Half Day Schools: ವಿದ್ಯಾರ್ಥಿಗಳಿಗೆ ಜೂನ್ 24 ರವರೆಗೆ ಅರ್ಧ ದಿನ ಮಾತ್ರ ಶಾಲೆ !

Latest national education news summer holidays 2023 half day schools from June 24

Half Day Schools: ಈಗಾಗಲೇ
ಕರ್ನಾಟಕದಲ್ಲಿ ಎಲ್ಲಾ ಶಾಲೆಗಳು ಆರಂಭವಾಗಿ ಕೆಲವು ವಾರಗಳೇ ಕಳೆದಿದೆ. ಆದರೆ ತಮಿಳು ನಾಡಿನಲ್ಲಿ ದಿನೇ ದಿನೇ ತಾಪಮಾನ ಹೆಚ್ಚುತ್ತಿದ್ದು, ತರಗತಿ ನಡೆಸಲು ಸಾಧ್ಯವಾಗುತ್ತಿಲ್ಲ.

ತಮಿಳು ನಾಡಿನಲ್ಲಿ ಜೂನ್ 12 ರಿಂದ ಪೂರ್ಣ ದಿನದ ತರಗತಿಗಳು ಪ್ರಾರಂಭವಾಗಬೇಕಿತ್ತು. ಆದರೆ ತಮಿಳುನಾಡಿನಲ್ಲಿ ಹಾಗೂ ಆಂದ್ರದಲ್ಲಿ ದಿನೇ ದಿನೇ ತಾಪಮಾನ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ತರಗತಿಗಳು ನಡೆಸುವುದಕ್ಕೆ ಸಾಧ್ಯವಾಗುತ್ತಿಲ್ಲ.

ತಮಿಳುನಾಡಿನಲ್ಲಿ ಬಿಸಿಲಿನ ತೀವ್ರತೆಯನ್ನು ಗಮನದಲ್ಲಿಟ್ಟುಕೊಂಡು ಅರ್ಧ ದಿನದ ಶಾಲೆಗಳನ್ನು (Half Day Schools) ನಡೆಸುವಂತೆ, ವಿದ್ಯಾರ್ಥಿಗಳನ್ನು ಅರ್ಧ ಹೊತ್ತು ಮಾತ್ರ ಶಾಲೆಗೆ ಕಳಿಸುತ್ತೇವೆ ಎಂದು ಪಾಲಕರು ಮನವಿ ಮಾಡಿದ್ದು, ಈ ಪರಿಣಾಮ ಹೆಚ್ಚಿನ ತಾಪಮಾನದ ಹಿನ್ನೆಲೆಯಲ್ಲಿ ಶಾಲೆ ರಜೆಯನ್ನು ಇನ್ನೊಂದು ವಾರ ವಿಸ್ತರಿಸಲಾಗಿದೆ.

ಸದ್ಯ ತರಗತಿಗಳು ಬೆಳಿಗ್ಗೆ 7.30 ರಿಂದ 11.30 ರವರೆಗೆ ನಡೆಯಬೇಕು ಎಂದು ನಿರ್ಧರಿಸಲಾಗಿದೆ. ಬೆಳಗ್ಗೆ 8.30ರಿಂದ 9ರವರೆಗೆ ಮತ್ತು ಮಧ್ಯಾಹ್ನ 11.30ರಿಂದ 12ರವರೆಗೆ ಊಟ ನೀಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಹೆಚ್ಚುತ್ತಿರುವ ಬಿಸಿಲು ಹಾಗೂ ಆರೋಗ್ಯ ಸಮಸ್ಯೆಯಿಂದ ವಿದ್ಯಾರ್ಥಿಗಳನ್ನು ಕಾಪಾಡಲು ಶಾಲೆಗಳು ಈ ರೀತಿ ನಿರ್ಧಾರ ಕೈಗೊಂಡಿದೆ.

ಆದರೆ ತೆಲಂಗಾಣ ಸರ್ಕಾರ ಈ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ತೆಲಂಗಾಣ ವಿದ್ಯಾರ್ಥಿಗಳಿಗೆ ಎಂದಿನಂತೆ ಪೂರ್ಣ ದಿನದ ತರಗತಿಗಳು ಆರಂಭವಾಗಲಿವೆ ಎಂದು ತಿಳಿಸಲಾಗಿದೆ.

ಇದನ್ನೂ ಓದಿ: Congress Guarantee: ಸರ್ಕಾರದ ಗ್ಯಾರಂಟಿ ಯೋಜನೆ ಮೇಲೆ ಸೈಬರ್ ಹ್ಯಾಕರ್ಸ್ ಕಣ್ಣು! ಡೇಟಾ ಸೋರಿಕೆ ಆತಂಕ!

Leave A Reply

Your email address will not be published.