ ಎಮ್ಮೆಗಳ ಜೊತೆ ಸೇರಲು ಬಂದಾಗ ಜಯಣ್ಣ ದೊಣ್ಣೆ ಹಿಡಿದು ಕೋಣವನ್ನು ಹೊಡೆದು ಓಡಿಸುತಿದ್ದರು. ಇದರಿಂದ ಕೋಣ ಸರಿಯಾಗಿ ಎಮ್ಮೆಗಳ ಜತೆ ಕಳೆಯಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಜಯಣ್ಣನ ಮೇಲೆ ಈ ಕೋಣವು ದ್ವೇಷ ಸಾಧಿಸುತಿತ್ತು.

ಇದೇ ಕಾರಣದಿಂದ ಈ ಹಿಂದೆ ಸಾಕಷ್ಟು ಬಾರಿ ಜಯಣ್ಣನ ಮೇಲೆ ಕೋಣ ದಾಳಿ ಮಾಡಿತ್ತು. ಅದೃಷ್ಟವಶಾತ್ ಹಿಂದಿನ ದಾಳಿಯಲ್ಲಿ ಜಯಣ್ಣ ಪಾರಾಗಿದ್ದರು. ಅಂದಿನಿಂದ ಕೋಣದ ಮೇಲೆ ಜಯಣ್ಣ ಒಂದು ಕಣ್ಣಿಟ್ಟಿದ್ದರು. ಅವರು ಕೋಣವನ್ನು ಎಮ್ಮೆಗಳ ಸಖ್ಯ ಬೆಳೆಸಲು ಬಿಡುತ್ತಲೇ ಇರಲಿಲ್ಲ. ಇದರಿಂದ ಕೋಣ ವ್ಯಗ್ರವಾಗಿತ್ತು ಎನ್ನಲಾಗಿದೆ.

ಆದರೆ, ಜಯಣ್ಣ ಕೋಣದ ಕೈಗೆ ಸಿಕ್ಕಿರಲಿಲ್ಲ. ನಿನ್ನೆ ಜಯಣ್ಣನ ಅದೃಷ್ಟ ಕೆಟ್ಟಿತ್ತು. ನಿನ್ನೆ ಸಾಯಂಕಾಲ ಯಾರು ಇಲ್ಲದ ಸಮಯದಲ್ಲೇ ಕೋಣ ಜಯಣ್ಣನ ಮೇಲೆ ದಾಳಿ ಮಾಡಿದೆ. ಆತನನ್ನು ಮನಸೋ ಇಚ್ಚೆ ತಿವಿದು ತಿರುಗಿಸಿ, ಮತ್ತಷ್ಟು ತಿವಿದು ಹಾಕಿದೆ. ಈ ಕೋಣದ ಅಟ್ಯಾಕ್ ನಿಂದ ಜಯಣ್ಣ ಸತ್ತೇ ಹೋಗಿದ್ದಾರೆ.

ಕೋಣವು ಗ್ರಾಮದಲ್ಲಿ ದಾಂಧಲೆ ಮಾಡುತ್ತಿರುವ ಬಗ್ಗೆ ಬಸವನಹಳ್ಳಿಯ ಗ್ರಾಮಸ್ಥರು ಪಂಚಾಯತಿ ಮತ್ತು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅದೂ ಎಮ್ಮೆಗಳ ಮಿಲನಕ್ಕಾಗಿ ಆ ಕೋಣವು ತುಂಬಾ ಹಾತೊರೆಯುತ್ತಿತ್ತು. ಆಗ ಅದರ ದಾಂಧಲೆ ಹೇಳತೀರದಾಗಿತ್ತು. ಆದರೆ, ಇದರ ಬಗ್ಗೆ ಅಧಿಕಾರಿಗಳಾಗಲಿ ಅಥವಾ ಅಲ್ಲಿನ ಸಂಬಂಧ ಪಟ್ಟವರಾಗಲಿ ಯಾವುದೇ ಕ್ರಮವನ್ನು ಕೈಗೊಂಡಿರಲಿಲ್ಲ ಎನ್ನಲಾಗಿದೆ. ಈಗ ಕೋಣನ ಹಳೆಯ ದ್ವೇಷಕ್ಕೆ ವ್ಯಕ್ತಿಯೊಬ್ಬ ಬಲಿಯಾಗಿದ್ದು, ಮೃತನ ಕುಟುಂಬಸ್ಥರ ರೋದಿಸುತ್ತಿದೆ. ಇದೀಗ ಕೊಲೆಗಡುಕ ಕೋಣವನ್ನು ಗ್ರಾಮಸ್ಥರು ಹಿಡಿದು ಕಟ್ಟಿ ಹಾಕಿದ್ದಾರೆ.

 

ಇದನ್ನು ಓದಿ: Ramalinga Reddy:  ‘ ಮಹಿಳೆಯರು ಹಿಡ್ಕೊಂಡು ಮುರಿಯುತ್ತಿದ್ದಾರೆ ‘ ಹೇಳಿಕೆಗೆ ಮಂತ್ರಿಗಳು ಹೇಳಿದ್ದೇನು ?!

Leave A Reply

Your email address will not be published.