RBI instruction to Banks: ಗ್ರಾಹಕರ ಆಸ್ತಿ ದಾಖಲೆ ಕಳೆದು ಹೋದರೆ ಬ್ಯಾಂಕ್’ಗಳೇ ನೇರ ಹೊಣೆ !
RBI instruction to Banks: ಗ್ರಾಹಕರು ಸಾಲ ಪಡೆಯಲು ಬ್ಯಾಂಕ್’ಗೆ ನೀಡುವ ಆಸ್ತಿಯ ದಾಖಲೆಗಳನ್ನು ಹಣಕಾಸು ಸಂಸ್ಥೆ ಕಳೆದುಕೊಂಡು ಬಿಟ್ಟರೆ ಅಥವಾ ಕಳೆದು ಹೋದರೆ ಅದರ ಹೊಣೆ ಆ ಸಂಸ್ಥೆಯೇ ಹೊರಬೇಕು ಎಂದು ಆರ್’ಬಿಐ ಹೇಳಿದೆ (RBI instruction to Banks).
ಗ್ರಾಹಕರ ಆಸ್ತಿ ದಾಖಲೆ ಕಳೆದು ಹೋದರೆ ಬ್ಯಾಂಕ್’ಗಳೇ ಹೊಣೆ ಹೊರಬೇಕು ಜೊತೆಗೆ ಗ್ರಾಹಕರಿಗೆ ಸರಿಯಾದ ನಗದು ಪರಿಹಾರವನ್ನೂ ನೀಡಬೇಕು ಎಂದು ಆರ್‌ಬಿಐ (RBI) ರಚನೆಯ ಆರು ಸದಸ್ಯರ ಸಮಿತಿ ಶಿಫಾರಾಸು ಮಾಡಿದೆ.
ಬ್ಯಾಂಕ್‌ಗಳು, ಗೃಹ ಸಾಲ (home loan) ನೀಡುವ ಸಂಸ್ಥೆಗಳು ಗ್ರಾಹಕರ ದಾಖಲೆಗಳನ್ನು ಸಾಲದ ಅವಧಿಯ ಅಂತ್ಯದವರೆಗೆ ಇರಿಸಿಕೊಂಡಿರುತ್ತವೆ. ಈ ವೇಳೆ ಗ್ರಾಹಕರ ದಾಖಲೆಗಳನ್ನು ಕಳೆದುಹಾಕದೆ, ಸುರಕ್ಷಿತವಾಗಿರಿಸಬೇಕು. ಹಾಗೇ ಸಾಲದ ಅವಧಿ ಅಂತ್ಯವಾದ ನಂತರ ನಿಗದಿತ ಕಾಲಮಿತಿಯಲ್ಲಿ ಗ್ರಾಹಕರಿಗೆ ಅವರ ದಾಖಲೆಯನ್ನು ಹಿಂತಿರುಗಿಸುವುದು ಆರ್‌ಬಿಐ ಹೊಣೆ ಎಂದು ಸಮಿತಿ ಹೇಳಿದೆ.
ಗ್ರಾಹಕರ ಆಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ಡಿಜಿಲಾಕರ್‌ಗಳಲ್ಲಿ ಇಡುವುದು ಉತ್ತಮ. ಡಿಜಿಲಾಕರ್‌ಗಳಲ್ಲಿ ಆಸ್ತಿ ದಾಖಲೆ ಇಟ್ಟರೆ, ಒಂದು ವೇಳೆ ದಾಖಲೆಗಳು ಕಳೆದು ಹೋದರೂ ಅದನ್ನು ಸುರಕ್ಷಿತವಾಗಿ ಮತ್ತೊಮ್ಮೆ ಪಡೆದುಕೊಳ್ಳಲು ಆಗುತ್ತದೆ ಎಂದು ಸಮಿತಿ ಹೇಳಿದೆ.