Shivamogga: ತುಂಗಾ ನದಿಗೆ ಈಜಲು ತೆರಳಿದ್ದ ನಿಟ್ಟೆ ಕಾಲೇಜಿನ ಉಪನ್ಯಾಸಕರು ನೀರು ಪಾಲು, ಉಜಿರೆ ಕಾಲೇಜಿನ ಕೆಮಿಸ್ಟ್ರಿ ಲೆಕ್ಚರರ್ ಪತಿ ಕೂಡಾ ಒಬ್ಬರು !

Latest Shivamogga news College lectures drowned in Tunga river Shivamogga

Share the Article

Shivamogga: ನದಿಗೆ ಈಜಲು ತೆರಳಿದ್ದ ಇಬ್ಬರು ಉಪನ್ಯಾಸಕರು ನೀರು ಪಾಲಾದ ಘಟನೆ ಶಿವಮೊಗ್ಗ (Shivamogga) ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನಲ್ಲಿ ನಡೆದಿದೆ.

ಉಡುಪಿ ಜಿಲ್ಲೆಯ ಕಾರ್ಕಳದ ನಿಟ್ಟೆ ಕಾಲೇಜಿನ ಉಪನ್ಯಾಸಕರಾದ ಪುನೀತ್ (38) ಹಾಗೂ ಬಾಲಾಜಿ (36)  ವೀಕೆಂಡ್ ಆದ ಕಾರಣ ನಿನ್ನೆ ಪ್ರವಾಸಕ್ಕಾಗಿ ತೆರಳಿದ್ದು, ತೀರ್ಥಹಳ್ಳಿಯ ತೀರ್ಥಮತ್ತೂರು ಮಠದ ಸಮೀಪ ಇರುವ ಹೋಮ್ ಸ್ಟೇನಲ್ಲಿ ತಂಗಿದ್ದರು.

ಇಂದು ತುಂಗಾ ನದಿಗೆ ಈಜಲು ಹೋಗಿದ್ದರು. ಈ ವೇಳೆ ನದಿಗೆ ಇಳಿದ ಇಬ್ಬರೂ ಮೇಲೆ ಬರದೆ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿದ್ದಾರೆ. ರಕ್ಷಣಾ ಕಾರ್ಯಾಚರಣೆ ವೇಳೆ ಒಬ್ಬರ ಮೃತದೇಹ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.

ಉಜಿರೆ ಕಾಲೇಜಿನ ಲೆಕ್ಚರರ್ ಪತಿ ನೀರುಪಾಲು ಆದ ಘಟನೆ ನಡೆದಿದೆ. ಉಜಿರೆ ಕಾಲೇಜಿನಲ್ಲಿ ಕೆಮಿಸ್ಟ್ರಿ ಉಪನ್ಯಾಸಕಿಯ ಪತಿ ನದಿಯಲ್ಲಿ ಈಜಲು ಹೋಗಿ ನೀರುಪಾಲಾಗಿದ್ದಾರೆ. ಉಡುಪಿ ಸಮೀಪ ನಡೆದ ದುರ್ಘಟನೆಯಲ್ಲಿ ನೀರು ಪಾಲಾದ ಪುನೀತ್ ರವರು ಉಜಿರೆ ಕಾಲೇಜಿನ ಕೆಮಿಸ್ಟ್ರಿ ವಿಭಾಗದ ಉಪನ್ಯಾಸಕಿ ದಿವ್ಯಾ ಅವರ ಪತಿ. ಬೆಳ್ತಂಗಡಿ ತಾಲ್ಲೂಕು ನೆರಿಯ ಗ್ರಾಮದ ಪುನೀತ್ ನಿಟ್ಟೆಯಲ್ಲಿ ಉಪನ್ಯಾಸಕರಾಗಿದ್ದರು.

ಇದನ್ನೂ ಓದಿ: DK Suresh: ರಾಜಕಾರಣದಲ್ಲಿ ನೆಮ್ಮದಿಯೇ ಇಲ್ಲ, ವಿಶ್ರಾಂತಿ ಬೇಕಾಗಿದೆ ! ಚುನಾವಣಾ ರಾಜಕೀಯದಿಂದ ನಿವೃತ್ತಿಯಾಗುತ್ತಾರಾ ಡಿಕೆ ಸುರೇಶ್?

Leave A Reply