Home News BPL Card: ಕಾಂಗ್ರೆಸ್ ಗ್ಯಾರಂಟಿ ಯೋಜನೆ ಸೌಲಭ್ಯ ಪಡೆಯಬೇಕೆ! ಈ ರೀತಿ ಅರ್ಜಿ ಸಲ್ಲಿಸಿ BPL...

BPL Card: ಕಾಂಗ್ರೆಸ್ ಗ್ಯಾರಂಟಿ ಯೋಜನೆ ಸೌಲಭ್ಯ ಪಡೆಯಬೇಕೆ! ಈ ರೀತಿ ಅರ್ಜಿ ಸಲ್ಲಿಸಿ BPL ಕಾರ್ಡ್ ಪಡೆಯಿರಿ!

BPL Card

Hindu neighbor gifts plot of land

Hindu neighbour gifts land to Muslim journalist

BPL Card Apply: ಕಾಂಗ್ರೆಸ್ ಸರ್ಕಾರ ನೀಡಿದ ಐದು ಗ್ಯಾರಂಟಿಗಳನ್ನು ಮೊದಲ ದಿನವೇ ಪೂರೈಸುವ ಘೋಷಣೆ ಮಾಡಿದ್ದರಿಂದ ತಮಗೆ ಉಚಿತ ವಿದ್ಯುತ್, ಗೃಹಲಕ್ಷ್ಮಿ, ಮಹಿಳೆಯರಿಗೆ ಉಚಿತ ಬಸ್ ಪಾಸ್, 10 ಕೆಜಿ ಅಕ್ಕಿ ಸಿಗುವ ನಿರೀಕ್ಷೆಯಲ್ಲಿ ಜನರಿದ್ದಾರೆ. ಹೀಗಾಗಿ ಈ ಯೋಜನೆಗೆ ಅಗತ್ಯವಾಗಿ ಬೇಕಾದ ಬಿಪಿಎಲ್ ಕಾರ್ಡ್​ ಬೇಡಿಕೆ ಹೆಚ್ಚಾಗಿದೆ.

ಕಾಂಗ್ರೆಸ್‌ ಪಕ್ಷ ನೀಡಿದ್ದ ಐದು ಗ್ಯಾರಂಟಿಗಳ ಪೈಕಿ ಅಕ್ಕಿ ಭಾಗ್ಯ ಕೂಡ ಒಂದು. ಮನೆಯ ಪ್ರತಿ ಸದಸ್ಯನಿಗೆ ತಲಾ ಹತ್ತು ಕೆ.ಜಿ ಅಕ್ಕಿ ನೀಡುವುದಾಗಿ ಸರ್ಕಾರ ಘೋಷಿಸಿದೆ. ಅದರಂತೆ ಬಿಪಿಎಲ್‌ ಕಾರ್ಡ್‌ ಮಾಡಿಸಲು ಗ್ರಾಹಕರು ಇದೀಗ ಆಹಾರ ಮತ್ತು ನಾಗರೀಕ ಸರಬರಾಜು ಕಚೇರಿಗಳಿಗೆ ಭೇಟಿ ನೀಡುತ್ತಿದ್ದಾರೆ. ಹೀಗಾಗಿ, ಇಲಾಖೆ ಕೂಡ ಸಿದ್ಧತೆ ಮಾಡಿಕೊಂಡಿದೆ.

ಬಡತನ ರೇಖೆಗಿಂತ ಕೆಳಗಿರುವವರಿಗೆ ನೀಡುವ ಕಾರ್ಡ್‌ ಮಾಡಿಸಿಕೊಳ್ಳಲು ಈ ತಿಂಗಳಿನಿಂದ ಇಲಾಖೆ ಅವಕಾಶ ನೀಡುವ ಸಾಧ್ಯತೆ ಇದೆ. ಚುನಾವಣೆ ಸಂದರ್ಭದಲ್ಲಿ ನೀತಿ ಸಂಹಿತೆ ಕಾರಣದಿಂದ ವೆಬ್‌ಸೈಟ್‌ಗಳ ಮೂಲಕ ಸಲ್ಲಿಸುವ ಅರ್ಜಿಗಳಿಗೆ ತಾತ್ಕಾಲಿಕ ತಡೆ ಹಿಡಿಯಲಾಗಿತ್ತು. ಇದೀಗ ಮತ್ತೆ ಆರಂಭಿಸುವ ಸಾಧ್ಯತೆಗಳು ಇವೆ.

ಹೊಸದಾಗಿ ರೇಷನ್‌ ಕಾರ್ಡ್‌ ಪಡೆಯಲು ಹೇಗೆ ಅರ್ಜಿ (BPL Card Apply) ಸಲ್ಲಿಸುವುದು, ಅರ್ಹತೆಗಳು ಹಾಗೂ ದಾಖಲೆಗಳ ಮಾಹಿತಿ ಇಲ್ಲಿದೆ.

ಬೇಕಾಗುವ ದಾಖಲೆಗಳು: ಆಧಾರ್‌ ಕಾರ್ಡ್‌, ಮನೆಯ ಸದಸ್ಯರ ಆಧಾರ್‌ ಕಾರ್ಡ್‌ಗಳು, ಸಂಯೋಜಿತ ಐಡಿ, ಬ್ಯಾಂಕ್‌ ಪಾಸ್‌ ಬುಕ್‌, ಆದಾಯ, ಜಾತಿ, ನಿವಾಸ ಪ್ರಮಾಣ ಪತ್ರ ಹಾಗೂ ಕುಟುಂಬ ಸದಸ್ಯರ ಫೋಟೊಗಳು, ಮೊಬೈಲ್‌ ಸಂಖ್ಯೆ, ಬಾಡಿಗೆದಾರರಿಗೆ ಒಪ್ಪಂದ ಪತ್ರ‌ ಕಡ್ಡಾಯವಾಗಿ ಬೇಕಾಗುತ್ತದೆ.

ಮುಖ್ಯವಾಗಿ BPL ಕಾರ್ಡ್ ಪಡೆಯಲು ರಾಜ್ಯದ ನಿವಾಸಿಗಳಾಗಿರಬೇಕು, ಈಗಾಗಲೇ ಪಡಿತರ ಚೀಟಿ ಹೊಂದಿರಬಾರದು, ಹೊಸದಾಗಿ ಮದುವೆಯಾದವರು, ಪಡಿತರ ಚೀಟಿ ಅವಧಿ ಮುಗಿದ ಅರ್ಹರು.

ಅರ್ಜಿ ಸಲ್ಲಿಕೆ ವಿಧಾನ
http://ahara.kar.nic.in ವೆಬ್‌ಸೈಟ್‌ ಓಪನ್‌ ಮಾಡಿಕೊಳ್ಳಬೇಕು. ಇ-ಸೇವೆಗಳು ಆಯ್ಕೆಯನ್ನು ಕ್ಲಿಕ್‌ ಮಾಡಬೇಕು. ಇ-ರೇಷನ್‌ ಕಾರ್ಡ್‌ನಿಂದ ಹೊಸ ಪಡಿತರ ಚೀಟಿ ಆಯ್ಕೆ ಮಾಡಬೇಕು. ನಂತರ 2 ಭಾಷೆಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕು (ಇಂಗ್ಲೀಷ್‌ ಅಥವಾ ಕನ್ನಡ). ಬಿಪಿಎಲ್‌ ಚೀಟಿಗಾಗಿ ಆದ್ಯತೆಯ ಮನೆ, ಎಪಿಎಲ್‌ಗೆ ಆದ್ಯತೆಯಲ್ಲದ ಕುಟುಂಬದ ಮೂಲಕ ಆಯ್ಕೆ ಮಾಡಬೇಕು. ನಂತರ ಕೇಳುವ ಪ್ರಶ್ನೆಗೆ – ಮೊದಲು ಬಿಪಿಎಲ್‌ ಚೀಟಿಗೆ ಅರ್ಜಿ ಸಲ್ಲಿಸಿದ್ದೀರಾ ಅಥವಾ ಹೊಸ ಅರ್ಜಿಯೇ ಎಂಬುದಕ್ಕೆ ಉತ್ತರ ನೀಡಬೇಕು. ಜಿಲ್ಲೆ, ತಾಲೂಕು, ಸ್ವೀಕೃತಿ ಸಂಖ್ಯೆ ಆಯ್ಕೆ ಮಾಡಿ, ಹೊಸ ನೋಂದಣಿ ಅರ್ಜಿ ಭರ್ತಿ ಮಾಡಲು ʼಗೋʼ ಆಯ್ಕೆ ಮಾಡಬೇಕು. ನಂತರ ಬಿಪಿಎಲ್‌ ಅಥವಾ ಎಪಿಎಲ್‌ಗಾಗಿ ಆಯ್ಕೆಯನ್ನು ಕ್ಲಿಕ್‌ ಮಾಡಬೇಕು.

ಪಡಿತರ ಚೀಟಿಗಾಗಿ ಸಲ್ಲಿಸಿದ ಎಲ್ಲಾ ದಾಖಲೆಗಳ ಪರಿಶೀಲನೆ ಬಳಿಕ 15 ದಿನದೊಳಗೆ ಹೊಸ ಪಡಿತರ ಚೀಟಿಗಳನ್ನು ನೀಡಲಾಗುತ್ತದೆ. ಆ ಸಂದರ್ಭದಲ್ಲಿ 100 ರೂ ಅಥವಾ ನಿಗದಿಪಡಿಸಿರುವ ಹಣವನ್ನು ನೀಡಬೇಕಾಗುತ್ತದೆ.

ನೆನಪಿರಲಿ ಈ ಮೇಲಿನ ಎಲ್ಲಾ ದಾಖಲೆಯಲ್ಲಿ ಯಾವುದಾದರೂ ಒಂದು ದಾಖಲೆ ಇಲ್ಲದಿದ್ದರೂ ಅರ್ಜಿ ಸಲ್ಲಿಸಲು ಸಾಧ್ಯವಾಗುವುದಿಲ್ಲ.

 

ಇದನ್ನು ಓದಿ: Brazil Beauty Pageant: ಸೌಂದರ್ಯ ಸ್ಪರ್ಧೆಯಲ್ಲಿ ಪತ್ನಿಗೆ 2ನೇ ಸ್ಥಾನ ; ವೇದಿಕೆ ಮೇಲೇರಿ ಬಂದ ಪತಿ ಕಿರೀಟ ಪುಡಿಗಟ್ಟಿದ! ವಿಡಿಯೋ ಸಖತ್ ವೈರಲ್!!!