Mangalore: ಮೆಹಂದಿ ಶಾಸ್ತ್ರದಂದು ನಾಪತ್ತೆಯಾದ ವರ ಪತ್ತೆ! ತಂಗಿ ಮೊಬೈಲ್ ಗೆ ಬಂತು ಸಂದೇಶ! ಏನಿತ್ತು ಅದರಲ್ಲಿ?

Mangalore Missing groom found on Mehndi Shastra

Mangalore: ಮದುರಂಗಿ ದಿನ ಕಾಣೆಯಾದ ವರ ಮೆಸೇಜ್ ಒಂದನ್ನು ಕಳಿಸುವ ಮೂಲಕ ಕೆಲವು ದಿನಗಳ ಬಳಿಕ ತನ್ನ ಇರುವಿಕೆಯನ್ನು ತಿಳಿಸಿದ್ದಾನೆ. ಹೌದು, ಮಂಗಳೂರಿನ (Mangalore) ವರ್ಕಾಡಿ ಗ್ರಾಮದ  ದೇವಂದಪಡುವಿನ ಉದ್ಯಮಿ ಐತಪ್ಪ ಶೆಟ್ಟಿ ಅವರ ಮಗ ಕಿಶನ್ ಶೆಟ್ಟಿ ಮೇ 31ರಂದು ತನ್ನ ಮೆಹಂದಿ ಶಾಸ್ತ್ರಕ್ಕೆ ಹಣ್ಣು ತರಲು ತೆರಳಿದ್ದವ ನಾಪತ್ತೆಯಾಗಿದ್ದು, ಇದೀಗ ಆತನಿಂದ ಕುತೂಹಲ ಸಂದೇಶ ಒಂದು ಬಂದಿರುತ್ತದೆ.

ಹೌದು, “ನಾನು ಬಳ್ಳಾರಿಯಲ್ಲಿದ್ದೇನೆ, ಇನ್ನು ಮುಂದೆ ಎಂದಿಗೂ ಮನೆಗೆ ಬರುವುದಿಲ್ಲ” ಎಂದು ತಂಗಿಗೆ ಸಂದೇಶ ಕಳಿಸಿ ತಕ್ಷಣ ಮೊಬೈಲ್ ಸ್ವಿಚ್ ಆಫ್ ಮಾಡಿದ್ದಾನೆ. ಇತ್ತ ಮಗನ ಜೀವಕ್ಕೆ ಅಪಾಯ ಆಗಿಲ್ಲವೆಂದು ಪೋಷಕರು ನಿಟ್ಟುಸಿರು ಬಿಟ್ಟಿದ್ದಾರೆ.

ಕಿಶನ್ ನಾಪತ್ತೆಯಾಗಿದ್ದು ಇಡೀ ಊರಿಗೆ ಊರೇ ಮೌನವಾಗಿತ್ತು, ಆತನ ಪತ್ತೆಗಾಗಿ ಹುಡುಕಾಟ ನಡೆಸಿ ಹೆತ್ತವರು ಮಗ ಜೀವಂತ ಇದ್ದಾನೆ ಎಂಬ ನಂಬಿಕೆ ಕೂಡ ಕಳೆದುಕೊಡಿದ್ದರು.

ಆದರೆ ಕಿಶನ್ ಶೆಟ್ಟಿ ಕುಂಜತ್ತೂರು ಬಳಿಯ ಅನ್ಯ ಜಾತಿಯ ಯುವತಿಯನ್ನು ಕಾಲೇಜು ಸಹಪಾಠಿಯಾಗಿದ್ದಾಗಲೇ ಪ್ರೀತಿಸಲಾರಂಭಿಸಿದ್ದುದಾಗಿ, ಇತ್ತೀಚೆಗಷ್ಟೇ ಬೇರೊಂದು ಯುವತಿಯ ಜತೆಗೆ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದ ಎಂಬ ಮಾಹಿತಿ ದೊರೆತಿದೆ.

ಇನ್ನು ಕಿಶನ್ ನಿಶ್ಚಿತಾರ್ಥ ಬಳಿಕ ಪ್ರೀತಿಸಿದ ಯುವತಿಯನ್ನು ತಿರಸ್ಕರಿಸುತ್ತಾ ಬಂದಿದ್ದ ಎನ್ನಲಾಗಿದ್ದು,  ಅದರಿಂದ ಕೆರಳಿದ ಯುವತಿ ತನ್ನನು ಬಿಟ್ಟು ಬೇರೆ ಯಾರನ್ನೇ ಮದುವೆಯಾದರೂ ತಾನು ಆತ್ಮಹತ್ಯೆ ಮಾಡಿಕೊಳ್ಳಲು ಹಿಂಜರಿಯಲಾರೆ  ಎಂದು ಬೆದರಿಕೆ ಒಡ್ಡಿದ್ದಳು ಎನ್ನಲಾಗಿದ್ದು ಈ ಹಿನ್ನೆಲೆ ಮೆಹಂದಿ ಶಾಸ್ತ್ರದಂದೇ ಕಿಶನ್ ನಾಪತ್ತೆಯಾಗಿದ್ದ ಎನ್ನಲಾಗಿದೆ.

ನಾಪತ್ತೆ ಬಳಿಕ ಯುವತಿ ಕಮೀಷನರ್ ಕಚೇರಿಯಲ್ಲೂ ಅದೇ ಮಾತನ್ನು ಉಲ್ಲೇಖಿಸಿದ್ದು ಮೂರು ಪುಟದಲ್ಲಿ ಕಿಶನ್ ಪ್ರೀತಿಗೆ ವಂಚನೆ ಮಾಡಿದ್ದಾನೆ ಎಂಬುದಾಗಿ ದೂರು ನೀಡಿದ್ದಾಳೆ ಎನ್ನಲಾಗಿದೆ.

ಈ ಬಗ್ಗೆ ಕೊಣಾಜೆ ಪೊಲೀಸರು  ಬಳ್ಳಾರಿಯ ಲೊಕೇಶನ್ ಸರ್ಚ್ ಮಾಡಿದಾಗ ಗ್ರಾಮಾಂತರ ಭಾಗವೊಂದರ ಟವರ್ ಲೊಕೇಶನ್ ತೋರಿಸಿದೆ. ಇದೀಗ ಶೀಘ್ರದಲ್ಲಿ ಕಿಶನ್ ನನ್ನು ಕರೆ ತರಲು ಪೊಲೀಸರು ಸಜ್ಜಾಗಿದ್ದಾರೆ.

ಒಟ್ಟಿನಲ್ಲಿ ಕಿಶನ್ ನಾಪತ್ತೆ ಪ್ರಕರಣ ಬೇರೆ ಬೇರೆ ದಿಕ್ಕನ್ನು ಪಡೆದುಕೊಂಡಿದ್ದು ಆತ ಪತ್ತೆಯಾದ ಬಳಿಕ ನಿಜವಾದ ಘಟನೆ ಏನು ಎಂಬುದು ತಿಳಿದು ಬರಬೇಕಿದೆ.

Sanjay Raut: ಸಂದರ್ಶನದ ವೇಳೆ ಮೈಕ್ ಮೇಲೆ ಗಂಟಲಾಳದಿಂದ ಕ್ಯಾಕರಿಸಿ ಉಗಿದ ಸಂಜಯ್ ರಾವತ್: ಏನಿದು ಎಂಜಲು – ಉಚ್ಚೆ ವಿವಾದ ?

Leave A Reply

Your email address will not be published.