2018 Movie: ಗಲ್ಲಾಪೆಟ್ಟಿಗೆ ನೂರಾರು ಕೋಟಿ ಬಾಚಿದ ಮಲಯಾಳಂ ಸಿನಿಮಾ ʼ2018′ ಒಟಿಟಿಯಲ್ಲಿ ಬಿಡುಗಡೆ! ಹೆಚ್ಚಿನ ವಿವರ ಇಲ್ಲಿದೆ
Malyalam movie 2018 released in OTT
2018 movie: ಮಲಯಾಳಂ ಸೂಪರ್ ಹಿಟ್ ಮೂವಿ ಗಲ್ಲಾಪೆಟ್ಟಿಗೆಯಲ್ಲಿ ಕೋಟಿ ಕೋಟಿ ಬಾಚಿ ದಾಖಲೆ ಮಾಡಿದ ಮೂವಿ ʼ2018′ ಒಟಿಟಿಗೆ ಲಗ್ಗೆ ಇಟ್ಟಿದೆ. ಜೂನ್ 7ರಂದು ʼ2018′ ಸಿನಿಮಾ( 2018 movie) ಒಟಿಟಿಯಲ್ಲಿ ಜನರ ವೀಕ್ಷಣೆಗೆ ಲಭ್ಯವಿದೆ. ಈ ಸಿನಿಮಾ ಚಿತ್ರಮಂದಿರದಲ್ಲೇ ಉತ್ತಮ ಪ್ರದರ್ಶನ ಕಾಣುತ್ತಿರುವಾಗಲೇ ಒಟಿಟಿಯಲ್ಲಿ ಪ್ರದರ್ಶನಕ್ಕೆ ರೆಡಿಯಾಗಿದೆ.
ಮಲಯಾಳಂನಲ್ಲಿ ಸೂಪರ್ ಹಿಟ್ ಆದ ಈ ಸಿನಿಮಾ ನಂತರ ತೆಲುಗಿಗೂ ಡಬ್ ಆಗಿ ಬಾಕ್ಸ್ಆಫೀಸ್ ಚಿಂದಿ ಮಾಡಿದೆ. ಅಂದ ಹಾಗೆ ಈ ಸಿನಿಮಾದ ಒಟಿಟಿ ಚಿತ್ರದ ಪ್ರಸಾರ ಹಕ್ಕನ್ನು ʼಸೋನಿ ಲಿವ್ʼ ʻ(Sony Liv) ಸಂಸ್ಥೆ ಖರೀದಿಸಿದೆ. ಹಾಗಾಗಿ ಯಾರೆಲ್ಲ ಥಿಯೇಟರ್ನಲ್ಲಿ ಈ ಸಿನಿಮಾ ನೋಡಲು ಮಿಸ್ ಮಾಡಿದ್ದೀರೋ ಅವರೆಲ್ಲ ಒಟಿಟಿಯಲ್ಲಿ ಈ ಸಿನಿಮಾವನ್ನು ನೋಡಬಹುದು.
ಈ ಸಿನಿಮಾದ ಜೀವಾಳ, ನಾಯಕ, ಟೊವಿನೋ ಥಾಮಸ್ (Tovino Thomas) ಬಹಳ ಮುಖ್ಯ ಪಾತ್ರ ನಿಭಾಯಿಸಿದ್ದಾರೆ. ಚಿತ್ರಮಂದಿರಲ್ಲಿ ಹೌಸ್ಫುಲ್ ಪ್ರದರ್ಶನ ಕಾಣುತ್ತಿರುವ ಈ ಸಿನಿಮಾವ ಒಟಿಟಿಯಲ್ಲಿ ರಿಲೀಸ್ ಆಗುವುದರಿಂದ ಕೆಲವರು ತಮ್ಮ ಬೇಸರ ವ್ಯಕ್ತಪಡಿಸಿದ್ದಾರೆ. ಬಾಕ್ಸ್ಆಫೀಸ್ನಲ್ಲಿ ಚೆನ್ನಾಗಿ ಕಲೆಕ್ಷನ್ ಆಗುತ್ತಿದ್ದ ಈ ಸಿನಿಮಾವನ್ನು ಈಗಲೇ ಒಟಿಟಿಯಲ್ಲಿ ಬಿಡಲು ಕಾರಣವೇನೆಂದು ಕೇಳುತ್ತಿದ್ದಾರೆ. ಇದರ ಒಟಿಟಿ ಪ್ರಸಾರ ಸಮಯವನ್ನು ಮುಂದೂಡಬಹುದಲ್ಲವೇ ಎಂಬ ಪ್ರಶ್ನೆಯನ್ನು ನೆಟ್ಟಿಗರು ಮಾಡುತ್ತಿದ್ದಾರೆ.
ಈ ಸಿನಿಮಾದಲ್ಲಿ 2018 ರಲ್ಲಿ ಕೇರಳದಲ್ಲಿ ಉಂಟಾದ ಪ್ರವಾಹದ ಕುರಿತು ಸಿನಿಮಾ ಎನ್ನಲಾಗಿದೆ. ಈ ಸಂದರ್ಭದಲ್ಲಿ ಅಲ್ಲಿನ ಜನರು ಯಾವ ರೀತಿ ನಡೆದುಕೊಂಡರು ಎಂಬುವುದನ್ನು ಎಳೆಎಳೆಯಾಗಿ ತೋರಿಸಿದ್ದಾರೆ. 1924ರ ನಂತರ ಕೇರಳದಲ್ಲಿ ಅತಿ ಭೀಕರ ಪ್ರವಾಹ ಇದಾಗಿದೆ ಎಂದು ಹೇಳಲಾಗಿದೆ. ಈ ಪ್ರವಾಹದಲ್ಲಿ ಕೇರಳದ 400ಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದು, ಹಲವರು ನಾಪತ್ತೆಯಾಗಿದ್ದರು.
ಈ ಸಿನಿಮಾದಲ್ಲಿ ಮಲಯಾಳಂನ ಘಟಾನುಘಟಿ ನಟರು ನಟಿಸಿದ್ದಾರೆ. ಟೊವಿನೋ ಥಾಮಸ್ ಜೊತೆ ಆಸಿಫ್ ಅಲಿ, ಅಪರ್ಣಾ ಬಾಲಮುರಳಿ, ವಿನೀತ್ ಶ್ರೀನಿವಾಸನ್, ಕಲೈಯರಸನ್, ಸುದೇಶ್, ಅಜು ವರ್ಗೀಸ್, ತನ್ವಿ ರಾಮ್, ಗೌತಮಿ ನಾಯರ್ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಜೂಡ್ ಆಂಥೊನಿ ಜೋಸೆಫ್ ಅವರು ನಿರ್ದೇಶನದಲ್ಲಿ ಅತ್ಯದ್ಭುತವಾಗಿ ಈ ಸಿನಿಮಾ ಮೂಡಿ ಬಂದಿದೆ. 2018 ಸಿನಿಮಾ ಇಲ್ಲಿಯವರೆಗೂ 160 ಕೋಟಿ ಬಾಚಿದ್ದು ಅತಿ ದೊಡ್ಡ ಬ್ಲಾಕ್ ಬಸ್ಟರ್ ಚಿತ್ರ ಎಂಬ ಖ್ಯಾತಿ ಪಡೆದಿದೆ.
ಇದನ್ನೂ ಓದಿ: RBI Recruitment 2023: ಆರ್ಬಿಐನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ! ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ!