Post Office Recruitment 2023: ಅಂಚೆ ಇಲಾಖೆ ಹುದ್ದೆಯ ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ ; ಕೊನೆಯ ಅವಕಾಶ ಮಿಸ್ ಮಾಡ್ಕೋಬೇಡಿ, ತಕ್ಷಣ ಅರ್ಜಿ ಸಲ್ಲಿಸಿ !!

Central Government jobs Indian post office recruitment Indian post office GDS online application end date extended

Share the Article

Post Office Recruitment 2023: ಭಾರತೀಯ ಅಂಚೆ ಇಲಾಖೆಯು (Indian Post Office) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿತ್ತು. (Post Office Recruitment 2023) ಇದೀಗ ಹುದ್ದೆಯ ಆನ್‌ಲೈನ್‌ ಅರ್ಜಿಗೆ ದಿನಾಂಕ ವಿಸ್ತರಣೆ ಮಾಡಲಾಗಿದೆ. ಆಸಕ್ತರು ಬೇಗನೆ ಅರ್ಜಿ ಸಲ್ಲಿಸುವುದು ಉತ್ತಮ.

ಈ ಹಿಂದೆ ಜೂನ್ 11 ರವರೆಗೆ ಮಾತ್ರ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿತ್ತು. ಇದೀಗ ಪರಿಷ್ಕೃತ ದಿನಾಂಕಗಳ ಪ್ರಕಾರ ಮತ್ತೆ ಆನ್‌ಲೈನ್‌ ಅರ್ಜಿಗೆ ಜೂನ್‌ 16 ರಿಂದ 23 ರವರೆಗೆ ಅವಕಾಶ ನೀಡಲಾಗಿದೆ. ಹೆಚ್ಚಿನ ವಿವರ ಈ ಕೆಳಗಿನಂತಿದೆ.

ಹುದ್ದೆಯ ವಿವರ:-
ಹುದ್ದೆಯ ಹೆಸರು: ಗ್ರಾಮೀಣ ಡಾಕ್​ ಸೇವಕ್ ಹುದ್ದೆ (ಬ್ರಾಂಚ್ ಪೋಸ್ಟ್​ಮಾಸ್ಟರ್, ಅಸಿಸ್ಟೆಂಟ್ ಬ್ರಾಂಚ್ ಪೋಸ್ಟ್​ಮಾಸ್ಟರ್) (GDS- BPM/ABPM)
ಹುದ್ದೆಗಳ ಸಂಖ್ಯೆ : 12828 (ದೇಶದಾದ್ಯಂತ)
ಕರ್ನಾಟಕ ಅಂಚೆ ವೃತ್ತದಲ್ಲಿ ಹುದ್ದೆಗಳ ಸಂಖ್ಯೆ : 48

ಅರ್ಜಿ ಸಲ್ಲಿಕೆಗೆ ಪರಿಷ್ಕೃತ ದಿನಾಂಕಗಳು:-
ಅರ್ಜಿ ಸಲ್ಲಿಸಲು ಆರಂಭ ದಿನಾಂಕ : 16-06-2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 23-06-2023
ಆನ್‌ಲೈನ್‌ ಅರ್ಜಿಯ ಮಾಹಿತಿಗಳನ್ನು ತಿದ್ದುಪಡಿ : ಜೂನ್ 24 – 26, 2023.

ವಿದ್ಯಾರ್ಹತೆ ಹಾಗೂ ಅನುಭವ :
• 10ನೇ ತರಗತಿ
• ಆಯಾ ರಾಜ್ಯದ ಅಧಿಕೃತ ಭಾಷೆ ಓದಲು, ಬರೆಯಲು, ಮಾತನಾಡಲು ಗೊತ್ತಿರಬೇಕು.
• ಬೇಸಿಕ್ ಕಂಪ್ಯೂಟರ್ ಜ್ಞಾನ ಮತ್ತು ಪ್ರಮಾಣ ಪತ್ರಗಳನ್ನು ಹೊಂದಿರಬೇಕು.

ಉದ್ಯೋಗದ ಸ್ಥಳ: ಕರ್ನಾಟಕ
ವಯೋಮಿತಿ: ಕನಿಷ್ಠ 18 ವರ್ಷ ಮತ್ತು ಗರಿಷ್ಠ 40 ವರ್ಷ.

ವಯೋಮಿತಿ ಸಡಿಲಿಕೆ:
ಒಬಿಸಿ ಅಭ್ಯರ್ಥಿಗಳು- 3 ವರ್ಷ
SC/ ST ಅಭ್ಯರ್ಥಿಗಳು- 5 ವರ್ಷ
PWD (OBC) ಅಭ್ಯರ್ಥಿಗಳು- 13 ವರ್ಷ
PWD (SC/ST) ಅಭ್ಯರ್ಥಿಗಳು- 15 ವರ್ಷ
PWD (ಜನರಲ್) ಅಭ್ಯರ್ಥಿಗಳು- 10 ವರ್ಷ

ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳನ್ನು ಮೆರಿಟ್ ಲಿಸ್ಟ್, ದಾಖಲಾತಿ ಪರಿಶೀಲನೆ ಹಾಗೂ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

ಮಾಸಿಕ ವೇತನ:
ಗ್ರಾಮೀಣ ಡಾಕ್ ಸೇವಕ್ (ಬ್ರಾಂಚ್ ಪೋಸ್ಟ್​ಮಾಸ್ಟರ್)- ₹ 12,000- 29,380
ಗ್ರಾಮೀಣ ಡಾಕ್ ಸೇವಕ್ (ಅಸಿಸ್ಟೆಂಟ್ ಬ್ರಾಂಚ್ ಪೋಸ್ಟ್​ಮಾಸ್ಟರ್​​) – ₹ 10,000 24,470

ಅರ್ಜಿ ಶುಲ್ಕ: ಮಹಿಳಾ/ SC/ST/PwD & ತೃತೀಯ ಲಿಂಗಿ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇರುವುದಿಲ್ಲ. ಉಳಿದ ಎಲ್ಲಾ ಅಭ್ಯರ್ಥಿಗಳಿಗೆ 100 ರೂ. ಅರ್ಜಿ ಶುಲ್ಕ ಇರುತ್ತದೆ. ಅಭ್ಯರ್ಥಿಗಳು ಶುಲ್ಕವನ್ನು ಆನ್​ಲೈನ್ ಮೂಲಕ ಪಾವತಿಸಬಹುದಾಗಿದೆ.

ಅರ್ಜಿ ಸಲ್ಲಿಕೆ:
ವೆಬ್‌ಸೈಟ್‌ https://indiapostgdsonline.gov.in/Reg_validation.aspx ಗೆ ಭೇಟಿ ನೀಡಿ ರಿಜಿಸ್ಟ್ರೇಷನ್‌ ಪಡೆಯಬೇಕು. ನಂತರ ಮತ್ತೆ ಲಾಗಿನ್‌ ಆಗಿ ಅರ್ಜಿ ಸಲ್ಲಿಸಿ, ಶುಲ್ಕ ಪಾವತಿಸಿ, ಅರ್ಜಿ ಪೂರ್ಣಗೊಳಿಸಬೇಕು.

ಹೆಚ್ಚಿನ ಮಾಹಿತಿಗಾಗಿ ವೆಬ್‌ಸೈಟ್‌ ವಿಳಾಸ : http://appost.in/gdsonline/

ಇದನ್ನೂ ಓದಿ: Gruha jyothi Scheme : ‘ಗೃಹಜ್ಯೋತಿ ಯೋಜನೆ’ಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಮುಂದೂಡಿಕೆ ; ದಿನಾಂಕ ಗಮನಿಸಿ !

Leave A Reply