Home Food Amarnath Yatra: ಅಮರನಾಥ ಯತ್ರೆಗೆ ಹೋಗೋ ಮುನ್ನ ಇವುಗಳನ್ನು ಅರಿತಿರಿ! ದೋಸೆ ಸೇರಿ 40 ತಿಂಡಿ...

Amarnath Yatra: ಅಮರನಾಥ ಯತ್ರೆಗೆ ಹೋಗೋ ಮುನ್ನ ಇವುಗಳನ್ನು ಅರಿತಿರಿ! ದೋಸೆ ಸೇರಿ 40 ತಿಂಡಿ ನಿಷೇಧ! ಯಾಕೆ ಈ ಕ್ರಮ?

Amarnath Yatra
Image source: Zee news

Hindu neighbor gifts plot of land

Hindu neighbour gifts land to Muslim journalist

Amarnath Yatra: ಅಮರನಾಥ ಹಿಂದೂ ಧರ್ಮದ ಪವಿತ್ರ ಮತ್ತು ಪ್ರಮುಖ ಯಾತ್ರಾ ಕೇಂದ್ರಗಳಲ್ಲಿ ಒಂದಾಗಿದೆ. ಈ ಪವಿತ್ರ ಸ್ಥಾನವು ಸಮುದ್ರ ಮಟ್ಟದಿಂದ 13,600 ಅಡಿ ಎತ್ತರದಲ್ಲಿದೆ. ಭಾರತದ ಜಮ್ಮು ಮತ್ತು ಕಾಶ್ಮೀರದ ರಾಜಧಾನಿ ಶ್ರೀನಗರದ ಈಶಾನ್ಯಕ್ಕೆ 135 ಕಿಮೀ ದೂರದಲ್ಲಿದೆ. ಜುಲೈ 1ರಿಂದ ಹಿಂದುಗಳ ಪವಿತ್ರ ʼಅಮರನಾಥ ಯಾತ್ರೆʼ (Amarnath Yatra) ಆರಂಭವಾಗಲಿದೆ.

ಕೆಲವರು ಅಮರನಾಥವನ್ನು ಸ್ವರ್ಗದ ದಾರಿ ಎಂದು ಕರೆದರೆ, ಕೆಲವರು ಮೋಕ್ಷದ ಸ್ಥಳ ಎಂದು ಕರೆಯುತ್ತಾರೆ. ಆದರೆ ಇಲ್ಲಿಗೆ ಯಾವುದೇ ಭಕ್ತನು ಭೇಟಿ ನೀಡಿದರೆ ಅವನು ಶಿವನ ಸ್ವಯಂಪ್ರೇರಿತ ಶಿವಲಿಂಗದ ದರ್ಶನವನ್ನು ಪಡೆದುಕೊಳ್ಳುವ ಮೂಲಕ ಶಿವನ ಆಶೀರ್ವಾದ ಪಡೆದುಕೊಳ್ಳುತ್ತಾರೆ ಎನ್ನುವುದು ನಿಜ. ಅಮರನಾಥವನ್ನು ತಲುಪಿದ ನಂತರವೂ, ಅಮರನಾಥದ ಪವಿತ್ರ ಗುಹೆಯನ್ನು ತಲುಪಲು ದೀರ್ಘ ಪ್ರಯಾಣ ಮಾಡಬೇಕಾಗುತ್ತದೆ.

ಕಾಶ್ಮೀರದ ಹಿಮಾಲಯ ಪ್ರದೇಶದಲ್ಲಿ 3,880 ಮೀಟರ್‌ ಎತ್ತರದಲ್ಲಿ ಅಮರನಾಥ ಗುಹೆ ಇದೆ. ಯಾತ್ರೆ ಕೈಗೊಳ್ಳಲು ಜುಲೈ 1ರಿಂದ ಎರಡು ಮಾರ್ಗಗಳನ್ನು ತೆರೆಯಲಾಗುತ್ತದೆ. ನುನ್ವಾನ್‌-ಪಹಲ್‌ಗಾಮ್‌ ಮೂಲಕ 48 ಕಿ.ಮೀ ಹಾಗೂ ಬಲ್ತಾಳ್‌ ಮೂಲಕ 18 ಕಿ.ಮೀ ಯಾತ್ರೆ ಕೈಗೊಳ್ಳಬಹುದಾಗಿದೆ. 14 ಕಿ.ಮೀ ಯಾತ್ರೆಯನ್ನು ಟ್ರೆಕ್ಕಿಂಗ್‌ ಮೂಲಕ ಕೈಗೊಳ್ಳಬಹುದಾಗಿದ್ದು, ಬೆಟ್ಟಗಳ ಕಡಿದಾದ ಹಾದಿಯಲ್ಲಿ ಸಾಗಬೇಕು. ನಿತ್ಯ 4-5 ಕಿ.ಮೀ ನಡೆಯಬೇಕು.

ಯಾತ್ರಕರು ನಿತ್ಯ ಬೆಳಗ್ಗೆ ಹಾಗೂ ಸಾಯಂಕಾಲ ಸೇರಿ ನಾಲ್ಕೈದು ಕಿ.ಮೀ ನಡೆಯಬೇಕು. ಹೀಗೆ ನಡೆಯಬೇಕಾದರೆ ಅವರ ಆರೋಗ್ಯ ಸರಿಯಾಗಿರಬೇಕು. ದೈಹಿಕ ಫಿಟ್‌ನೆಸ್‌ ಹೆಚ್ಚು ಮುಖ್ಯವಾಗಿರುತ್ತದೆ. ಈ ಹಿನ್ನೆಲೆ ದೋಸೆ, ಪಲಾವ್‌, ಬರ್ಗರ್‌ ಸೇರಿ 40 ತಿಂಡಿಗಳನ್ನು ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ. ನಿಷೇಧಿತ 40 ತಿಂಡಿಗಳನ್ನು ಹೊರತುಪಡಿಸಿ ಯಾತ್ರಿಕರು ಯಾವ ತಿಂಡಿಯನ್ನಾದರೂ ತೆಗೆದುಕೊಂಡು ಹೋಗಬಹುದು” ಎಂದು ಮಂಡಳಿ ಮಾಹಿತಿ ನೀಡಿದೆ.

ಬೆಟ್ಟಗಳ ಕಡಿದಾದ ಹಾದಿಯಲ್ಲಿ ನಡೆದುಕೊಂಡು ಹೋಗುವ ಜತೆಗೆ ಅತಿಯಾದ ಚಳಿಯು ಯಾತ್ರಿಕರು ಬಸವಳಿಯುವಂತೆ ಮಾಡುತ್ತದೆ. 2-5 ಡಿಗ್ರಿ ಸೆಲ್ಸಿಯಸ್‌ ತಾಪಮಾನದಲ್ಲಿ ಯಾತ್ರೆ ಕೈಗೊಳ್ಳಬೇಕಾಗುತ್ತದೆ. ಅದರಲ್ಲೂ, ಹಿರಿಯ ನಾಗರಿಕರು ಪ್ರಯಾಣ ಮಾಡುವಾಗ ಹೈಪೋಥರ್ಮಿಯಾಗೆ (ದೇಹದ ಉಷ್ಣತೆ ಅತಿಯಾಗಿ ಕಡಿಮೆಯಾಗುವುದು) ತುತ್ತಾಗುತ್ತಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಆಹಾರ ಪದಾರ್ಥಗಳನ್ನು ನಿಷೇಧಿಸಲಾಗಿದೆ ಎಂದು ಮಂಡಳಿ ಮಾಹಿತಿ ನೀಡಿದೆ.

ಮುಖ್ಯವಾಗಿ ದೋಸೆ, ಪಲಾವ್‌, ಬರ್ಗರ್‌, ಫ್ರೈಡ್‌ ರೈಸ್‌, ಪುರಿ, ಬಟುರಾ, ಸ್ಟಫ್ಡ್‌ ಪರೋಟ, ಫ್ರೈಡ್‌ ರೋಟಿ, ಬ್ರೆಡ್‌, ಬಟರ್‌, ಉಪ್ಪಿನ ಕಾಯಿ, ಚಟ್ನಿ, ಫ್ರೈಡ್‌ ಪಾಪಡ್‌ ಸೇರಿ ಹಲವು ತಿಂಡಿಗಳನ್ನು ಕೊಂಡೊಯ್ಯುವುದನ್ನು ನಿಷೇಧಿಸಿದೆ. ಇವುಗಳ ಬದಲಾಗಿ, ನಡೆಯಲು, ಹೆಚ್ಚಿನ ಶಕ್ತಿ ನೀಡುವ ಕಾಳುಗಳು, ತರಕಾರಿ, ಸಲಾಡ್‌ ಹಾಗೂ ಕೆಲ ರೈಸ್‌ ಐಟಂಗಳನ್ನು ತೆಗೆದುಕೊಂಡು ಹೋಗುವುದು ಒಳಿತು ಎಂದು ಕೂಡ ಮಂಡಳಿ ಸಲಹೆ ನೀಡಿದೆ.

ಇದನ್ನೂ ಓದಿ: MobilePhone: ಯಾರಿಗುಂಟು ಯಾರಿಗಿಲ್ಲ ಬಿಗ್ ಆಫರ್, ಸರ್ಕಾರದಿಂದ ಮಹಿಳೆಯರಿಗೆ ಸ್ಮಾರ್ಟ್ಫೋನ್ ಕೊಳ್ಳಲು ಖಾತೆಗೆ ಹಣ ಜಮೆ