Smuggled Gold: KGF ಸಿನಿಮಾ ಸೀನ್ ‘ನ್ನೇ ಹೋಲುವ ಘಟನೆ: ಬಾಕ್ಸ್’ಗಟ್ಟಲೆ ಚಿನ್ನ ಸಮುದ್ರಕ್ಕೆ ಎಸೆದ್ರು !

20 crore smuggled gold thrown in see at Rameshwaram

Smuggled Gold: ಭಾರೀ ಮೌಲ್ಯದ ಚಿನ್ನವನ್ನು ಕಳ್ಳಸಾಗಣೆ (Smuggled Gold) ಮಾಡುತ್ತಿದ್ದ ಹಿನ್ನೆಲೆ ಅಧಿಕಾರಿಗಳು ದಾಳಿ ನಡೆಸಿದಾಗ ಕಳ್ಳರು ಸುಮಾರು 20 ಕೋಟಿಗೂ ಅಧಿಕ ಮೌಲ್ಯದ ಚಿನ್ನವನ್ನು ಸಮುದ್ರಕ್ಕೆ ಎಸೆದಿರುವ ಘಟನೆ ರಾಮೇಶ್ವರಂನಲ್ಲಿ ನಡೆದಿದೆ.

ರಾಮೇಶ್ವರಂ ಮಂಟಪ ಪ್ರದೇಶದಿಂದ ಸಮುದ್ರ ಮಾರ್ಗವಾಗಿ ಭಾರೀ ಮೌಲ್ಯದ ಚಿನ್ನವನ್ನು ಕಳ್ಳಸಾಗಣೆ ಮಾಡಲಾಗುತ್ತಿತ್ತು. ಈ ಬಗ್ಗೆ
ಅಧಿಕಾರಿಗಳಿಗೆ ಮಾಹಿತಿ ದೊರೆತಿದ್ದು, ಖಚಿತ ಮಾಹಿತಿ ಮೇರೆಗೆ ಕಳ್ಳಸಾಗಣೆ ಸ್ಥಳಕ್ಕೆ ಭಾರತೀಯ ಕೋಸ್ಟ್ ಗಾರ್ಡ್ ಮತ್ತು ಡೈರೆಕ್ಟರೇಟ್ ಆಫ್ ರೆವೆನ್ಯೂ ಇಂಟೆಲಿಜೆನ್ಸ್ ಜಂಟಿಯಾಗಿ ದಾಳಿ ನಡೆಸಿದೆ.

ಈ ವೇಳೆ ಅಪರಿಚಿತ ದೋಣಿ ಸಮುದ್ರದಲ್ಲಿ ಸಾಗುತ್ತಿರುವ ದೃಶ್ಯ ಅಧಿಕಾರಿಗಳ ಕಣ್ಣಿಗೆ ಬಿದ್ದಿದ್ದು, ತಕ್ಷಣವೇ ಅಧಿಕಾರಿಗಳು ದೋಣಿಯತ್ತ ಧಾವಿಸಿ, ದಾಳಿ ನಡೆಸಿದ್ದಾರೆ. ಇನ್ನೇನು ಸಿಕ್ಕಿಬೀಳಲಿದ್ದ ಕಳ್ಳರು ಅಧಿಕಾರಿಗಳನ್ನು ನೋಡಿ ಚಿನ್ನ ತುಂಬಿದ್ದ ಬಾಕ್ಸ್​ನ್ನು ಸಮುದ್ರಕ್ಕೆ ಎಸೆದಿದ್ದಾರೆ. ಸದ್ಯ ಅಧಿಕಾರಿಗಳು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ಸ್ಕೂಬಾ ಡೈವರ್‌ಗಳ ಹಾಗೂ ಸ್ಥಳೀಯ ಮೀನುಗಾರರ ಸಹಾಯದಿಂದ ಸಮುದ್ರಕ್ಕೆ ಎಸೆದ ಬಾಕ್ಸ್ ಅನ್ನು ಪತ್ತೆ ಹಚ್ಚಲಾಯಿತು. ಸಮುದ್ರದಾಳದಲ್ಲಿ ಸಿಕ್ಕ ಬಾಕ್ಸ್​ ಓಪನ್ ಮಾಡಿದ್ರೆ ಆಶ್ಚರ್ಯವೇ ಕಾದಿತ್ತು. ಹೌದು, ಬಾಕ್ಸ್ ಒಳಗೆ 32.686 ಕೆಜಿ ತೂಕದ ಅಂದಾಜು 20.2 ಕೋಟಿ ಮೌಲ್ಯದ ಚಿನ್ನದ ಗಟ್ಟಿ ಸಿಕ್ಕಿದೆ ಎಂದು ವರದಿಯಾಗಿದೆ. ಈ ಚಿನ್ನವನ್ನು ಶ್ರೀಲಂಕಾದಿಂದ ಭಾರತಕ್ಕೆ ತರಲಾಗುತ್ತಿತ್ತು ಎಂದು ತಿಳಿದು ಬಂದಿದೆ. ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರಿದಿದೆ.

ಇದನ್ನೂ ಓದಿ: Kakinada Accident: ಕಾಕಿನಾಡದಲ್ಲಿ ಭೀಕರ ದುರಂತ ; ಚಾಲಕನ ನಿಯಂತ್ರಣ ತಪ್ಪಿ ದೇವಸ್ಥಾನಕ್ಕೆ ನುಗ್ಗಿದ ಲಾರಿ; ಮೂವರ ದುರ್ಮರಣ!!

Leave A Reply

Your email address will not be published.