Congress Guarantee: ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಗ್ಯಾರಂಟಿ ಫಿಕ್ಸ್! ಕಂಡೀಷನ್ ಅಪ್ಲೈ!

Congress guarantee free bus service updates

Congress Guarantee: ಕಾಂಗ್ರೆಸ್ ಪಕ್ಷವು ಚುನಾವಣೆ ಪೂರ್ವ ಘೋಷಣೆ ಯಲ್ಲಿ ಮಾಡಿದ 5 ಗ್ಯಾರಂಟಿ ಯೋಜನೆಗಳ ಹಿನ್ನೆಲೆ ಇದೀಗ ಗ್ಯಾರಂಟಿಗಳನ್ನು (Congress Guarantee) ಜಾರಿಗೆ ತರಲು ಕಾಂಗ್ರೆಸ್ ಸರ್ಕಾರವು ಸಿದ್ಧತೆ ನಡೆಸಿದ್ದು, ಇದರ ನಡುವೆ ಯೋಜನೆಗಳನ್ನು ಅನ್ವಯಿಸುವ ಕುರಿತು ಸರ್ಕಾರ ಚಿಂತನೆ ನಡೆಸಿದೆ.

ಯಾವ ಯೋಜನೆಗಳಿಗೆ ಯಾವ ಕಂಡೀಷನ್ ಹಾಕಬೇಕು ಎಂದು ಸರ್ಕಾರ ಚಿಂತನೆ ನಡೆಸುತ್ತಿದೆ. ಯೋಜನೆಗಳಿಗೆ ಯಾವ ಸೂತ್ರ ಅನುಸರಿಸಬೇಕು ಎಂದು ಮಾರ್ಗಸೂಚಿಗಳನ್ನು ಸಿದ್ದಪಡಿಸಿಕೊಂಡು ಬರುವಂತೆ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.

ಈಗಾಗಲೇ ಬಸ್ ಪಾಸ್ ಫ್ರೀ ಎಂದು ಘೋಷಣೆ ಮಾಡಿದ್ದ ಕೈ ನಾಯಕರು ಇದೀಗ ಅನೇಖ ಷರತ್ತು ವಿಧೀಸಲು ಮುಂದಾಗಿದ್ದಾರೆ. ಒಂದು ವಾರದಿಂದ ರಾಜ್ಯಾದ್ಯಂತ ಬಸ್ ಟಿಕೆಟ್‌ ಖರೀದಿಯಲ್ಲಿ ಕಿರಿಕಿರಿ ಶುರುವಾಗಿದೆ.

ಆದ್ದರಿಂದ ಎಲ್ಲರಿಗೂ ಉಚಿತ ಬಸ್ ಪಾಸ್ ಎಂದು ಘೋಷಣೆ ಮಾಡಿದ ಕಾಂಗ್ರೆಸ್ ಇದೀಗ ಷರತ್ತು ವಿಧಿಸಲು ಮುಂದಾಗಿದೆ. ಷರತ್ತಿನ ಅನ್ವಯ, ಮಹಿಳೆಯರು ಕರ್ನಾಟಕದವರೇ ಆಗಿರಬೇಕು. ಈ ಪಾಸ್ ನೀಡಲು ಬಿಪಿಎಲ್ ಕಾರ್ಡ್ ಕಡ್ಡಾಯ ಮಾಡಲು ಚಿಂತನೆ ನಡೆಸಿದೆ. ಕೆಂಪು ಬಸ್ಸುಗಳಲ್ಲಿ ಮಾತ್ರ ಉಚಿತ ಬಸ್ ಪಾಸ್ ಅನ್ವಯಿಸುತ್ತದೆ, ಕೇವಲ 50 ಕಿಮೀವರೆಗೆ ಮಾತ್ರ ಉಚಿತವಾಗಿ ಪ್ರಯಾಣಿಸಬಹುದು. ಈ ಎಲ್ಲಾ ಕಂಡೀಷನ್ ಹಾಕಲು ಸರ್ಕಾರ ಚಿಂತನೆ ನಡೆಸಿದೆ.

ಹೌದು, ಇಡೀ ರಾಜ್ಯದಲ್ಲಿ ಸಂಚರಿಸಲು ಉಚಿತ ನೀಡುವ ಬದಲಿಗೆ ತಮ್ಮ ವಿಳಾಸದಿಂದ ನಿರ್ದಿಷ್ಟ ಕಿಲೋಮೀಟರ್‌ವರೆಗೆ ಮಾತ್ರ ಉಚಿತ ಮಾಡಲು ಚಿಂತನೆ ನಡೆದಿದೆ. ಅದರಲ್ಲೂ ಸಾಮಾನ್ಯ ವೇಗಧೂತ (ಕೆಂಪು ಬಸ್‌) ಬಸ್‌ಗಳಲ್ಲಿ ಮಾತ್ರ ಇದು ಅನ್ವಯವಾಗಲಿದ್ದು, ವಿಳಾಸದಿಂದ 50 ಕಿಲೋಮೀಟರ್‌ವರೆಗೆ ಉಚಿತ ಮಾಡುವ ಸಾಧ್ಯತೆಯಿದೆ ಎಂಬ ಮಾಹಿತಿ ದೊರೆತಿದೆ.

ಇದನ್ನೂ ಓದಿ: ISRO ICRB Recruitment 2023: ಇಸ್ರೋದಲ್ಲಿ 303 ಹುದ್ದೆಗಳ ಭರ್ಜರಿ ನೇಮಕ! ಈಗಲೇ ಅಪ್ಲೈ ಮಾಡಿ

Leave A Reply

Your email address will not be published.