MobilePhone: ಯಾರಿಗುಂಟು ಯಾರಿಗಿಲ್ಲ ಬಿಗ್ ಆಫರ್, ಸರ್ಕಾರದಿಂದ ಮಹಿಳೆಯರಿಗೆ ಸ್ಮಾರ್ಟ್ಫೋನ್ ಕೊಳ್ಳಲು ಖಾತೆಗೆ ಹಣ ಜಮೆ

Latest National news Government offer Free mobilephone yojana list 2023 online registration

Free Mobile phone scheme: ರಾಜಸ್ಥಾನದಲ್ಲಿ ಮಹಿಳೆಯರ ಸಬಲೀಕರಣಗೊಳಿಸುವ ಉದ್ದೇಶದಿಂದ ಸ್ಮಾರ್ಟ್‌ಫೋನ್‌ಗಳನ್ನು (Free Mobile phone scheme) ಒದಗಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಈಗಾಗಲೇ ಘೋಷಣೆ ಮಾಡಿದ್ದು, ಈ ಹಿನ್ನೆಲೆ ರಾಜಸ್ಥಾನದಲ್ಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋತ್‌ ಅವರು ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ.

ಮಹಿಳೆಯರು ಅವರ ಇಷ್ಟದ ಸ್ಮಾರ್ಟ್‌ಫೋನ್ ಖರೀದಿಸಲು ನಿರ್ದಿಷ್ಟ ಮೊತ್ತದ ಹಣವನ್ನು ಅವರ ಖಾತೆಗೇ ಜಮೆ ಮಾಡುವ ಚಿಂತನೆಯನ್ನು ಸರ್ಕಾರ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಗುರುವಾರ ಹೇಳಿದ್ದಾರೆ.

ಈಗಾಗಲೇ ರಾಜಸ್ಥಾನ ಸರ್ಕಾರ ರಕ್ಷಾ ಬಂಧನದಂದು ಮಹಿಳೆಯರಿಗೆ ಮೊಬೈಲ್‌ ಫೋನ್‌ (MobilePhone) ವಿತರಣಾ ಕಾರ್ಯಕ್ರಮ ಜಾರಿಗೊಳಿಸುವಾಗಿ ಘೋಷಣೆ ಮಾಡಿರುವ ಸರ್ಕಾರ, ಸದ್ಯ ಯೋಜನೆಯಲ್ಲಿ ಸಣ್ಣ ಬದಲಾವಣೆ ಮಾಡಿದೆ.

ಏಪ್ರಿಲ್‌ನಲ್ಲಿ ರಾಜಸ್ಥಾನ ರಾಜ್ಯದ 1.35 ಕೋಟಿ ಮಹಿಳೆಯರಿಗೆ ಸ್ಮಾರ್ಟ್‌ಫೋನ್ ನೀಡುವುದಾಗಿ ಸಿಎಂ ಗೆಹ್ಲೋತ್‌ ರಾಜ್ಯ ಬಜೆಟ್‌ನಲ್ಲಿ ಘೋಷಿಸಿದ್ದರು. ರಕ್ಷಾ ಬಂಧನದಂದು (ಆಗಸ್ಟ್ 30) ಕಾರ್ಯಕ್ರಮ ಆರಂಭವಾಗಲಿದ್ದು, ಸರ್ಕಾರವು ಹಂತ ಹಂತವಾಗಿ ಸ್ಮಾರ್ಟ್‌ಫೋನ್‌ಗಳನ್ನು ನೀಡಲಿದೆ ಎಂದು ಗೆಹ್ಲೋತ್‌ ಹೇಳಿದ್ದರು.

ಈ ವಿಷಯದ ಕುರಿತು ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿರುವ ಗೆಹ್ಲೋತ್‌ ಅವರು, ‘ಈಗ ಹಲವು ವಿಶೇಷಗಳನ್ನು ಒಳಗೊಂಡ ಬಗೆಬಗೆಯ ಫೋನ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಜನರು ಅವರ ಆಯ್ಕೆಯ ಫೋನ್‌ ಖರೀದಿಸಲು ಬಯಸುತ್ತಾರೆ. ಮಾರುಕಟ್ಟೆಯಲ್ಲಿ ನಿಮ್ಮ ಆಯ್ಕೆಯ ಫೋನ್‌ ನಿಮಗೆ ಸಿಗುತ್ತದೆ. ಸದ್ಯ ರಾಜ್ಯದಲ್ಲಿ ಹಣದುಬ್ಬರ ಪರಿಹಾರ ಶಿಬಿರಗಳನ್ನು ಸ್ಥಾಪಿಸಲಾಗಿದ್ದು, ಅದರಂತೆಯೇ ಕೌಂಟರ್‌ಗಳನ್ನು ತೆರೆದು ಜನರ ಆಯ್ಕೆಯ ಫೋನ್‌ಗಳನ್ನು ನೀಡಲು ಸಾಧ್ಯವೇ ಎಂಬುದರ ಕುರಿತು ನಾವು ಕಂಪನಿಗಳೊಂದಿಗೂ ಮಾತನಾಡುತ್ತಿದ್ದೇವೆ. ಇನ್ನೊಂದೆಡೆ, ಫೋನ್ ವಿತರಿಸುವುದಕ್ಕೆ ಬದಲಾಗಿ ಮಹಿಳಾ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ನಿಗದಿತ ಮೊತ್ತವನ್ನು ವರ್ಗಾಯಿಸಲು ಸರ್ಕಾರ ಚಿಂತಿಸುತ್ತಿದೆ’ ಎಂದೂ ಗೆಹ್ಲೋತ್‌ ಮಾಹಿತಿ ನೀಡಿದರು.

ಸದ್ಯ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಎಷ್ಟು ಮೊತ್ತವನ್ನು ವರ್ಗಾಯಿಸಬೇಕು ಎಂಬುದರ ಕುರಿತು ಚರ್ಚಿಸಲಾಗುತ್ತಿದೆ ಎಂದು ಗೆಹ್ಲೋತ್‌ ತಿಳಿಸಿದ್ದಾರೆ.

ಇದನ್ನೂ ಓದಿ: Hijab: ಹಿಜಾಬ್ ಮೂಲಕ ವಿದ್ಯಾರ್ಥಿನಿಯರ ಮತಾಂತರ ಶಂಕೆ, ಶಾಲೆಯ ಕಟ್ಟಡ ಧ್ವಂಸ !

Leave A Reply

Your email address will not be published.