Home Breaking Entertainment News Kannada Zeeshan Khan: ಕಿಸ್ ಮಾಡಿ ಪ್ಯಾಂಟ್ ಬಿಚ್ಚು ಎಂದ್ರು- ಖ್ಯಾತ ನಟನೋರ್ವನ ಮಾತು! ಯಾರು ಆ...

Zeeshan Khan: ಕಿಸ್ ಮಾಡಿ ಪ್ಯಾಂಟ್ ಬಿಚ್ಚು ಎಂದ್ರು- ಖ್ಯಾತ ನಟನೋರ್ವನ ಮಾತು! ಯಾರು ಆ ರೀತಿ ಹೇಳಿದ್ದು?

Zeeshan Khan
Image source: Siasat. Com

Hindu neighbor gifts plot of land

Hindu neighbour gifts land to Muslim journalist

Zeeshan Khan: ಹಿಂದಿ ಧಾರಾವಾಹಿಗಳ ಮೂಲಕ ಜನಪ್ರಿಯತೆ ಪಡೆದ ನಟ ಜೀಶಾನ್ ಖಾನ್ ಬಗ್ಗೆ ನಮಗೆ ಈಗಾಗಲೇ ತಿಳಿದಿದೆ. ಇದೀಗ ಜೀಶನ್ ಖಾನ್ ಮನರಂಜನಾ ಉದ್ಯಮದಲ್ಲಿ ಕಾಸ್ಟಿಂಗ್ ಕೌಚ್ ಅನುಭವಿಸಿದ ಕರಾಳ ಅನುಭವವನ್ನು ಸಂದರ್ಶನವೊಂದರಲ್ಲಿ ಬಿಚ್ಚಿಟ್ಟಿದ್ದಾರೆ. ಇವರು ಇಂಡಸ್ಟ್ರಿಯಲ್ಲಿ ತಾನು ಎದುರಿಸಬೇಕಾಗಿದ್ದ ಹಲವಾರು ಕೆಟ್ಟ ಮತ್ತು ಮನಸ್ಸು ಒಪ್ಪದ ಸನ್ನಿವೇಶಗಳ ಬಗ್ಗೆ ಜನರೊಂದಿಗೆ ಹಂಚಿಕೊಂಡಿದ್ದಾರೆ.

ಹೌದು, ಜೀಶನ್ ಖಾನ್ (Zeeshan Khan) ತನ್ನ ಮೊದಲ ಕೆಲಸದ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. “ನಾನು ಯಾವತ್ತೂ ಆ ದಾರಿಯಲ್ಲಿ ಹೋಗಲು ಬಯಸಲಿಲ್ಲ, ನಾನು ಹೋಗಬೇಕೆಂದು ಅವರು ಬಯಸಿದ್ದರು. ನಾನು ಈ ಬಗ್ಗೆ ಸಾಕಷ್ಟು ಕೇಳಿದ್ದೇನೆ. ಕೆಲಸ ಪಡೆಯಲು ಕೆಟ್ಟ ರೀತಿ ನಡೆದುಕೊಳ್ಳಬೇಕಾದ ಅನೇಕ ಜನರು ನನಗೆ ಗೊತ್ತು. ಅವರು ಮುಂದೆ ಹೋಗಲು , ಕೆಲಸಕ್ಕಾಗಿ ಮತ್ತು ಎಲ್ಲದಕ್ಕೂ ಅಂತಹ ಕೆಲಸಗಳನ್ನು ಮಾಡಿದ್ದಾರೆ. ಆದರೆ ನಾನು ರಾತ್ರಿ ಮಲಗಿದಾಗ ಮನಸ್ಸು ಶಾಂತಿಯಿಂದ ಇರಬೇಕು. ನಾನು ಏನೋ ಮಾಡಿದ್ದೇನೆ, ಅದು ಹೊರಬಂದರೆ ಎಂಬ ಆಲೋಚನೆಯೊಂದಿಗೆ ರಾತ್ರಿ ಮಲಗಲು ನಾನು ಬಯಸುವುದಿಲ್ಲ” ಎಂದು ಜೀಶನ್ ಖಾನ್ ಹೇಳಿದ್ದಾರೆ.

ಅಂತಹ ಒಂದು ಘಟನೆಯನ್ನು ವಿವರಿಸಿದ ಜೀಶನ್ ಖಾನ್, ತನ್ನ ಕಛೇರಿಯಲ್ಲಿ ಕಾಸ್ಟಿಂಗ್ ನಿರ್ದೇಶಕರನ್ನು ಭೇಟಿಯಾದುದನ್ನು ನೆನಪಿಸಿಕೊಂಡರು. “ನನ್ನ ದೇಹವನ್ನು ತೋರಿಸಲು ಅವರು ನನ್ನನ್ನು ಕೇಳಿದರು. ಆಗ ನಾನು ನಿಮಗೆ ಫೋಟೋಗಳನ್ನು ಕಳುಹಿಸುತ್ತೇನೆ ಎಂದೆ. ಅದಕ್ಕೆ ಅವರು ಒಪ್ಪಲಿಲ್ಲ. ಈಗಲೇ ನೋಡಬೇಕು ಎಂದರು. ಅದಕ್ಕೆ ನಾನು ಮನಸ್ಸಿಲ್ಲದಿದ್ದರೂ ಟೀ ಶರ್ಟ್ ತೆಗೆದೆ. ಆ ಬಳಿಕ ನನಗೆ ನಿಮ್ಮ ಕಾಲುಗಳನ್ನು ನೋಡಬೇಕು ಎಂದ್ರು. ಪ್ಯಾಂಟ್‌ ಬಿಚ್ಚಿ ಎಂದು ಒತ್ತಾಯಿಸಿದರು. ನಾನು ಅವರ ಮಾತನ್ನು ನಿರಾಕರಿಸಿದೆ. ಆಗ ಅವರಿಗೆ ಕೋಪ ಬಂತು. ನಿಮ್ಮಂತಹ ಅನೇಕರನ್ನು ನಾನು ನೋಡಿದ್ದೇನೆ, ಕೆಲಸ ಬೇಕು ಅಂದ್ರೆ ಇಂಥದ್ದೆಲ್ಲ ಮಾಡಬೇಕಾಗುತ್ತೆ ಅಂದ್ರು” ಎಂದು ತಮಗಾದ ಕರಾಳ ಅನುಭವವನ್ನು ಬಿಚ್ಚಿಟ್ಟರು.

ಅದಲ್ಲದೆ ಲಾಂಚ್ ಸಮಾರಂಭವೊಂದರಲ್ಲಿ ಫ್ಯಾಷನ್ ಡಿಸೈನರ್ ಒಮ್ಮೆ ತನಗೆ ಮುತ್ತು ಕೊಡಲು ಯತ್ನಿಸಿದ್ದನ್ನು ಸಹ ನಟ ಬಹಿರಂಗಪಡಿಸಿದ್ದಾರೆ. “ಅವರನ್ನು ತಬ್ಬಿಕೊಂಡಾಗ, ನನ್ನ ತುಟಿಗೆ ಮುತ್ತಿಟ್ಟಿದ್ದರು. ನಾನು ಕೂಡಲೇ ಅವರಿಂದ ಬಿಡಿಸಿಕೊಂಡೆ. ಅಲ್ಲದೇ ಅವರು ನನ್ನ ಕೆನ್ನೆಗೆ ಸಹ ಕಿಸ್ ಮಾಡಿದರು. ಇನ್ನೊಮ್ಮೆ ನನ್ನ ಜೊತೆ ಇದನ್ನೆಲ್ಲ ಮಾಡಬೇಡಿ ಎಂದು ಅವರಿಗೆ ಹೇಳಿದೆ” ಎಂದು ಮತ್ತೊಂದು ಕರಾಳ ಘಟನೆಯನ್ನು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ:Post Office: ಕರಾವಳಿ ಜನತೆಗೆ ಸಿಹಿ ಸುದ್ದಿ! ಪೋಸ್ಟ್ ಆಫೀಸ್ ನಲ್ಲಿ ದಿನದ 24ಗಂಟೆ ಸೇವೆ ಲಭ್ಯ