Social welfare department: ಸಮಾಜ ಕಲ್ಯಾಣ ಇಲಾಖೆಯಿಂದ ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ! ವಿದ್ಯಾರ್ಥಿಗಳಿಗೆ ಸಿಗಲಿದೆ 20ರಿಂದ 35ಸಾವಿರ ಹಣ!

Latest education news board exams news sw.kar.nic.in Social welfare department application invited for prize money 2023

Social welfare department: ಪ್ರಥಮ ದರ್ಜೆಯಲ್ಲಿ ಪಾಸ್‌ ಆದ 2023ನೇ ಸಾಲಿನಲ್ಲಿ ಪಾಸ್‌ ಆದ ವಿದ್ಯಾರ್ಥಿಗಳಿಗೆ ಕರ್ನಾಟಕ ಸರಕಾರ ಸಮಾಜ ಕಲ್ಯಾಣ ಇಲಾಖೆಯು(Social welfare department) ಪ್ರೋತ್ಸಾಹ ಧನ ನೀಡಲು ವಿವಿಧ ಕೋರ್ಸ್‌ಗಳ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಮುಖ್ಯವಾದ ಮಾಹಿತಿ ಏನೆಂದರೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ವಿಸ್ತರಣೆ ಮಾಡಲಾಗುವುದಿಲ್ಲ. ಹಾಗೆನೇ ಆನ್‌ಲೈನ್‌ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳಿಗೆ ಆಗಸ್ಟ್‌ 31,2023 ಕೊನೆಯ ದಿನಾಂಕವಾಗಿದೆ. ವಿವಿಧ ಕೋರ್ಸ್‌ಗಳಲ್ಲಿ ಅಧ್ಯಯನ ಮಾಡುವ ಪರಿಶಿಷ್ಟ ಜಾತಿ, ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಈ ಪ್ರೋತ್ಸಾಹ ಧನಕ್ಕಾಗಿ ಅರ್ಜಿ ಸಲ್ಲಿಸಬಹುದು. ಕರ್ನಾಟಕ ಸರಕಾರದ ಅಧಿಕೃತ ವೆಬ್‌ಸೈಟ್‌ sw.kar.nic.in ಗೆ ಭೇಟಿ ಅರ್ಹ ಅಭ್ಯರ್ಥಿಗಳು ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದಾಗಿದೆ. ಕಾಲೇಜಿನ ಹೆಸರು ಇಲ್ಲದೆ ಹೋದಲ್ಲಿ, ಒಂದು ವೇಳೆ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ, ಆ ಕಾಲೇಜಿನ ಹೆಸರನ್ನು ಸೇರಿಸಲು ಸಂಬಂಧಪಟ್ಟ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳ ಕಚೇರಿ ಅಥವಾ ಜಿಲ್ಲಾ ಪರಿಶಿಷ್ಟ ವರ್ಗದ ಕಲ್ಯಾಣಾಧಿಕಾರಿಗಳ ಕಚೇರಿಗೆ ಭೇಟಿ ನೀಡಲು ಸೂಚಿಸಲಾಗಿದೆ.

ವಿದ್ಯಾರ್ಥಿಗಳಿಗೆ ಕೋರ್ಸ್‌ ಅನುಸಾರ ಸಿಗುವ ಪ್ರೋತ್ಸಾಹ ಧನ;
ದ್ವಿತೀಯ ಪಿಯುಸಿ ಮತ್ತು ಮೂರು ವರ್ಷದ ಪಾಲಿಟೆಕ್ನಿಕ್‌ ಡಿಪ್ಲೊಮ ವಿದ್ಯಾರ್ಥಿಗಳಿಗೆ – ರೂ. 20,000/-.
ಪದವಿ ವಿದ್ಯಾರ್ಥಿಗಳಿಗೆ – ರೂ. 25,000 /-.
ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ – ರೂ. 30,000/-.
ಅಗ್ರಿಕಲ್ಚರ್‌, ಇಂಜಿನಿಯರ್, ವೆಟರನರಿ, ಮೆಡಿಷನ್ ವಿದ್ಯಾರ್ಥಿಗಳಿಗೆ – ರೂ.35,000/-.

ಅರ್ಜಿ ಸಲ್ಲಿಸುವ ವಿಧಾನ ಈ ರೀತಿ ಇದೆ;
ಮೊದಲಿಗೆ ಆನ್‌ಲೈನ್‌ನಲ್ಲಿ ಅಧಿಕೃತ ವೆಬ್‌ಸೈಟ್‌ sw.kar.nic.in ಗೆ ಭೇಟಿ ನೀಡಿದಾಗ, ಮುಖಪುಟದಲ್ಲಿ ಮೆಟ್ರಿಕ್‌ ನಂತರದ ಪ್ರೋತ್ಸಾಹಧನ ಎಂಬ ಲಿಂಕ್‌ ಕಾಣುತ್ತದೆ. ಅದಕ್ಕೆ ಕ್ಲಿಕ್‌ ಮಾಡಿ
ನಂತರ ಇನ್ನೊಂದು ಪುಟ ಓಪನ್‌ ಆಗುತ್ತದೆ. ಅರ್ಜಿ ಲಿಂಕ್‌ ಕ್ಲಿಕ್‌ ಮಾಡಿ, ನಂತರ ಅಲ್ಲಿ ಕೇಳಿರುವ ಅಗತ್ಯ ದಾಖಲೆ ಅಪ್‌ಲೋಡ್‌ ಮಾಡಿ
ಅರ್ಜಿ ಸಲ್ಲಿಸದ ಮೇಲೆ ಡೌನ್‌ಲೋಡ್‌ ಮಾಡಿಕೊಂಡು ಪ್ರಿಂಟ್‌ ತೆಗೆದಿಟ್ಟುಕೊಳ್ಳಿ.

ಇದನ್ನೂ ಓದಿ: Wrestlers withdraw protest: ಜೂನ್ 15 ರವರೆಗೂ ಧರಣಿ ಸ್ಥಗಿತಗೊಳಿಸಿದ ಕುಸ್ತಿ ಪಟುಗಳು, ಕ್ರೀಡಾ ಸಚಿವ ಅನುರಾಗ್ ಠಾಕೂರ್ ಸಂಧಾನ ಸಫಲ

Leave A Reply

Your email address will not be published.