Abhishek-Aviva Marriage: ಅಭಿಷೇಕ್ – ಅವಿವಾ ಮದುವೆಯ ‘ ಮಂಡ್ಯ ಸ್ಟೈಲ್ ‘ ಬೀಗರ ಊಟಕ್ಕೆ ಬಿದ್ದ ಖರ್ಚು ಎಷ್ಟು ಕೋಟಿ ರೂಪಾಯಿ ಗೊತ್ತಾ ? 75,000 ಜನರು ಅಷ್ಟು ಪ್ರಮಾಣದ ಆಹಾರ ತಿಂದ್ರಾ ?
Sandalwood news how much money was spent on Abhishek Ambareesh and Aviva Bidapa marriage beegara oota in Mandya
Abhishek-Aviva Marriage: ಚುನಾವಣೆಯ ಮಹಾಸಮರ ಮುಗಿಯುತ್ತಿದ್ದಂತೆ ಅಂಬಿ ಮನೆಯಲ್ಲಿ ಮದುವೆಯ ಸಂಭ್ರಮ ಕಳೆ ಕಟ್ಟಿತ್ತು. ಎಲ್ಲರಿಗೂ ಗೊತ್ತಿರುವ ಹಾಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ಅಭಿಷೇಕ್ ಅಂಬರೀಶ್ (Abhishek Ambareesh) ಅವಿವಾ ಬಿದ್ದಪ್ಪ (Aviva Bidapa) ಅವರ ಜೊತೆಗೆ ಸಪ್ತಪದಿ(Abhishek-Aviva Marriage) ತುಳಿದು ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ.
ಮಂಡ್ಯದ ಗಂಡು ಎಂದೇ ಖ್ಯಾತಿ ಪಡೆದಿದ್ದ ಚಿತ್ರರಂಗದ ಮೇರುನಟ ಅಂಬರೀಶ್ ಅವರಿಗೆ ಮಂಡ್ಯದ ಮೇಲಿದ್ದ ಒಲವು ಎಲ್ಲರಿಗೂ ಗೊತ್ತಿರುವಂತದ್ದೇ. ತಮ್ಮ ಮಗನ ಮದುವೆಯ(Abhishek-Aviva Marriage) ಔತಣಕೂಟವನ್ನು ಮಂಡ್ಯದಲ್ಲೇ ನಡೆಸಬೇಕೆನ್ನುವುದು ದಿ. ಅಂಬರೀಶ್ ಮತ್ತು ಸುಮಲತಾ ಅವರ ಕನಸಾಗಿತ್ತು. ಹೀಗಾಗಿ, ಪುತ್ರ ಅಭಿಷೇಕ್ ಅಂಬರೀಷ್ ಅವರ ಬೀಗರ ಔತಣ ಕಾರ್ಯಕ್ರಮವನ್ನು ಜೂನ್ 16 ರಂದು ಮಂಡ್ಯ ಜಿಲ್ಲೆಯ ಮದ್ದೂರು ಸಮೀಪದ ಗೆಜ್ಜಲಗೆರೆ ಕಾಲೋನಿ ಬಳಿಯ 15 ಎಕರೆ ಪ್ರದೇಶದಲ್ಲಿ ಈ ಮಂಡ್ಯ ಶೈಲಿಯ ಫೇಮಸ್ ಬೀಗರ ಊಟದೊಂದಿಗೆ ನೆರವೇರಿಸಲಾಗಿದೆ. ಆದರೆ, ಈ ನಡುವೆ ಮಂಡ್ಯದ ಜನತೆಗೆ ಅದ್ಧೂರಿಯಾಗಿ ಬೀಗರ ಔತಣ ಕೂಟ ಅಂಬರೀಶ್ ಕುಟುಂಬದವರು ಏರ್ಪಡಿಸಿದ್ದಕ್ಕೆ ನಾನಾ ಬಗೆಯ ಟೀಕೆಗಳು ಕೂಡ ವ್ಯಕ್ತವಾಗಿ ಈ ಆಯೋಜನೆಯ ಹಿಂದೆ ರಾಜಕೀಯ ಉದ್ದೇಶವಿದೆ ಎಂಬ ಆರೋಪ ಕೂಡ ಕೇಳಿ ಬಂದಿದೆ. ಅದಿರಲಿ, ಈ ಊಟದ ಸ್ಪೆಶಾಲಿಟಿ ಬಗ್ಗೆ ನೀವು ಈಗಾಗಲೇ ತುಂಬಾ ವಿಷ್ಯ ಕೇಳಿದ್ದೀರಾ. ಅದರ ಜತೆಗೆ ಆವತ್ತು ಒಟ್ಟು ಎಷ್ಟು ಖರ್ಚಾಗಿದೆ ಎನ್ನುವ ವಿಚಾರ ಕೂಡಾ ಈಗ ಸುದ್ದಿಯಲ್ಲಿದೆ.
ಅವತ್ತು ಅಲ್ಲಿನ ಅಡುಗೆಮನೆಯಲ್ಲಿ 7000 ಕೆಜಿ ಮಟನ್ ಹಾಗೂ 8000 ಕೆಜಿ ಚಿಕನ್ ಬಳಸಿ ವಿವಿಧ ಖಾದ್ಯಗಳನ್ನು ತಮ್ಮ ಅಭಿಮಾನಿಗಳಿಗೆ ಬಡಿಸಲು ಅಂಬಿ ಕುಟುಂಬಸ್ಥರು ಯೋಜನೆ ಹಾಕಿಕೊಂಡಿದ್ದರು. ಮಾಧ್ಯಮಗಳಲ್ಲಿ 5 ಲಕ್ಷ ಜನ ಬರ್ತಾರೆ ಅಂತ ಸುದ್ದಿ ಹಬ್ಬಿತ್ತು. ಮತ್ತೊಂದೆಡೆ ಮಟನ್ ಚಿಕನ್ ಸೇರಿ 15000 ಕೆಜಿ ಬಾಡು ಬಡಿಸಲು ಪ್ಲಾನ್ ಮಾಡಲಾಗಿತ್ತು. 15000*6 ಅಂದ್ರೆ 90,000 ಜನರಿಗೆ ಮಾಂಸ ಪ್ಲಾನ್ ಮಾಡಲಾಗಿತ್ತು.
ಮದುವೆಗೆ ಸುಮಾರು 50,000 ಜನರು ಸೇರಬಹುದು ಎಂಬ ನಿರೀಕ್ಷೆಯನ್ನು ಅಂಬಿ ಕುಟುಂಬದವರು ಹೊಂದಿದ್ದರು. ಬೀಗರ ಔತಣಕೂಟ ಮೆನು ಮುದ್ದೆ, ಮಟನ್ ಬಿರಿಯಾನಿ, ಬೋಟಿ ಗೊಜ್ಜು, ಮಟನ್, ಎರಡು ಬಗೆಯ ಚಿಕನ್, ಮೊಟ್ಟೆ, ರೈಸ್, ತಿಳಿ ಸಾಂಬಾರ್, ಮಜ್ಜಿಗೆ, ಬೀಡಾ, ಐಸ್ ಕ್ರೀಂ, ಬಾಳೆಹಣ್ಣು ಸಾಕಷ್ಟು ಪೂರ್ವ ಸಿದ್ಧತೆಗಳನ್ನು ಮಾಡಲಾಗಿತ್ತು. ಸುಮಾರು 65000 ರಿಂದ 85000 ಜನರವರೆಗೆ ವಿಸ್ತರಿಸಬಲ್ಲ ಯೋಜನೆ ರೂಪಿತವಾಗಿೆದೆ. ಅಷ್ಟು ಸಾವಿರ ಮಂದಿಗೆ ಕಾರ್ಯಕ್ರಮದಲ್ಲಿ ಸಸ್ಯಾಹಾರ, ಮಾಂಸಹಾರದ ವಿವಿಧ ಭಕ್ಷ್ಯಗಳನ್ನು ಬಡಿಸಲಾಗಿದೆ. ಆದರೂ ಕೊನೆಯಲ್ಲಿ ಮ್ಯಾನೇಜ್ ಮೇಂಟ್ ವಿಫಲವಾದ ಕಾರಣ ನೂಕು ನುಗ್ಗಲು ಸಂಭವಿಸಿದೆ.
ಅವತ್ತು ಯಾವ ಪರಿ ಜನರು ಅಭಿಷೇಕ್ ಮದುವೆಗೆ ಹರಿದು ಬಂದಿದ್ದಾರೆ ಎಂದರೆ, ಅಭಿಷೇಕ್ ಪತ್ನಿ ಅವಿವ ಈ ಜನಸಾಗರವನ್ನು ನೋಡಿ ಬೆಚ್ಚಿ ಬಿದ್ದಿದ್ದರಂತೆ. ಇದರ.ಮಧ್ಯೆ ಅಂದು ಮಾಂಸ ಪ್ರಿಯ ಮಂಡ್ಯದ ಗೌಡರ ಬೀಗರ ಊಟದ ಗದ್ದಲಕ್ಕೆ ಕೋಟಿಗಳಲ್ಲಿ ಖರ್ಚಾಗಿದೆ. ಈ ಅದ್ದೂರಿ ಬೀಗರ ಔತಣ ಕೂಟಕ್ಕೆ ಸುಮಾರು 1.75 ಕೋಟಿ ರೂಪಾಯಿ ಖರ್ಚಾಗಿದೆ ಎಂದು ಅಂದಾಜು ಮಾಡಲಾಗಿದೆ. ಒಂದು ಸಾವಿರಕ್ಕೆ ಒಂದರಂತೆ ನಾಲ್ಕು ಪಂಕ್ತಿಗಳಲ್ಲಿ ಏಕಕಾಲದಲ್ಲಿ 4,000 ಕೂತು ಉಂಡೆದ್ದಿದ್ದಾರೆ.
ಆದರೆ ಈ ಕಾರ್ಯಕ್ರಮ ಆಯೋಜನೆಯಲ್ಲಿ ಅಂಬಿ ಕುಟುಂಬ ಎಡವಿತ್ತಾ ಎಂಬ ಅನುಮಾನ ನೋಡುಗರಿಗೆ ಕಾಡದಿರದು. ಕಾರ್ಯಕ್ರಮ ಆರಂಭವಾದ ಕೆಲ ಗಂಟೆಗಳಲ್ಲಿಯೇ ಅಭಿಮಾನಿಗಳು ಅಲ್ಲಿನ ಅಡುಗೆ ಮನೆಗೆ ನುಗ್ಗಿ ದಾಂದಲೆ ಮಾಡಿದ ಪ್ರಹಸನ ಕೂಡ ನಡೆದಿದೆ. ಈ ಕಾರ್ಯಕ್ರಮಕ್ಕೆ ಬಂದಿದ್ದ ಅಭಿಮಾನಿಗಳು ಆಯೋಜನೆ ಸರಿ ಇಲ್ಲ, ಈ ರೀತಿ ಮಾಡೋಕೆ ಯಾಕೆ ಆಹ್ವಾನ ನೀಡಬೇಕಿತ್ತು ಎಂದು ಬೇಸರ ಹೊರಹಾಕಿದ ದೃಶ್ಯ ಕೂಡ ಕಂಡುಬಂದಿದೆ. ಇನ್ನು ಈ ಕುರಿತ ಹಲವಾರು ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದಾಗ ಇದೆಲ್ಲ ಹಿತಶತ್ರುಗಳ ಷಡ್ಯಂತ್ರ ಎಂಬಂತೆ ಸ್ಪಷ್ಟನೆ ನೀಡಿದ ಅಭಿಷೇಕ್ ಅಂಬರೀಶ್ ಊಟದ ಕೊರತೆಯಿತ್ತು ಎಂಬ ಆರೋಪವನ್ನು ತಳ್ಳಿಹಾಕಿ ಅಭಿಮಾನಿಗಳಲ್ಲಿ ಕೈಮುಗಿದು ಕ್ಷಮೆಯನ್ನೂ ಕೇಳಿದ್ದು ಕೂಡ ನಡೆದಿದೆ.
ಊಟ ಖಾಲಿಯಾಗಿದೆ ಎಂಬ ವಿಚಾರ ಕಿವಿಗೆ ಬೀಳುತ್ತಿದ್ದಂತೆ ಅಲ್ಲಿಗೆ ಬಂದಿದ್ದ ಜನರು ಅಡುಗೆ ಮನೆಯತ್ತ ದೌಡಾಯಿಸಿದ್ದು, ನೂಕುನುಗ್ಗಲು ಉಂಟಾಗಿ ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದ್ದಾರೆ ಎನ್ನಲಾಗಿದೆ. ಈ ಸಂದರ್ಭ ಸುಮಾರು 10 ಸಾವಿರ ಮಂದಿಯ ಊಟ ಮಣ್ಣು ಪಾಲಾಗಿದೆ ಎಂದು ಕೂಡ ಹೇಳಲಾಗುತ್ತಿದೆ. ಆದರೆ ಬಾಡು ಖಾಲಿಯಾದ ಹಾಗೆ ಕಾಣುತ್ತಿದ್ದಂತೆ ಅನ್ನಿಸುತ್ತಿಲ್ಲ. ದೊಡ್ಡ ದೊಡ್ಡ ಬಾಂಡ್ಲಿಗಳಿಂದ ಮಾಂಸವನ್ನು ಗೋರಿ ಗೋರಿ ಹಾಕುತ್ತಿದ್ದ ವಿಡಿಯೋವನ್ನು ಎಲ್ಲರೂ ಕಂಡಿದ್ದೇವೆ.
ಆದರೆ, ಅಂದಾಜಿಗಿಂತ ಹೆಚ್ಚು ಜನರು ಬಂದದ್ದರಿಂದ ಕೇವಲ ಎರಡು ಗೇಟ್‌ಗಳಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ. ಹೀಗಾಗಿ, ನೂಕು ನುಗ್ಗಲಿನ ಪರಿಸ್ಥಿತಿ ಉಂಟಾಗಿದೆ. ಉಳಿದ ಎರಡು ಡೈನಿಂಗ್ ಹಾಲ್‌ನಲ್ಲಿ ಊಟ ಇಲ್ಲದೇ ಕೂರುವಂತಾಗಿದೆ. ಪೊಲೀಸರು ಅಭಿಮಾನಿಗಳನ್ನು ತಡೆಯುತ್ತಿದ್ದಂತೆ ಮಹಿಳೆಯರು ಮತ್ತು ಅಂಬರೀಶ್ ಅಭಿಮಾನಿಗಳು ರೊಚ್ಚಿಗೆದ್ದು ಟೆಂಟನ್ನು ಹರಿದುಹಾಕಿ ಕಿತ್ತೆಸೆದು ಒಳ ನುಗ್ಗಲು ಯತ್ನಿಸಿದರು. ಆಗ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು. ಇದರಿಂದಾಗಿ ಸುಮಾರು 30ಕ್ಕೂ ಹೆಚ್ಚು ಮಂದಿ ಅಂಬರೀಶ್ ಅಭಿಮಾನಿಗಳು, ಮಹಿಳೆಯರು ಹಾಗೂ ಪೊಲೀಸರಿಗೆ ಗಾಯಗಳಾಗಿದೆಯಂತೆ.
ಆದರೆ, ಅಭಿಷೇಕ್ ಅಂಬರೀಶ್ ಹೇಳೋದೇ ಬೇರೆ, “ಊಟದ ಕೊರತೆ ಇದೆ ಅಂತ ಹರಿದಾಡಿದ ಸುದ್ದಿ ಸುಳ್ಳು, ಅಲ್ಲಿ ಏನಾಗಿತ್ತು, ಹೇಗಾಗಿತ್ತು ಅನ್ನೋದು ತಿಳಿದಿಲ್ಲ. ಆದರೆ, ನಾನು ಯಾವತ್ತೂ ಜನರ ವಿರುದ್ಧ ಮಾತನಾಡಲ್ಲ. ಯಾಕಂದರೆ ಎಲ್ರೂ ಪ್ರೀತಿ ವಿಶ್ವಾಸದಿಂದ ಬಂದಿರೋರು. ಯಾರಿಗೂ ದುಡ್ಡು ಕೊಟ್ಟೇನೂ ಕರೆಸಿಲ್ಲ. ಆಹ್ವಾನ ನೀಡಿದ ಕೂಡಲೇ ಅಂಬರೀಶಣ್ಣನ ಮಗನಿಗೆ ಆಶೀರ್ವದಿಸಬೇಕು ಅಂತ ಬಂದಿದ್ದು, ಇಂತಹ ದೊಡ್ಡ ಕಾರ್ಯಕ್ರಮದಲ್ಲಿ ಎಲ್ಲೋ ಒಂದು ಕಡೆ ಐದು ನಿಮಿಷ ತಡವಾಗಿದೆ. ನನಗೆ ತಿಳಿದಂತೆ ಕೆಲವರು ಅಲ್ಲಿ ಕುಳಿತಿದ್ದ ಜನಕ್ಕೆ ಪ್ರಚೋದನೆ ಮಾಡಿದ್ದಾರೆ. ಬಿಸಿಲಲ್ಲಿ ಕುಳಿತಿದ್ದ ಜನರು ಸಾಮಾನ್ಯವಾಗಿ ಈ ಪ್ರಚೋದನೆಯಿಂದ ಅಡುಗೆ ಮನೆಗೆ ನುಗ್ಗಿದ್ದಾರೆ. ಈ ಸಂದರ್ಭದಲ್ಲಿ ಪರಿಸ್ಥಿತಿಯನ್ನು ನಿಯಂತ್ರಿಸಲಾಗದೇ ಪೊಲೀಸರು ಸಹ ಕಷ್ಟಪಟ್ಟಿದ್ದಾರೆ ಎಂದಿದ್ದಾರೆ. ಏನೇ ಇರಲಿ, 1.75 ಕೋಟಿ ಖರ್ಚು ಮಾಡಿದ ಸೆಲೆಬ್ರಿಟಿ ಕಂ ರಾಜಕಾರಣಿಯ ಕುಟುಂಬದ ಮದುವೆಯಲ್ಲಿ ಈ ಮಟ್ಟಿಗಿನ ಮಿಸ್ ಮ್ಯಾನೇಜ್ ಮೆಂಟ್ ಇರಬಾರದಿತ್ತು.