Hassan Crime: ಪಾರ್ಟಿ ಮಾಡಿ ಕಾರಿನ ಡೋರ್ ಮುಚ್ಚಿ ಮಲಗಿದ ಯುವಕ ರಕ್ತ ವಾಂತಿ ಮಾಡಿಕೊಂಡು ಸಾವು! ಆಗಿದ್ದೇನು ?

Hassan young man slept in car after party dead

Share the Article

Hassan Crime: ರಾತ್ರಿ ಗೆಳೆಯರೊಂದಿಗೆ ಪಾರ್ಟಿ ಮಾಡಿ ನಂತರ ತನ್ನ ಕಾರಿನಲ್ಲಿ ಬಂದು ಮಲಗಿದ್ದ ಯುವಕ ಬೆಳಗಾಗುವಷ್ಟರಲ್ಲಿ ರಕ್ತ ವಾಂತಿ ಮಾಡಿಕೊಂಡು ಸಾವನ್ನಪ್ಪಿರುವ (death) ಘಟನೆ ಹಾಸನ
(Hassan Crime) ಜಿಲ್ಲೆಯ ಬೇಲೂರಿನ ಕುವೆಂಪು ನಗರದಲ್ಲಿ ನಡೆದಿದೆ. ಮೃತ ಯುವಕನನ್ನು ಚೇತನ್ (24) ಎಂದು ಗುರುತಿಸಲಾಗಿದೆ.

ಚೇತನ್ ಬೇಲೂರು ಪಟ್ಟಣದ ಮೊಬೈಲ್ ಅಂಗಡಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದಾನೆ. ಈತ ರಾತ್ರಿ ಗೆಳೆಯರಾದ ದರ್ಶನ್, ಮಿಥುನ್ ಜೊತೆಗೆ ಗೌತಮ್ ರೂಮ್ ಗೆ ಪಾರ್ಟಿಗೆ ತೆರಳಿದ್ದು, ಹೆಚ್ಚು ಕುಡಿದಿದ್ದ ಕಾರಣ ಚೇತನ್’ಗೆ ಮನೆಗೆ ಹೋಗಲು ಸಾಧ್ಯವಾಗದೆ ಶಾಪ್​ ಎದುರು ಕಾರು ನಿಲ್ಲಿಸಿ ಕಾರಿನಲ್ಲೇ ಮಲಗಿದ್ದಾನೆ.

ಮರುದಿನ ಬೆಳಗ್ಗೆ ಗೆಳೆಯ ಗೌತಮ್ ಶಾಪ್’ಗೆ ಹೋಗಿ ಚೇತನ್ ಮಲಗಿದ್ದ ಕಾರು ಡೋರ್ ತೆಗೆದು ನೋಡಿದರೆ ಆತನಿಗೆ ಆಶ್ಚರ್ಯ ಕಾದಿತ್ತು. ಕಾರಿನ ಹಿಂಬದಿಯ ಸೀಟ್‌ನಲ್ಲಿ ಚೇತನ್ ರಕ್ತ ವಾಂತಿ ಮಾಡಿಕೊಂಡು ಮಲಗಿದ್ದ. ಕೂಡಲೇ ದರ್ಶನ್, ಮಿಥುನ್‌ಗೆ ಫೋನ್ ಮಾಡಿ ತಿಳಿಸಿ ಸಹಾಯಕ್ಕೆ ಕರೆದಿದ್ದಾನೆ.

ಆದರೆ ಚೇತನ್ ಸಾವಿನ ಸುದ್ದಿ ಕೇಳುತ್ತಿದ್ದಂತೆ ಸಹಾಯಕ್ಕೆ ಬಾರದೆ
ದರ್ಶನ್, ಮಿಥುನ್ ಇಬ್ಬರು ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಎಷ್ಟೇ ಹೊತ್ತು ಕಾದರೂ ಗೆಳೆಯರು ಬಾರದೇ ಇದ್ದಾಗ, ಫೋನ್ ಮಾಡಿದಾಗ ರಿಸೀವ್ ಮಾಡದೇ ಇದ್ದಾಗ ಗೌತಮ್
ಪೊಲೀಸರಿಗೆ ಗೆಳೆಯನ ಸಾವಿನ ಬಗ್ಗೆ ಮಾಹಿತಿ ನೀಡಿದ್ದಾನೆ. ಮಾಹಿತಿ ಮೇರೆಗೆ ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ, ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿದ್ದಾರೆ.

ಇನ್ನು ಮಗನ ಸಾವಿನ ಸುದ್ಧಿ ತಿಳಿದ ಕುಟುಂಬಸ್ಥರು ಕಂಬನಿ ಮಿಡಿದಿದ್ದಾರೆ. ಅಲ್ಲದೆ, ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಮೃತ ಚೇತನ್ ಪೋಷಕರು ತಮ್ಮ ಮಗನನ್ನು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಸದ್ಯ ಆಮ್ಲಜನಕದ ಕೊರತೆನಾ? ಕೊಲೆಯಾ? ಅಥವಾ ಜಾಸ್ತಿ ಕುಡಿದ ಪರಿಣಾಮನಾ? ಇವೆಲ್ಲಾ ಆಯಾಮಗಳಲ್ಲಿ ತನಿಖೆ ನಡೆಯಬೇಕಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಇದನ್ನೂ ಓದಿ: Bihar: 2ನೇ ಬಾರಿಗೆ ಕುಸಿದುಬಿತ್ತು ಬಿಹಾರದಲ್ಲಿ ನಿರ್ಮಾಣ ಆಗಾತಿರೋ ಬೃಹತ್ ಸೇತುವೆ! ವೈರಲ್ ಆಯ್ತು ಭಯಾನಕ ವಿಡಿಯೋ!!

Leave A Reply