Mother Makeover Video: ಅಮ್ಮನ ಓವರ್ ಮೇಕಪ್ ಸೃಷ್ಟಿಸಿದ ಆವಾಂತರ: ತಾಯಿಯನ್ನೇ ಗುರುತಿಸದೆ ಬಿಕ್ಕಿ ಬಿಕ್ಕಿಅತ್ತು ಬಿಟ್ಟ ಮಗು!

Share the Article

Mother Makeover Video: ಇಂದಿನ ದಿನದಲ್ಲಿ ಮೇಕಪ್ ಇಲ್ಲದೆ ಮಹಿಳೆಯರು ಹೊರಗೆ ಕಾಲಿಡಲ್ಲ. ಕೊಂಚ ಮೇಕಪ್ ಆದರೂ ಮುಖದಲ್ಲಿ ಇದ್ದೇ ಇರುತ್ತದೆ. ಕೆಲವೊಮ್ಮೆ ಓವರ್ ಮೇಕಪ್ ನಿಂದ ಮುಖದ ಛಾಯೆಯೇ ಬದಲಾಗುತ್ತದೆ. ಅದರಂತೆಯೇ ಮಹಿಳೆಯೊರ್ವಳ ಓವರ್ ಮೇಕಪ್ ನಿಂದಾಗಿ ಆಕೆಯ ಮಗುವೇ ಗುರುತು ಹಿಡಿಯಲಿಲ್ಲ. ಬದಲಾಗಿ ಬಿಕ್ಕಿ ಬಿಕ್ಕಿ ಅತ್ತು ಬಿಟ್ಟಿತು. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Mother Makeover Video) ಆಗಿದೆ.

ಸೋಷಿಯಲ್ ಮೀಡಿಯಾದಲ್ಲಿ ಪ್ರತಿನಿತ್ಯ ಒಂದಲ್ಲ ಒಂದು ವಿಚಿತ್ರಗಳು ವೈರಲ್ ಆಗುತ್ತಲೇ ಇರುತ್ತದೆ. ಅಂತೆಯೇ ಇದೀಗ ತಾಯಿಯ ಮೇಕಪ್ ನಿಂದಾಗಿ ಮಗು ಆಕೆಯನ್ನು ಗುರುತಿಸದೇ ಬಿಕ್ಕಿ ಬಿಕ್ಕಿ ಅಳುವ ವಿಡಿಯೋ ವೈರಲ್ ಆಗುತ್ತಿದೆ. ತಾಯಿಗೂ ಮಗುವಿಗೂ ವಿಭಿನ್ನ ನಂಟು ಇರುತ್ತದೆ. ಮುಗವಿನ ಮೊದಲು ನುಡಿಯೇ ಅಮ್ಮ. ಹಾಗಿದ್ದಾಗ ಅಮ್ಮನನ್ನು ಗುರುತಿಸದಿರಲು ಹೇಗೆ ಸಾಧ್ಯ? ಆದರೂ ಮೇಕಪ್ ಮನುಷ್ಯನ ಮುಖವನ್ನೇ ಬದಲಿಸುವುದು ಸುಳ್ಳಲ್ಲ. ಅದೆಷ್ಟೋ ಪುರುಷರು ಮೇಕಪ್ ನಿಂದ ಮಹಿಳೆಯ ಮುಖ ಪಡೆಯುತ್ತಾರೆ. ಎಷ್ಟೇಂದರೆ ಆತ ಪುರುಷ ಎಂದು ಗುರುತು ಸಿಗದಷ್ಟು. ಹಾಗೇ ಇಲ್ಲೂ ಮೇಕಪ್ ಅವಾಂತರದಿಂದ ಮಗು ಕಂಗಾಲಾಗಿದೆ.

ತಾಯಿ ಬ್ಯೂಟಿ ಪಾರ್ಲರ್ ನಲ್ಲಿ ಮೇಕಪ್ ಹಾಕಿಕೊಂಡು ರೆಡಿಯಾಗುತ್ತಿದ್ದರೆ ಇತ್ತ ಆಕೆಯ ಮಗು ತಾಯಿಯನ್ನು ಹುಡುಕುತ್ತಿದೆ.
ಮೇಕಪ್ ಹಚ್ಚಿಕೊಂಡು ಮಗುವಿನ ಮುಂದೆ ಆಕೆ ನಿಂತರೂ ಮಗು ಗುರುತು ಹಿಡಿಯುವುದೇ ಇಲ್ಲ. ನಾನೇ ನಿನ್ನ ತಾಯಿ ಎಂದು ಎಷ್ಟೇ ಹೇಳಿದರೂ ಮಗು ತಾಯಿಯ ಮಾತಿಗೆ ಒಪ್ಪದೆ ಒಂದೇ ಸಮ ಬಿಕ್ಕಿ ಬಿಕ್ಕಿ ಅಳಲಾಂರಬಿಸುತ್ತಿದೆ. ಈ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿದೆ.

ಈ ವಿಡಿಯೋವನ್ನು @HasnaZarooriHai ಅವರ ಟ್ವಿಟರ್‌ನಲ್ಲಿ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವಿಡಿಯೋ ನೋಡಿದ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಕೆಲವರು ಈಕೆ ಮಗುವಿನ ತಾಯಿ ಆಗಿರಲಿಕ್ಕಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಹಲವರು ಹಲವು ರೀತಿಯಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

https://twitter.com/HasnaZarooriHai/status/1666029260362874881?s=20

Leave A Reply