Janardhana Reddy property confiscated: ಶಾಸಕ ಜನಾರ್ದನ ರೆಡ್ಡಿ ಮತ್ತು ಪತ್ನಿ ಅರುಣಾ ರೆಡ್ಡಿಯ ಕೋಟ್ಯಂತರ ಮೌಲ್ಯದ ಆಸ್ತಿ ಜಪ್ತಿ: ಸಿಬಿಐ ವಿಶೇಷ ಕೋರ್ಟ್

Share the Article

Janardhana Reddy property confiscated: ಸಿಬಿಐ ವಿಶೇಷ ಕೋರ್ಟ್ ಜನಾರ್ದನ ರೆಡ್ಡಿ ಹಾಗೂ ಅವರ ಪತ್ನಿ ಲಕ್ಷ್ಮೀ ಅರುಣಾ ಅವರ ಆಸ್ತಿ ಜಪ್ತಿಗೆ (Janardhana Reddy property confiscated) ಆದೇಶ ಹೊರಡಿಸಿದೆ. ಇದರಿಂದಾಗಿ ರೆಡ್ಡಿಯವರ ಕೋಟ್ಯಂತರ ಮೌಲ್ಯದ ಆಸ್ತಿ ಜಪ್ತಿಯಾಗಲಿದೆ.

ಜನಾರ್ದನ ರೆಡ್ಡಿ ಹಾಗೂ ಪತ್ನಿ ಲಕ್ಷ್ಮೀ ಅರುಣಾ ಅವರಿಗೆ ಸೇರಿದ ಒಟ್ಟು 124 ಕೋಟಿ ರೂ. ಆಸ್ತಿ ಜಪ್ತಿ ಮಾಡಲು ಕೋರ್ಟ್ ಸೂಚನೆ ನೀಡಿದೆ. ಕ್ರಯಪತ್ರಗಳ ಮೂಲಕ ಖರೀದಿಸಿದ್ದ 77 ಆಸ್ತಿ ಜಪ್ತಿ ಯಾಗಲಿದೆ.

ಕ್ರಿಮಿನಲ್ ಕೇಸ್ ಮುಗಿಯುವವರೆಗೂ ಶಾಸಕ ಜನಾರ್ದನ ರೆಡ್ಡಿ (Janardhana Reddy) ಮತ್ತು ಪತ್ನಿ ಅರುಣಾ ರೆಡ್ಡಿಯ ಕೋಟ್ಯಂತರ ಮೌಲ್ಯದ ಆಸ್ತಿ ಜಪ್ತಿ ಮಾಡುವಂತೆ ಕೋರ್ಟ್ ಸೂಚನೆ ನೀಡಿದೆ.

ಈ ಹಿಂದೆ 2023ರ ಜನವರಿ 12 ರಂದು ಜನಾರ್ದನ ರೆಡ್ಡಿ ಆಸ್ತಿ ಜಪ್ತಿಗೆ ಕರ್ನಾಟಕ ಗೃಹ ಇಲಾಖೆ ಅನುಮತಿ ನೀಡಿ ಆದೇಶ ಹೊರಡಿಸಿತ್ತು. ಇದೀಗ ಮತ್ತೆ ರೆಡ್ಡಿ ಆಸ್ತಿ ಕ್ರಿಮಿನಲ್ ಕೇಸ್ ಮುಗಿಯುವವರೆಗೆ ಜಪ್ತಿ ಆಗಲಿದೆ.

ಇದನ್ನೂ ಓದಿ :5 ದಿನಗಳಲ್ಲಿ 50 ಲಕ್ಷ ಮನೆಗಳ ಬಾಗಿಲಿಗೇ ಬರಲಿದೆ ಬಿಜೆಪಿ ನಾಯಕರ ದಂಡು!!ಕಾರಣವೇನು?

Leave A Reply