Home News Honeymoon: ಹನಿಮೂನ್ ಆಸೆಯಿಂದ ಇಂಡೋನೇಷ್ಯಾದ ಬಾಲಿಗೆ ಹೋದ ನವ ದಂಪತಿಯನ್ನು ಸೆಳೆದಿತ್ತು ವಿಧಿ!

Honeymoon: ಹನಿಮೂನ್ ಆಸೆಯಿಂದ ಇಂಡೋನೇಷ್ಯಾದ ಬಾಲಿಗೆ ಹೋದ ನವ ದಂಪತಿಯನ್ನು ಸೆಳೆದಿತ್ತು ವಿಧಿ!

Honeymoon

Hindu neighbor gifts plot of land

Hindu neighbour gifts land to Muslim journalist

Honeymoon: ನವಜೋಡಿಗಳು ಹನಿಮೂನ್ ಹೋಗೋದು ಸಹಜ. ಅದರಲ್ಲೂ ವಿದೇಶದಲ್ಲಿ ಹನಿಮೂನ್ ಸಮಯ ಕಳೆಯಲು ಹೆಚ್ಚಾಗಿ ಬಯಸುತ್ತಾರೆ. ಯಾವುದೇ ಜೋಡಿ (Couple) ಇರಲಿ ತಮ್ಮ ಹನಿಮೂನ್ ದಿನಗಳು (Honeymoon Days) ಜೀವನ (Life) ಪರ್ಯಂತ ನೆನಪಿನಲ್ಲಿ ಇರಬೇಕು ಎಂದು ಬಯಸುತ್ತಾರೆ. ಅದಕ್ಕಾಗಿಯೇ ಸ್ಥಳದ ಆಯ್ಕೆ (Honeymoon Place Selection) ಸೇರಿದಂತೆ ಹಲವು ಪ್ಲಾನ್ ಗಳನ್ನು ಮಾಡಿಕೊಂಡಿರುತ್ತಾರೆ.

ಹಾಗೆಯೇ, ತಮಿಳುನಾಡು ರಾಜಧಾನಿ ಚೆನ್ನೈ ಮೂಲದ ನವವಿವಾಹಿತ ಜೋಡಿಯೊಂದು ಇಂಡೋನೇಷ್ಯಾಕ್ಕೆ ಹನಿಮೂನ್​ ಪ್ರವಾಸ ಕೈಗೊಂಡ ವೇಳೆ ಕೊನೆ ಉಸಿರೆಳೆದಿದ್ದಾರೆ.

ಜೂನ್​ 1ರಂದು ಮದುವೆಯಾಗಿದ್ದ ಈ ನವಜೋಡಿಗಳು ಇಬ್ಬರು ಕೂಡ ವೃತ್ತಿಯಲ್ಲಿ ವೈದ್ಯರಾಗಿದ್ದರು. ಮೃತರನ್ನು ಡಾ. ಲೋಕೇಶ್ವರನ್​ ಮತ್ತು ಡಾ. ವಿಬುಷ್ನಿಯಾ ಎಂದು ಗುರುತಿಸಲಾಗಿದೆ.
ಈ ಜೋಡಿಯು ಹನಿಮೂನ್​ಗೆಂದು ಇಂಡೋನೇಷ್ಯಾದ ಬಾಲಿ ದ್ವೀಪಕ್ಕೆ ತೆರಳಿದ್ದರು. ಫೋಟೋಗೆ ಪೋಸ್​ ಕೊಡುವ ವೇಳೆ ಇಬ್ಬರು ನೀರುಪಾಲಾಗಿದ್ದಾರೆ.

ಹೌದು, ಲೋಕೇಶ್ವರನ್ ಮತ್ತು ವಿಬುಷ್ನಿಯಾ ತಮ್ಮ ಹೊಸ ಜೀವನದ ಸುಂದರವಾದ ನೆನಪುಗಳನ್ನು ಉಳಿಸಿಕೊಳ್ಳಲು, ಸಮುದ್ರದಲ್ಲಿ ಮೋಟಾರ್ ಬೋಟ್‌ನಲ್ಲಿ ಫೋಟೋಶೂಟ್ ಮಾಡಲು ನಿರ್ಧರಿಸಿದರು. ಆದರೆ ದುರಂತವೆಂದರೆ ಚಿತ್ರೀಕರಣದ ವೇಳೆ ಇಬ್ಬರೂ ನೀರಿಗೆ ಬಿದ್ದು ಸಮುದ್ರ ಪಾಲಾಗಿದ್ದಾರೆ.

ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಎರಡೂ ಕುಟುಂಬಗಳು ಆಘಾತಕ್ಕೆ ಒಳಗಾಗಿವೆ. ಮಕ್ಕಳನ್ನು ಕಳೆದುಕೊಂಡ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.

ಸದ್ಯ ಮೃತ ದಂಪತಿ ಮೃತದೇಹಗಳನ್ನು ಹುಟ್ಟೂರಾದ ಚೆನ್ನೈಗೆ ತರಲು ವ್ಯವಸ್ಥೆ ಮಾಡಲಾಗಿದೆ. ಒಟ್ಟಿನಲ್ಲಿ ಬಾಳಿ ಬದುಕಬೇಕಾದ ಸಾವಿರಾರು ಕನಸು ಹೊತ್ತು ಸಪ್ತಪದಿ ತುಳಿದ ಜೀವಗಳು ವಿಧಿ ಕೈ ವಶವಾಗಿದೆ.

 

ಇದನ್ನು ಓದಿ: CM Siddaramaiah: ವರುಣಾ ಕ್ಷೇತ್ರವನ್ನ ತಾಲೂಕು ಕೇಂದ್ರ ಮಾಡಲು ಸಾಧ್ಯವಿಲ್ಲ : ಸಿಎಂ ಸಿದ್ದರಾಮಯ್ಯ