Actor Naseeruddin Shah: ನನಗೆ ಸಿಕ್ಕಿದ ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಫಾರ್ಮ್​ಹೌಸ್​ನಲ್ಲಿರುವ ವಾಶ್‌ರೂಮ್‌ ಬಾಗಿಲುಗಳಾಗಿ ಬಳಸುತ್ತಿದ್ದೇನೆ : ಖ್ಯಾತ ನಟನ ಸ್ಪೋಟಕ ಹೇಳಿಕೆ

Actor Naseeruddin Shah Says I'm Using Filmfare Awards As Washroom Doors

Actor Naseeruddin Shah: ನಟ ನಾಸಿರುದ್ದೀನ್ ಶಾ(Actor Naseeruddin Shah) ತಮ್ಮ ವಿಭಿನ್ನ ಹೇಳಿಕೆಗಳ ಮೂಲಕ ಸಾಮಾಜಿಕ ಜಾಲತಾಣದಲ್ಲಿ(Social Media) ಈಗಾಗಲೇ ಹಲವಾರು ಬಾರಿ ವಿವಾದಕ್ಕೆ ಸಿಲುಕಿದ್ದು ಇದೀಗ, ಮತ್ತೊಮ್ಮೆ ತಮ್ಮ ಹೇಳಿಕೆಯಿಂದ ತೀವ್ರ ಟೀಕೆಗೆ ಗುರಿಯಾಗಿದ್ದಾರೆ.

ನಾಸಿರುದ್ದೀನ್ ಶಾ ಅವರು ಪಾರ್ ಈಗಾಗಲೇ , ಸ್ಪರ್ಶ್ ಮತ್ತು ಇಕ್ಬಾಲ್ ಚಿತ್ರದ ನಟನೆಗಾಗಿ ಮೂರು ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಆಕ್ರೋಶ್, ಚಕ್ರ ಮತ್ತು ಮಾಸೂಮ್ ಚಿತ್ರಗಳಲ್ಲಿನ ಅಭಿನಯಕ್ಕಾಗಿ ಮೂರು ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ

ಇತ್ತೀಚೆಗಷ್ಟೇ ನಡೆದ ಸಂದರ್ಶನವೊಂದರಲ್ಲಿ(Interview) ಮಾತನಾಡಿದ ನಾಸುರುದ್ದೀನ್ ಶಾ, “ನನಗೆ ಲಭಿಸಿದ ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು(Filmfare Awards) ನನ್ನ ಫಾರ್ಮ್​ಹೌಸ್​ನಲ್ಲಿರುವ ವಾಶ್‌ರೂಮ್‌ ಬಾಗಿಲ ಹ್ಯಾಂಡಲ್​ಗಳಾಗಿ ಬಳಸುತ್ತಿದ್ದೇನೆ. ಈ ಟ್ರೋಫಿಗಳಲ್ಲಿ ನನಗೆ ಯಾವುದೇ ಮೌಲ್ಯವಿಲ್ಲ” ಎಂದು ಹೇಳಿದ್ದಾರೆ.

ಅದಲ್ಲದೆ “ಯಾವುದೇ ನಟ ಚಿತ್ರಿಸಲು ತಮ್ಮ ಜೀವನ ಮತ್ತು ಶ್ರಮವನ್ನು ಹಾಕಿದರೆ ಅವರು ಉತ್ತಮ ನಟರಾಗುತ್ತಾರೆ. ನೀವು ಕೇವಲ ಒಬ್ಬ ವ್ಯಕ್ತಿಯನ್ನು ಆಯ್ಕೆ ಮಾಡಿ ವರ್ಷದ ಅತ್ಯುತ್ತಮ ನಟ ಎಂದು ಹೇಳಿದರೆ, ಅದು ಹೇಗೆ? ನ್ಯಾಯವೇ? ಆ ಪ್ರಶಸ್ತಿಗಳ ಬಗ್ಗೆ ನನಗೆ ಹೆಮ್ಮೆ ಇಲ್ಲ! ನಾನು ಪಡೆದ ಕೊನೆಯ ಎರಡು ಪ್ರಶಸ್ತಿಗಳನ್ನು ಸಂಗ್ರಹಿಸಲು ಕೂಡ ಹೋಗಲಿಲ್ಲ. ನಮ್ಮ ಫಾರ್ಮ್​ಹೌಸ್​ನ​ ವಾಶ್‌ರೂಮ್‌ಗೆ ಹೋದವರಿಗೆ ತಲಾ ಎರಡು ಪ್ರಶಸ್ತಿಗಳು ಸಿಗುತ್ತವೆ. ಯಾಕಂದರೆ ಬಾಗಿಲ ಹ್ಯಾಂಡಲ್​ಗಳು ಫಿಲ್ಮ್‌ಫೇರ್ ಪ್ರಶಸ್ತಿಗಳಿಂದ ಮಾಡಲ್ಪಟ್ಟಿದೆ” ಎಂದು ಹೇಳಿದರು.

ಇದೀಗ ಅವರ ಸಾಧನೆಗೆ ನೀಡಿದ ಗೌರವವನ್ನು ಸ್ವೀಕರಿಸದೇ ಗೌರವ ನೀಡದೆ ಇರುವುದು ಬಹಳ ವಿಷಾದನೀಯವಾಗಿದ್ದು, ಸದ್ಯ ಅವರು ನೀಡಿದ ಈ ಹೇಳಿಕೆ ಹಲವರ ಆಕ್ರೋಶಕ್ಕೆ ಕಾರಣವಾಗುತ್ತಿದೆ.

 

ಇದನ್ನು ಓದಿ: Teachers Transfer: ರಾಜ್ಯದ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ನಾಳೆಯಿಂದ, ವೇಳಾಪಟ್ಟಿಯಲ್ಲಿರುವ ಪ್ರಮುಖ 10 ಅಂಶಗಳ ಪಟ್ಟಿ ಇಲ್ಲಿದೆ 

Leave A Reply

Your email address will not be published.