UPSC Prelims 2023: ಇಂದು UPSC ಪ್ರಿಲಿಮ್ಸ್ ಪರೀಕ್ಷೆ, ಕನ್ನಡದಲ್ಲಿ ಬರೆಯೋ ಭಾಗ್ಯ ಈ ವರ್ಷವೂ ಸಿಕ್ಕಿಲ್ಲ

UPSC CSE Prelims 2023 exam on May 28

UPSC Prelims 2023: ಕೇಂದ್ರ ಲೋಕ ಸೇವಾ ಆಯೋಗವು (ಯುಪಿಎಸ್‌ಸಿ) ಭಾರತೀಯ ನಾಗರಿಕ ಸೇವಾ ಅಧಿಕಾರಿ (ಐಎಸ್ಎಸ್) ಮತ್ತು ಭಾರತೀಯ ಅರಣ್ಯ ಸೇವಾ ಅಧಿಕಾರಿ (ಐಎಫ್‌ಎಸ್) ಹುದ್ದೆಗಳ ನೇಮಕಾತಿಗೆ ಮೇ 28 ರಂದು ಅಂದರೆ ಇಂದು ಪೂರ್ವಭಾವಿ ಪರೀಕ್ಷೆ (UPSC Prelims 2023) ನಡೆಯತ್ತಿದ್ದು, ಈ ಬಗೆಗಿನ ಮುಖ್ಯ ಮಾಹಿತಿ ಇಲ್ಲಿ ನೀಡಲಾಗಿದೆ.

 

ಈಗಾಗಲೇ ರಾಜ್ಯದಲ್ಲಿ ಬೆಂಗಳೂರು, ಧಾರವಾಡ ಮತ್ತು ಮೈಸೂರಿನಲ್ಲಿ ಪೂರ್ವಭಾವಿ ಪರೀಕ್ಷೆ ನಡೆಯತ್ತಿದ್ದು, ಪೂರ್ವ ಭಾವಿ ಪರೀಕ್ಷೆಯನ್ನು ಕನ್ನಡದಲ್ಲಿಯೂ ನಡೆಸಬೇಕೆಂಬ ಬೇಡಿಕೆಗೆ ಯುಪಿಎಸ್‌ಸಿಯು ಮನ್ನಣೆ ನೀಡಿಲ್ಲ ಎಂಬುದು ಕನ್ನಡಿಗರಿಗೆ ಬೇಸರದ ಸಂಗತಿ.

ಈ ಹಿನ್ನೆಲೆ ಅಭ್ಯರ್ಥಿಗಳು ಇಂಗ್ಲಿಷ್ ಅಥವಾ ಹಿಂದಿಯಲ್ಲಿ ಮಾತ್ರ ಪರೀಕ್ಷೆ ಬರೆಯಬಹುದಾಗಿದೆ. ಇಂದು ಒಟ್ಟು ಎರಡು ಶಿಫ್ಟ್ ಪರೀಕ್ಷೆಗಳು ನಡೆಯಲಿವೆ, ಬೆಳಗ್ಗೆ 9:30 ರಿಂದ 11:30 ರ ವರೆಗೆ ಒಂದು ಶಿಫ್ಟ್ ಪರೀಕ್ಷೆ ನಡೆಯುತ್ತದೆ ಮತ್ತೊಂದು ಶಿಫ್ಟ್ ಪರೀಕ್ಷೆಯು ಮಧ್ಯಾಹ್ನ 2:30 ರಿಂದ 4:30 ರ ತನಕ. ಈ ಪರೀಕ್ಷೆಯು ಆಫ್‌ಲೈನ್‌ನಲ್ಲಿದೆ.

ಸದ್ಯ ಕನ್ನಡ ಹೋರಾಟಗಾರ ಗಿರೀಶ್ ಅವರು `ದೇಶದ ಪ್ರತಿಷ್ಠಿತ ಪರೀಕ್ಷೆ ಎಂದು ಹೆಸರು ಮಾಡಿರುವ ಈ ಪರೀಕ್ಷೆಯ ಪೂರ್ವಭಾವಿ ಪರೀಕ್ಷೆಯನ್ನು ಕನ್ನಡದಲ್ಲಿ ನಡೆಸಿದರೆ ಮಾತ್ರ ರಾಜ್ಯದ ಅಭ್ಯರ್ಥಿಗಳಿಗೆ ಅನುಕೂಲ ಪರೀಕ್ಷೆ ಎಂದು ಮತ್ತೊಮ್ಮೆ ಒತ್ತಾಯಿಸಿದ್ದಾರೆ.

ಇನ್ನು ಕೇಂದ್ರ ಲೋಕ ಸೇವಾ ಆಯೋಗವು (ಯುಪಿಎಸ್‌ಸಿ) ಭಾರತೀಯ ನಾಗರಿಕ ಸೇವಾ ಅಧಿಕಾರಿ (ಐಎಸ್ಎಸ್) ಮತ್ತು ಭಾರತೀಯ ಅರಣ್ಯ ಸೇವಾ ಅಧಿಕಾರಿ ಬರೆಯುವ ಮೊದಲು ಈ ನಿಯಮಗಳನ್ನು ಪಾಲಿಸಲು ಸೂಚಿಸಲಾಗಿತ್ತು.

ಅಂತಿಮ ಕ್ಷಣದಲ್ಲಿ ಯಾವುದೇ ತೊಂದರೆಗಳನ್ನು ತಪ್ಪಿಸಲು ಅಭ್ಯರ್ಥಿಗಳು ನಿಗದಿತ ಸಮಯಕ್ಕಿಂತ ಕನಿಷ್ಠ ಒಂದು ಗಂಟೆ ಮುಂಚಿತವಾಗಿ ಪರೀಕ್ಷಾ ಹಾಲ್‌ಗೆ ಆಗಮಿಸಬೇಕು

ಪರೀಕ್ಷೆ ಪ್ರಾರಂಭವಾದ ನಂತರ ಯಾವುದೇ ತಡವಾದ ಅಭ್ಯರ್ಥಿ ಪ್ರವೇಶಗಳನ್ನು ಅನುಮತಿಸಲಾಗುವುದಿಲ್ಲ.

OMR ಹಾಳೆಯಲ್ಲಿ ಉತ್ತರಗಳನ್ನು ಗುರುತಿಸಲು ಕಪ್ಪು ಬಾಲ್ ಪಾಯಿಂಟ್ ಪೆನ್ನುಗಳನ್ನು ಮಾತ್ರ ಅನುಮತಿಸಲಾಗಿದೆ. ಬೇರೆ ಯಾವುದೇ ಬಣ್ಣದ ಪೆನ್ನನ್ನು ಬಳಸುವುದು ಅನರ್ಹತೆಗೆ ಕಾರಣವಾಗುತ್ತದೆ.

ಪ್ರವೇಶ ಕಾರ್ಡ್‌ಗೆ ಹೆಚ್ಚುವರಿಯಾಗಿ, ಎಲ್ಲಾ ಅಭ್ಯರ್ಥಿಗಳು ತಮ್ಮ ಪ್ರವೇಶ ಕಾರ್ಡ್‌ನಲ್ಲಿರುವ ಮಾಹಿತಿಗೆ ಹೊಂದಿಕೆಯಾಗುವ ಮಾನ್ಯವಾದ ಫೋಟೋ ಐಡಿ ಪುರಾವೆಯನ್ನು (ಪಾಸ್‌ಪೋರ್ಟ್, ಡ್ರೈವಿಂಗ್ ಲೈಸೆನ್ಸ್, ವೋಟರ್ ಐಡಿ ಕಾರ್ಡ್, ಪ್ಯಾನ್ ಕಾರ್ಡ್ ಅಥವಾ ಆಧಾರ್ ಕಾರ್ಡ್‌ನಂತಹ) ತರಬೇಕು.

ಪರೀಕ್ಷಾ ಹಾಲ್‌ನಲ್ಲಿ ಎಲೆಕ್ಟ್ರಾನಿಕ್ ಸಾಧನಗಳು ಅಥವಾ ಮೊಬೈಲ್ ಫೋನ್‌ಗಳು ಮತ್ತು ಸ್ಮಾರ್ಟ್‌ವಾಚ್‌ಗಳಂತಹ ಗ್ಯಾಜೆಟ್‌ಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.

ಪರೀಕ್ಷಾ ಹಾಲ್‌ಗೆ ನೀರಿನ ಬಾಟಲಿಗಳು, ಸಣ್ಣ ಹ್ಯಾಂಡ್ ಸ್ಯಾನಿಟೈಸರ್ ಬಾಟಲಿಗಳು ಮತ್ತು ಫೇಸ್ ಮಾಸ್ಕ್‌ಗಳನ್ನು ಕೊಂಡೊಯ್ಯಲು ಅಭ್ಯರ್ಥಿಗಳಿಗೆ ಅನುಮತಿ ಇದೆ.

ಅಭ್ಯರ್ಥಿಗಳು ಪರೀಕ್ಷಾ ಹಾಲ್‌ಗೆ ಎರಡು ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರಗಳನ್ನು ತರಬೇಕು. ಪ್ರವೇಶ ಕಾರ್ಡ್‌ನಲ್ಲಿ ಮುದ್ರಿತ ಫೋಟೋ ಅಸ್ಪಷ್ಟವಾಗಿದ್ದರೆ ಮಾತ್ರ ಈ ಛಾಯಾಚಿತ್ರಗಳನ್ನು ಬಳಸಲಾಗುತ್ತದೆ ಎಂದು ಸೂಚಿಸಲಾಗಿದೆ.

ಇದನ್ನೂ ಓದಿ: Bali Temple: ದೇವಸ್ಥಾನಕ್ಕೆ ಎಂಟ್ರಿ ಕೊಟ್ಟು ಬೆತ್ತಲೆ ಓಡಾಡಿದ ಹುಡುಗಿ!

Leave A Reply

Your email address will not be published.