KSHD Recruitment 2023: ತೋಟಗಾರಿಕಾ ಇಲಾಖೆಯಲ್ಲಿ ಭರ್ಜರಿ ಉದ್ಯೋಗವಕಾಶ! 5465 ಹುದ್ದೆಗಳಿಗೆ ಅರ್ಜಿ ಸಲ್ಲಿಕೆಗೆ ಅವಕಾಶ! ಇಲ್ಲಿದೆ ಹೆಚ್ಚಿನ ಮಾಹಿತಿ

KSHD Recruitment 2023 agriculture job offers in Karnataka 5465 assistant horticulture officer gardner post apply online

KSHD Recruitment 2023: ಕರ್ನಾಟಕ ರಾಜ್ಯ ತೋಟಗಾರಿಕೆ ಇಲಾಖೆಯು KSHDಯ ಮೂಲಕ ಭರ್ಜರಿ 5465 ಸಹಾಯಕ ತೋಟಗಾರಿಕಾ ಅಧಿಕಾರಿ, ತೋಟಗಾರ ಹುದ್ದೆಗಳಿಗೆ( KSHD Recruitment 2023) ಅರ್ಜಿ ಆಹ್ವಾನಿಸಿದೆ. ಕರ್ನಾಟಕ ಸರಕಾರದಲ್ಲಿ ಕೆಲಸ ಹುಡುಕುವವರಿಗೆ ಇದೊಂದು ಉತ್ತಮ ಅವಕಾಶ ಎಂದೇ ಹೇಳಬಹುದು. ಈ ಅವಕಾಶವನ್ನು ಬಳಸಿಕೊಳ್ಳುವ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ.

ಸಂಸ್ಥೆಯ ಹೆಸರು : ಕರ್ನಾಟಕ ರಾಜ್ಯ ತೋಟಗಾರಿಕೆ ಇಲಾಖೆ ( KSHD )
ಪೋಸ್ಟ್‌ಗಳ ಸಂಖ್ಯೆ: 5465
ಉದ್ಯೋಗ ಸ್ಥಳ: ಕರ್ನಾಟಕ
ಪೋಸ್ಟ್ ಹೆಸರು: ಸಹಾಯಕ ತೋಟಗಾರಿಕಾ ಅಧಿಕಾರಿ, ತೋಟಗಾರ
ಸಂಬಳ: ರೂ.17000-104600/- ಪ್ರತಿ ತಿಂಗಳು

ಹುದ್ದೆಗಳ ಸಂಪೂರ್ಣ ವಿವರ ಈ ಕೆಳಗೆ ನೀಡಲಾಗಿದೆ;
ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು-256 ಹುದ್ದೆಗಳು
ಸಹಾಯಕ ತೋಟಗಾರಿಕೆ ನಿರ್ದೇಶಕರು-475 ಹುದ್ದೆಗಳು
ಸಹಾಯಕ ತೋಟಗಾರಿಕೆ ಅಧಿಕಾರಿ-1136 ಹುದ್ದೆಗಳು
ತೋಟಗಾರಿಕೆ ಸಹಾಯಕ -926 ಹುದ್ದೆಗಳು
ಪ್ರಥಮ ದರ್ಜೆ ಸಹಾಯಕರು-311 ಹುದ್ದೆಗಳು
ಸ್ಟೆನೋಗ್ರಾಫರ್-11 ಹುದ್ದೆಗಳು
ಎರಡನೇ ದರ್ಜೆ ಸಹಾಯಕರು (SDA)-271 ಹುದ್ದೆಗಳು
ಡೇಟಾ ಎಂಟ್ರಿ ಸಹಾಯಕ -58 ಹುದ್ದೆಗಳು
ವಾಹನ ಚಾಲಕರು-87 ಹುದ್ದೆಗಳು
ಲ್ಯಾಬ್ ಸಹಾಯಕ-13 ಹುದ್ದೆಗಳು
ಜೇನುಸಾಕಣೆ ಸಹಾಯಕರು-20 ಹುದ್ದೆಗಳು
ಪ್ಯೂನ್-98 ಹುದ್ದೆಗಳು
ತೋಟಗಾರ-1774 ಹುದ್ದೆಗಳು
ಕಾವಲುಗಾರ-29 ಹುದ್ದೆಗಳು

ವಿದ್ಯಾರ್ಹತೆ:
* ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು,ಸಹಾಯಕ ತೋಟಗಾರಿಕೆ ನಿರ್ದೇಶಕರು – ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು B.Sc , ಸ್ನಾತಕೋತ್ತರ ಪದವಿ ಪಡೆದಿರಬೇಕು.
* ಸಹಾಯಕ ತೋಟಗಾರಿಕೆ ಅಧಿಕಾರಿ ಹುದ್ದೆಗೆ ಬಿ.ಎಸ್ಸಿ ಪಾಸಾಗಿರಬೇಕು.
* ತೋಟಗಾರಿಕೆ ಸಹಾಯಕ, ಪ್ರಥಮ ದರ್ಜೆ ಸಹಾಯಕರು- ಈ ಹುದ್ದೆಗೆ ಅರ್ಜಿ ಸಲ್ಲಿಸುವವರು ಪದವಿ ತೇರ್ಗಡೆ ಹೊಂದಿರಬೇಕು.
* ಸ್ಟೆನೋಗ್ರಾಫರ್ ಹುದ್ದೆಗೆ ಅರ್ಜಿ ಸಲ್ಲಿಸಲು ಆಸಕ್ತರಿರುವವರು ಪಿಯುಸಿ ಪಾಸಾಗಿರಬೇಕು.
* ಎರಡನೇ ದರ್ಜೆ ಸಹಾಯಕರು (SDA) ಹುದ್ದೆಗೆ ಅರ್ಜಿ ಸಲ್ಲಿಸಲು ಆಸಕ್ತರಿರುವವರು ಎಸ್ ಎಸ್ ಎಲ್ ಸಿ, ಪಿಯುಸಿ ಪಾಸಾಗಿರಬೇಕು.
* ಡೇಟಾ ಎಂಟ್ರಿ ಸಹಾಯಕ ಹುದ್ದೆಗೆ ಪಿಯುಸಿ, ಡಿಪ್ಲೊಮಾ ಮಾಡಿರಬೇಕು.
* ವಾಹನ ಚಾಲಕ ಹುದ್ದೆಗೆ 10 ನೇ ತರಗತಿ ಪಾಸಾದವರು ಅಪ್ಲೈ ಮಾಡಬಹುದು.
* ಲ್ಯಾಬ್ ಸಹಾಯಕ ಹುದ್ದೆಗೆ ಪಿಯುಸಿ, ಡಿಪ್ಲೊಮಾ ಪಾಸಾಗಿರಬೇಕು.
* ಜೇನುಸಾಕಣೆ ಸಹಾಯಕರು- ಎಸ್.ಎಸ್.ಎಲ್.ಸಿ ಪಾಸಾದವರು ಅರ್ಜಿ ಸಲ್ಲಿಸಲು ಅವಕಾಶವಿದೆ.
ಪ್ಯೂನ್, ತೋಟಗಾರ, ಕಾವಲುಗಾರ ಈ ಹುದ್ದೆಗಳಿಗೆ ಎಸ್‌ಎಸ್‌ಎಲ್‌ಸಿ ಪಾಸಾದವರು ಅರ್ಜಿ ಸಲ್ಲಿಸಬಹುದು.

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: ಶೀಘ್ರದಲ್ಲೇ ನವೀಕರಿಸಲಾಗುತ್ತಿದೆ
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಆದಷ್ಟು ಬೇಗ

ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

KSHD Recruitment 2023

ಇದನ್ನೂ ಓದಿ: ರಾಜ್ಯಾದ್ಯಂತ ನಾಳೆ ನಾರಿಯರಿಗೆ ಉಚಿತ ಬಸ್‌ : ಈ ಜಿಲ್ಲೆಗಳಲ್ಲಿ ಸೂಕ್ತ ಬಸ್​​ ವ್ಯವಸ್ಥೆ ಇಲ್ವೇ ಇಲ್ಲ..!?

Leave A Reply

Your email address will not be published.