Kerala Dance Class: ಕಲಾಮಂಡಲಂ ನಲ್ಲಿ ಕಥಕ್ಕಳಿ ಕೋರ್ಸ್ ಗೆ ಮೊದಲ ಬಾರಿ ಮುಸ್ಲಿಂ ಬಾಲಕಿ ಸೇರ್ಪಡೆ!

Kerala Dance Class first time, a Muslim girl joined the Kathakali course in Kalamandalam

Kerala Dance Class: ಖ್ಯಾತ 90 ವರ್ಷಗಳ ಇತಿಹಾಸವಿರುವ ಕೇರಳದ ಕಲಾಮಂಡಲಂ ನಲ್ಲಿ (Kerala Dance Class) ಮುಸ್ಲಿಂ ಬಾಲಕಿಗೆ ಪ್ರವೇಶ ನೀಡಿರುವುದು ಇದೇ ಮೊದಲ ಬಾರಿ ಮತ್ತು ಬಾಲಕಿಯ ಈ ದಿಟ್ಟ ನಿರ್ಧಾರಕ್ಕೆ ಎಲ್ಲೆಡೆ ಶ್ಲಾಘಣೆ ವ್ಯಕ್ತವಾಗುತ್ತಿದೆ.

ಮುಖ್ಯವಾಗಿ ತ್ರಿಶೂರ್ ಮೂಲದ ಪ್ರತಿಷ್ಠಿತ ಸಂಸ್ಥೆಯಲ್ಲಿ ಮೊದಲ ಬಾರಿಗೆ ಕಥಕ್ಕಳಿ ಕೋರ್ಸ್‌ಗೆ ಮೊದಲ ಮುಸ್ಲಿಂ ವಿದ್ಯಾರ್ಥಿನಿ ಸೇರ್ಪಡೆಗೊಂಡಿದ್ದಾರೆ. ಹೌದು, 14 ವರ್ಷದ ಸಾಬ್ರಿ ಎನ್ ಚೆರುತುರುತಿ ದಾಖಲಾಗಿದ್ದು, ಹಿಜಾಬ್ ಧರಿಸಿಕೊಂಡೇ ನೃತ್ಯ ತರಬೇತಿ ಪಡೆದಿದ್ದಾರೆ. ವಿಶೇಷವೆಂದರೆ ಇವರು ಕಥಕ್ಕಳಿಯ ಹಿರಿಯ 86 ವರ್ಷದ ಕಲಾಮಂಡಲಂ ಗೋಪಿ ಆಸನ್ ಅವರಿಂದ ತರಬೇತಿ ಪಡೆಯುತ್ತಿದ್ದಾರೆ.

ಸಾಬ್ರಿಯ ಅವರ ತಂದೆ ಎಸ್ ನಿಜಾಮ್ ಪ್ರಕಾರ, ಸಾಬ್ರಿಗೆ ಕಥಕ್ಕಳಿಯಲ್ಲಿ ಒಲವು ಇತ್ತು. ಆಂಚಲ್‌ನ ಅಗಸ್ತ್ಯಕೋಡ್‌ನಲ್ಲಿರುವ ಮಹಾದೇವ ದೇವಸ್ಥಾನಕ್ಕೆ ನಿಯಮಿತವಾಗಿ ವಾಚನಗೋಷ್ಠಿಗಳನ್ನು ಆಯೋಜಿಸಲು ನನ್ನೊಂದಿಗೆ ಬರುತ್ತಿದ್ದಳು ಎಂದು ಪ್ರದರ್ಶನಗಳಿದ್ದಾಗ ಆಕೆ ನಿದ್ರಿಸುತ್ತಿರಲಿಲ್ಲ, ನೃತ್ಯಗಾರರನ್ನು ಗಮನವಿರಿಸಿ ನೋಡುತ್ತಿದ್ದಳು. ಅವರ ಮೇಕಪ್ ಮತ್ತು ವರ್ಣರಂಜಿತ ಉಡುಪಿನಿಂದ ಆಕೆ ಪ್ರಭಾವಿತಳಾಗಿದ್ದಳು, ನಾನು ಅವಳಿಗೆ ನನ್ನ ಕಥಕ್ಕಳಿ ಪ್ರದರ್ಶನದ ಫೋಟೋಗಳನ್ನು ತೋರಿಸುತ್ತಿದ್ದೆ, ಇದರಿಂದ ಅವಳು ಅದರೆಡೆಗೆ ಮತ್ತಷ್ಟು ಆಕರ್ಷಿತಳಾದಳು ಎಂದು ಅಮ್ಮಾಶ್ ಆರ್ಟ್ ಗ್ಯಾಲರಿ ನಿರ್ವಹಿಸುವ ಫೋಟೋ ಗ್ರಾಫರ್ ನಿಜಾಮ್ ಹೇಳಿದ್ದಾರೆ.

ಕಥಕ್ಕಳಿ ಅಭ್ಯಾಸಿಸಲು ಸಮುದಾಯದ ಪ್ರತಿರೋಧವಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ನಿಜಾಮ್, ರಾಜ್ಯದ ದಕ್ಷಿಣ ಭಾಗದಲ್ಲಿ, ನಮ್ಮ ಸಮುದಾಯದ ಸದಸ್ಯರು ಕಲೆಯನ್ನು ಕಲೆಯನ್ನಾಗಿ ನೋಡುತ್ತಾರೆ. ಅದು ಧಾರ್ಮಿಕ ನಂಬಿಕೆಗಳನ್ನು ಮೀರಿದೆ. ಅಲ್ಲದೆ ಖಾಸಗಿ ವಲಯಗಳಲ್ಲಿ ಖಂಡಿತವಾಗಿಯೂ ಕೆಲವು ಚರ್ಚೆಗಳು ನಡೆಯುತ್ತಿದ್ದವು. ಆದರೆ ನಾನು ಕಥಕ್ಕಳಿಯನ್ನು ಕಲಾ ಪ್ರಕಾರವೆಂದು ಪರಿಗಣಿಸುತ್ತೇನೆ. ನನ್ನ ಮಗಳ ಹಾದಿಯಲ್ಲಿ ನಾನು ಯಾವುದೇ ಅಡೆತಡೆಗಳನ್ನು ನಿರೀಕ್ಷಿಸುವುದಿಲ್ಲ. ಇದು ನಮ್ಮ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ನಿಜಾಮ್ ಹೇಳಿದ್ದಾರೆ.

ಸಾಬ್ರಿ ಮೊದಲು ಚಡಯಮಂಗಲಂನ ಅರೋಮಲ್ ಅವರ ಬಳಿ ಕಥಕ್ಕಳಿಯ ಮೊದಲ ಪಾಠಗಳನ್ನು ಕಲಿತಳು. ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ತನ್ನ ಮನೆಯ ಹತ್ತಿರದ ಶಿಕ್ಷಕರಿಂದ ಮೋಹಿನಿಯಾಟ್ಟಂ ಕಲಿತಳು ಎಂದು ಆಕೆಯ ತಂದೆ ವಿವರಿಸಿದ್ದಾರೆ.

ನಾನು ಸಾಬ್ರಿಯನ್ನು ಕಥಕ್ಕಳಿ ಕಲಿಯಲು ಬಯಸುತ್ತೀಯಾ ಎಂದು ಕೇಳಿದ್ದೆ, ಮತ್ತು ಕಲಾಮಂಡಲಂ ಮಹಿಳೆಯರನ್ನು ಕೋರ್ಸ್‌ಗೆ ಸೇರಿಸಿಕೊಳ್ಳಲು ಆರಂಭಿಸಿದೆ ಎಂದು ಹೇಳಿದಾಗ ಈ ವಿಷಯ ಕೇಳಿ ಅವಳು ತುಂಬಾ ಉತ್ಸುಕಳಾಗಿದ್ದಳು ಎಂದು ನಿಜಾಮ್ ಹೇಳಿದರು.

ಕಥಕ್ಕಳಿ ವೇಷ (ತೆಕ್ಕನ್) ಹೋಡಿ ಕಲಾಮಂಡಲಂ ರವಿಕುಮಾರ್ ಪ್ರಕಾರ, 2020-21 ಶೈಕ್ಷಣಿಕ ವರ್ಷದಲ್ಲಿ ಮಹಿಳಾ ವಿದ್ಯಾರ್ಥಿಗಳಿಗೆ ಮೊದಲ ಪ್ರವೇಶ ನೀಡಲಾಯಿತು. ಈಗ ನಾವು 11 ಹುಡುಗಿಯರನ್ನು ಹೊಂದಿದ್ದೇವೆ ಎಂಟನೇ ತರಗತಿಯಲ್ಲಿ ಮೂವರು, ಒಂಬತ್ತನೇ ತರಗತಿಯಲ್ಲಿ ನಾಲ್ವರು ಮತ್ತು 10 ನೇ ತರಗತಿಯಲ್ಲಿ ನಾಲ್ವರು ಇದ್ದಾರೆ ಎಂದು ವಿವರಿಸಿದ್ದಾರೆ. ಈ ವರ್ಷ, ಎಂಟನೇ ತರಗತಿಯಲ್ಲಿ ಮಹಿಳೆಯರಿಗೆ ಆರು ಸೀಟುಗಳು ಲಭ್ಯವಿವೆ. ನಮಗೆ 20 ಅರ್ಜಿಗಳು ಬಂದಿವೆ ಎಂದು ವಿವರಿಸಿದ್ದಾರೆ.

 

ಇದನ್ನು ಓದಿ: Skin Care Tips: ಕಣ್ಣಿನ ಕಪ್ಪು ವರ್ತುಲಗಳು, ತುಟಿಗಳ ಶುಷ್ಕತೆ ಎಲ್ಲದಕ್ಕೂ ಪರಿಹಾರ ತುಪ್ಪ ! ಬಳಕೆ ಹೇಗೆ? 

Leave A Reply

Your email address will not be published.