Congress Guarantee Declare: ಪಂಚ ಗ್ಯಾರೆಂಟಿಗಳ ಪೈಕಿ ಐದೂ ಗ್ಯಾರಂಟಿಗಳು ತಕ್ಷಣಕ್ಕೆ ಜಾರಿ!

2 Guarantees from Congress Declare immediately

Congress Guarantee Declare: ಇದೀಗ ತಾನೇ ಕರ್ನಾಟಕದ ರಾಜ್ಯದ ಸಚಿವ ಸಂಪುಟ ಸಭೆ ಮುಕ್ತಾಯವಾಗಿದೆ. ಸಭೆಯಲ್ಲಿ ಸುಧೀರ್ಘವಾಗಿ ಕಾಂಗ್ರೆಸ್ ಚುನಾವಣಾ ಸಂದರ್ಭದಲ್ಲಿ ಚರ್ಚೆ ನಡೆಸಲಾಯಿತು. ಇದೀಗ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ 5 ಗ್ಯಾರಂಟಿಗಳ ಬಗೆಗಿನ ಘೋಷಣೆ ಮಾಡಿದೆ. ಬಹು ನಿರೀಕ್ಷಿತ ಗ್ಯಾರೆಂಟಿ ಯೋಜನೆಗಳು ಈಗ ಜಾರಿ ಆಗುವುದು ಖಚಿತ. ರಾಜ್ಯದ ಜನರ, ಮುಖ್ಯವಾಗಿ ಮಹಿಳೆಯರ ಮೊಗದಲ್ಲಿ ಈಗ ಮಂದಹಾಸ ಮೂಡಿದೆ. ಎಲ್ಲಾ 5 ಗ್ಯಾರಂಟಿಗಳು ಜಾರಿ ಆಗೋದು ಗ್ಯಾರಂಟಿ.

ಪಂಚ ಗ್ಯಾರಂಟಿಗಳ ಪೈಕಿ ತಕ್ಷಣಕ್ಕೆ ಎರಡು ಗ್ಯಾರಂಟಿಗಳನ್ನು ನೀಡಲು(Congress Guarantee Declare) ಕಾಂಗ್ರೆಸ್ ನಿರ್ಧರಿಸಿದೆ. ಎಲ್ಲರಿಗೂ 200 ಯೂನಿಟ್ ತನಕ ಗರಿಷ್ಠ ವಿದ್ಯುತ ಫ್ರೀ.

ವಿದ್ಯುತ್ ಬಳಕೆಯನ್ನು ಕಳೆದ 12 ತಿಂಗಳು ಪ್ರತಿಯೊಬ್ಬರು ಎಷ್ಟು ಬಳಸಿದ್ದರೋ, ಅದರ ವಾರ್ಷಿಕ ಎವರೇಜ್ ತೆಗೆದು ಅದರ ಮೇಲೆ 10% ಹೆಚ್ಚು ಬಳಸಲು ಅವಕಾಶ. ಜುಲೈ ತಿಂಗಳಿನಿಂದ ಗೃಹಜೋತಿ ಉಚಿತ ವಿದ್ಯುತ್ ಫ್ರೀ. ಹಿಂದಿನ ಎಲ್ಲಾ ವಿದ್ಯುತ್ ಬಿಲ್ಲುಗಳನ್ನು ಗ್ರಾಹಕರ ಕಟ್ಟಲೇಬೇಕು, ವಿಧಿ ಇಲ್ಲ.

ಗೃಹಲಕ್ಷ್ಮಿ ಯೋಜನೆಯೆಲ್ಲಿ ಮನೆಯ ಯಜಮಾನಿಗೆ ಎರಡು ಸಾವಿರ ರೂಪಾಯಿ ನೀಡಲಾಗುತ್ತದೆ. ಗೃಹಲಕ್ಷ್ಮಿ ಯೋಜನೆಗೆ ಅಕೌಂಟ್ ನಂಬರ್, ಬ್ಯಾಂಕ್ ಖಾತೆ ಮತ್ತು ಆಧಾರ್ ಕಾರ್ಡ್ ಸಲ್ಲಿಸಬೇಕಾಗುತ್ತದೆ . ಜೂನ್ 15ರಿಂದ ಜುಲೈ 15 ರವರೆಗೆ ಅರ್ಜಿ ಸಲ್ಲಿಸಲು ಅವಕಾಶ. ಆಗಸ್ಟ್ 15 ರಿಂದ ಗ್ರಹಲಕ್ಷ್ಮಿ ಯೋಜನೆ ಜಾರಿ. ಅಂದರೆ ಆಗಸ್ಟ್ 15 ರ ನಂತರ ತಿಂಗಳಿಗೆ 2,000 ದೊರೆಯುತ್ತದೆ. ಮನೆಯ ಯಜಮಾನಿಗೆ ಮಾತ್ರ ತಿಂಗಳಿಗೆ 2000 ರೂಪಾಯಿ ನೀಡಲಾಗುತ್ತದೆ. ಈ ಎಲ್ಲಾ ಸೌಲಭ್ಯ BPL ಮತ್ತು APL ಕಾರ್ಡುದಾರರಿಗೂ ಲಭ್ಯ.

ವಿಶೇಷವೆಂದರೆ ಮಂಗಳ ಮುಖಿಯವರಿಗೂ ಈ ಸೌಲಭ್ಯ ಸಿಗಲಿದೆ.

ಅತ್ತೆಗೆ ಸಿಗುತ್ತಾ ಸೊಸೆಗೆ ಸಿಗುತ್ತಾ ಎನ್ನುವ ಸಮಸ್ಯೆಯನ್ನು ಮನೆಯವರೇ ನಿರ್ಧರಿಸಬೇಕು. ಮನೆಯ ಯಜಮಾನಿ ಎಂದು ಯಾರು ಎಂದು ಮನೆಯವರು ನಿರ್ಧರಿಸಿ ಹೇಳಬೇಕು. ಹಾಗೆ ಮನೆಯ ಯಜಮಾನಿಗೆ (ಮನೆಯ ಒಬ್ಬರಿಗೆ) 2000 ರೂಪಾಯಿ ಸಿಗಲಿದೆ. ಆಗಸ್ಟ್ 15 ರ ಸ್ವಾತಂತ್ರೋತ್ಸವ ದಿನ ಗೃಹಲಕ್ಷ್ಮಿ ಯೋಜನೆ ಜಾರಿಗೆ ಬರಲಿದೆ. ಈ ಎಲ್ಲಾ ಸೌಲಭ್ಯ BPL ಮತ್ತು APL ಕಾರ್ಡುದಾರರಿಗೂ ಲಭ್ಯ.

ಅನ್ನ ಭಾಗ್ಯ ಯೋಜನೆಯಡಿ ಆಹಾರ ಧಾನ್ಯ 10 ಕೆಜಿ ಲಭ್ಯ. ಜುಲೈ 1 ರಿಂದ ಎಲ್ಲಾ ಬಿಪಿಎಲ್ ನವರಿಗೆ 10 ಕೆಜಿ ಕೊಡ್ತೇವೆ. ಬಿಪಿಎಲ್ ಮತ್ತು ಅಂತ್ಯೋದಯದವರಿಗೆ ಕೂಡಾ 10 ಕೆಜಿ ಅಕ್ಕಿ.

ಶಕ್ತಿ ಯೋಜನೆಯಡಿಯಲ್ಲಿ ಮಹಿಳೆಯರಿಗೆ ಫ್ರೀ ಬಸ್. ವಿದ್ಯಾರ್ಥಿಗಳನ್ನೂ ಒಳಗೊಂಡಂತೆ ಉಚಿತ ಬಸ್‌.ಇದೇ ತಿಂಗಳು 11 ರಿಂದ ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ. ಎಸಿ ಮತ್ತು ಲಕ್ಷುರಿ ಬಸ್‌ ಪ್ರಯಾಣವಿಲ್ಲ. ಎಲ್ಲಾ ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಪ್ರಯಾಣ ಉಚಿತ. ಈ ಎಲ್ಲಾ ಸೌಲಭ್ಯ BPL ಮತ್ತು APL ಕಾರ್ಡುದಾರರಿಗೂ ಲಭ್ಯ.

ಯುವನಿಧಿ: ೨೨-೨೩ ರಲ್ಲಿ ವ್ಯಾಸಂಗ ಮಾಡಿ ಪಾಸ್‌ ಮಾಡಿರುವ ಯುವಕರಿಗೆ,  ಎಲ್ಲಾ ಗ್ರಾಜ್ಯುಯೇಟ್‌ ಕೋರ್ಸ್‌ಗಳಿಗೆ ಇಪ್ಪತ್ತನಾಲ್ಕು ತಿಂಗಳವರೆಗೆ ಪ್ರತಿತಿಂಗಳಿಗೆ ಮೂರು ಸಾವಿರ ಗ್ರಾಜ್ಯುಯೇಟ್ಸ್‌ ಗೆ ಡಿಪ್ಲೋಮಾ ಮಾಡಿರುವವರಿಗೆ ಒಂದೂವರೆ ಸಾವಿರ ರೂಪಾಯಿ ನಿರುದ್ಯೋಗಿಗಳಿಗೆ ಲಭಿಸಲಿದೆ. ಈ ಎಲ್ಲಾ ಸೌಲಭ್ಯ BPL ಮತ್ತು APL ಕಾರ್ಡುದಾರರಿಗೂ ಲಭ್ಯ.

2022-23 ರಲ್ಲಿ ಪಾಸ್ ಆದ ನಿರುದ್ಯೋಗ ಯುವಕರಿಗೆ ಹಣ. ಪದವಿ ಪಾಸ್ ಆದ 24 ತಿಂಗಳವರೆಗೆ ಪ್ರತಿ ತಿಂಗಳು 3,000. ಬಿಎ, ಬಿಎಸ್‌ಸಿ, ಬಿಕಾಂ ಸೇರಿ ಎಲ್ಲಾ ಪದವೀಧರರಿಗೆ ಲಭಿಸಲಿದೆ. ಯುವನಿಧಿ ಯೋಜನೆಯಡಿ ನಿರುದ್ಯೋಗ ಯುವಕರಿಗೆ ಹಣ. 2022-23 ರಲ್ಲಿ ಪಾಸ್ ಆದ ನಿರುದ್ಯೋಗ ಯುವಕರಿಗೆ ಹಣ. ಪದವಿ ಪಾಸ್ ಆದ 24 ತಿಂಗಳವರೆಗೆ ಪ್ರತಿ ತಿಂಗಳು 3,000

ವಿಧಾನ ಸಭೆಚುನಾವಣಾ ಪ್ರಚಾರ ಸಂದರ್ಭದಲ್ಲಿ ಘೋಷಣೆ ಮಾಡಿದ್ದ ಪಂಚ ಘೋಷಣೆಗಳ ಬಗ್ಗೆ ವಿವಿಧ ಇಲಾಖೆಯ ಅಧಿಕಾರಿಗಳು, ಆರ್ಥಿಕ ಇಲಾಖೆಯ ಹಿರಿಯ ಅಧಿಕಾರಿಗಳ ಸಭೆಯ ಬಳಿಕ ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದಲ್ಲಿ ಮಹತ್ವದ ರಾಜ್ಯ ಸಚಿವ ಸಂಪುಟ ಸಭೆಯೂ ನಡೆದಿದ್ದು, ಇದೀಗ ಅಂತ್ಯಗೊಂಡಿದೆ.

ಇದಕ್ಕೂ ಮೊದಲು ಬಹಳ ಸುಧೀರ್ಘವಾಗಿ ಮಾತನಾಡಿದ ಸಿದ್ದರಾಮಯ್ಯನವರು,’ ಈ ಐದು ಗ್ಯಾರಂಟಿಗಳನ್ನು ಚರ್ಚೆ ಮಾಡಿದ್ದೇವೆ. ಚರ್ಚೆ ಮಾಡಿ ತೀರ್ಮಾನ ಮಾಡಿದ್ದೇವೆ. ಐದು ಗ್ಯಾರಂಟಿಗಳನ್ನು ಇದೇ ಆರ್ಥಿಕ ವರ್ಷದಲ್ಲಿ ಜಾರಿಗೆ ಕೊಡಬೇಕು ಎಂಬುದಾಗಿ ತೀರ್ಮಾನ ಮಾಡಿದ್ದೇವೆ. ಅದು ಯಾವುದೇ ಜಾತಿ, ಯಾವುದೇ ಧರ್ಮ, ಯಾವುದೇ ಭಾಷೆ, ಅಲ್ಲದೆ ಎಲ್ಲಾ ಜಾತಿ, ಧರ್ಮ, ಭಾಷೆಯವರಿಗೆ, ಒಟ್ಟಾರೆ ಕರ್ನಾಟಕದ ಜನರಿಗೆ ಈ ಗ್ಯಾರಂಟಿಗಳನ್ನು ತಲುಪಿಸುತ್ತೇವೆ. ಜಾರಿಗೆ ತರುತ್ತೇವೆ ‘ ಎಂದರು. ನಡು ನಡುವೆ ಪತ್ರಕರ್ತರಿಗೆ ಗದರುತ್ತ, ತಮಾಷೆ ಮಾಡುತ್ತಾ ಸಿದ್ದರಾಮಯ್ಯನವರು ಒಟ್ಟು ಐದು ಗ್ಯಾರಂಟಿಗಳನ್ನು ಘೋಷಿಸಿದರು. ಈ ಉಚಿತಗಳು ಎಲ್ಲರಿಗೂ ಲಭ್ಯ. ಬಸ್ಸಿನಲ್ಲಿ ಎಲ್ಲಾ ಮಹಿಳೆಯರಿಗೂ ಪ್ರಯಾಣ ಉಚಿತ. ನನ್ನ ಹೆಂಡತಿಗೂ ಪ್ರಯಾಣ ಉಚಿತ  ಎಂದು ಲಘ ದಾಟಿಯಲ್ಲಿ ಎಲ್ಲವನ್ನೂ ವಿವರಿಸಿದ್ದಾರೆ ಸಿದ್ದರಾಮಯ್ಯ.

Leave A Reply

Your email address will not be published.